ಜನ ಮನದ ನಾಡಿ ಮಿಡಿತ

ಇತ್ತೀಚಿನ ಸುದ್ದಿ
ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ…! ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು. ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆ…! ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ ಆಗಮಿಸಿ ಚುನಾವಣಾ ಪ್ರಕ್ರಿಯೆಗಳ ಅವಲೋಕನ ನಡೆಸಿದರು. ಸೂರಿಕುಮೇರು: ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್‌ನಲ್ಲಿ ಖಾಸಗಿ ಬಸ್‌ಗೆ ಪಿಕಪ್ ವಾಹನ ಡಿ*ಕ್ಕಿ..! ಉಡುಪಿ: ಹೆಮ್ಮಾಡಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ವ್ಹೀಲಿಂಗ್ ಮಾಡಿದ ಯುವಕನ ಬಂಧನ…!
Advertisement

ಉಳ್ಳಾಲ: ತೊಕ್ಕೊಟ್ಟು ಫೈನಾನ್ಸ್ ನಲ್ಲಿ ನಕಲಿ ಚಿನ್ನ ಅಡಮಾನವಿರಿಸಿ ಸಾಲ ಪಡೆಯಲೆತ್ನಿಸಿದ ತಂಡದ ಬಂಧನ..!

ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಕಲಿ ಚಿನ್ನಾಭರಣವನ್ನು 22 ಕ್ಯಾರೇಟಿನ ಚಿನ್ನವೆಂದು ನಂಬಿಸಿ ಅಡಮಾನ ಇಡುವ ಮೂಲಕ ಸಾಲ ಪಡೆದು ವಂಚನೆ ಮಾಡುತ್ತಿದ್ದ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇವರಿಂದ ಒಟ್ಟು 9 ಕ್ಯಾರೇಟಿನ 141 ಗ್ರಾಂ ನಕಲಿ ಚಿನ್ನಾಭರಣಗಳು, 6 ಮೊಬೈಲ್ ಫೋನ್‌ಗಳು ಹಾಗೂ 47,000 ನಗದು ವಶಪಡಿಸಿಕೊಳ್ಳಲಾಗಿದೆ. ನ.22 ರಂದು ಆರೋಪಿ ನೌಫಾಲ್ ಮತ್ತು ಝಹೀಮ್ ಅಹ್ಮದ್ ಎಂಬವರು ತೊಕ್ಕೊಟ್ಟು ದ್ವಾರಕ ಕಾಂಪ್ಲೆಕ್ಸ್ನ ಗುರು ರಾಘವೇಂದ್ರ ಫೈನಾನ್ಸ್ & ಇನ್ವೆಸ್ಟ್ಮೆಂಟ್ ಸಂಸ್ಥೆಯಲ್ಲಿ 9 ಕ್ಯಾರೇಟಿನ 41 ಗ್ರಾಂ ಚಿನ್ನಾಭರಣವನ್ನು 22 ಕ್ಯಾರೇಟಿನಂತೆ ತೋರಿಸಿ ಝಹೀಮ್ ಅಹ್ಮದ್ ಹೆಸರಿನಲ್ಲಿ 3,55,000 ಸಾಲ ಪಡೆದಿದ್ದರು. ಬಳಿಕ ನ. 24 ರಂದು ಆರೋಪಿ ಇಮ್ತಿಯಾಜ್ ಕೂಡ ಇದೇ ರೀತಿಯ ನಕಲಿ ಚಿನ್ನಾಭರಣವನ್ನು ಅಡಮಾನ ಇರಿಸಲು ಬಂದಾಗ ಸಂಸ್ಥೆಗೆ ಅನುಮಾನ ಉಂಟಾಗಿ ಚಿನ್ನಾಭರಣವನ್ನು ಪರಿಶೀಲಿಸಿದ್ದು ಅದು ನಕಲಿ ಚಿನ್ನ ಎನ್ನುವುದು ಬಹಿರಂಗವಾಗಿದೆ. ಪ್ರಕರಣದ ತನಿಖೆಯಲ್ಲಿ ನ.25 ರಂದು ರಾತ್ರಿ 9 ಗಂಟೆಗೆ ತೊಕ್ಕೊಟ್ಟು ಜಂಕ್ಷನ್ ಬಳಿ ಆರೋಪಿ ಇಮ್ತಿಯಾಜ್ ಮತ್ತು ಝಹೀಮ್ ಅಹ್ಮದ್ ಅವರನ್ನು ವಶಕ್ಕೆ ಪಡೆಯಲಾಗಿದೆ. ನಂತರ ನ.26ರಂದು ಬೆಳಿಗ್ಗೆ ಪಂಪ್‌ವೆಲ್ ಬಳಿಯಲ್ಲಿ ವಿಕ್ರಮ್ ಅಮೃತ್‌ಲಾಲ್ ಬಾಘಾ ಮತ್ತು ಮೊಹಮ್ಮದ್ ಇಸ್ಮಾಯಿಲ್ ಅವರನ್ನು, ಮಂಗಳೂರಿನ ಕೆಪಿಟಿ ಬಳಿ ಮೊಹಮ್ಮದ್ ಬಿಸ್ಟಾ ಹಾಗೂ ಉಮ್ಮರ್ ಫಾರೂಕ್ ಅವರನ್ನು ಬಂಧಿಸಲಾಗಿದೆ. ಬಂಧಿತ ವಿಕ್ರಮ್ ಅಮೃತ್‌ಲಾಲ್ ಬಾಘಾ ಅವರ ಬಳಿಯಿಂದ 47,000 ನಗದು, ಉಮ್ಮರ್ ಫಾರೂಕ್ ಅವರಿಂದ 9 ಕ್ಯಾರೇಟಿನ 20 ಗ್ರಾಂ ತೂಕದ ಚಿನ್ನದಂತೆ ಕಾಣುವ ಚೈನ್, ಮೊಹಮ್ಮದ್ ಬಿಸ್ಟಾ ಅವರಿಂದ 25 ಗ್ರಾಂ ತೂಕದ 6 ಉಂಗುರಗಳು, ಝಹೀಮ್ ಅಹ್ಮದ್ ಅಡಮಾನ ಇಟ್ಟಿದ್ದ 41 ಗ್ರಾಂ ಚೈನ್, ಇಮ್ಮಿಯಾಜ್ ನೀಡಿದ್ದ 55 ಗ್ರಾಂ ಚೈನ್ ಮತ್ತು ಒಂದು ಬ್ರಾಸ್ ಲೈಟ್ ವಶಪಡಿಸಿಕೊಳ್ಳಲಾಗಿದೆ. ಘಟನೆಯಲ್ಲಿ ಬಳಸಲಾಗಿದ್ದ 9 ಕ್ಯಾರೇಟಿನ ನಕಲಿ ಚಿನ್ನಾಭರಣಗಳನ್ನು ಪೂರೈಕೆ ಮಾಡುವ ಪ್ರಮುಖ ಆರೋಪಿ ವಿಕ್ರಮ್ ಅಮೃತ್‌ಲಾಲ್ ಬಾಘಾ ಎಂಬಾತನ ಪಾತ್ರವೂ ತನಿಖೆಯಿಂದ ಬಹಿರಂಗವಾಗಿದ್ದು, ಆರೋಪಿಗಳ ಮೇಲಿನ ಮುಂದಿನ ತನಿಖೆ ಪ್ರಗತಿಯಲ್ಲಿದೆ.

Leave a Reply

Your email address will not be published. Required fields are marked *

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ…!

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು.

ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆ…!

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ ಆಗಮಿಸಿ ಚುನಾವಣಾ ಪ್ರಕ್ರಿಯೆಗಳ ಅವಲೋಕನ ನಡೆಸಿದರು.

ಸೂರಿಕುಮೇರು: ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್‌ನಲ್ಲಿ ಖಾಸಗಿ ಬಸ್‌ಗೆ ಪಿಕಪ್ ವಾಹನ ಡಿ*ಕ್ಕಿ..!

ಉಡುಪಿ: ಹೆಮ್ಮಾಡಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ವ್ಹೀಲಿಂಗ್ ಮಾಡಿದ ಯುವಕನ ಬಂಧನ…!

ಉಡುಪಿ: ನಾವುಂದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರು ಮತ್ತು ಟ್ರಕ್ ನಡುವೆ ಭೀಕರ ಅಪಘಾತ….!

ಪುಂಜಾಲಕಟ್ಟೆ: ಪುಂಜಾಲಕಟ್ಟೆಯ ಬಸವನಗುಡಿ ಎಂಬಲ್ಲಿ ಸ್ಕೂಟರ್‌ಗೆ ಕೆ.ಎಸ್ ಆರ್ ಟಿಸಿ ಬಸ್ ಡಿ*ಕ್ಕಿ….!

ನಾಟೇಕಲ್: ಮನೆ ಗೋಡೆಗೆ ಹಾರಿ ಬಡಿದ ಕಾರು; ಪಾರಾದ ಪ್ರಯಾಣಿಕರು….!

error: Content is protected !!