ಚಾಲಕನ ನಿಯಂತ್ರಣ ತಪ್ಪಿದ ಸ್ಲೀಪರ್ ಬಸ್ಸೊಂದು ಮೀನೂಟದ ಹೊಟೇಲಿಗೆ ಡಿಕ್ಕಿ ಹೊಡೆದ ಘಟನೆ ಹಿರಿಯಡಕದ ಓಂತಿಬೆಟ್ಟು ಸಮೀಪ ನಡೆದಿದೆ.

ಉಡುಪಿ ಕಡೆಯಿಂದ ಹಿರಿಯಡ್ಕ ಕಡೆ ಹೋಗುತ್ತಿದ್ದ ದುರ್ಗಾಂಬ ಕಂಪೆನಿಗೆ ಸೇರಿದ ಸ್ಲೀಪರ್ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಶಮಿತ್ ಹೋಟೆಲ್ ಆವರಣಕ್ಕೆ ಢಿಕ್ಕಿ ಹೊಡೆದಿದೆ. ಹೋಟೆಲ್ ಮಾಡಿಗೆ ವಾಲಿಕೊಂಡು ನಿಂತಿದ್ದು, ಬಸ್‌ನ ಮುಂಭಾಗದ ಚಕ್ರ ಚರಂಡಿಯೊಳಗೆ ಕುಸಿದಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.



