ಮಂಗಳೂರಿನ ಎಮ್ಮೆ ಕೆರೆ ಈಜುಕೊಳದಲ್ಲಿ ತರಬೇತಿ ಪಡೆಯುತ್ತಿರುವ ಸಹೋದರರು ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಅವಳಿ ಚಿನ್ನ ಗೆದ್ದಿದ್ದಾರೆ.

ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ಇದರ ಆಶ್ರಯದಲ್ಲಿ ಜರಗುತ್ತಿರುವ 69ನೇ ರಾಷ್ಟ್ರಮಟ್ಟದ ಸ್ಕೂಲ್ ಗೇಮ್ಸ್ ಈಜು ಸ್ಪರ್ಧೆಯ ಮೊದಲ ಎರಡು ದಿನಗಳಲ್ಲಿ ಮೂರು ಚಿನ್ನದ ಪದಕಗಳನ್ನು ಬಾಚಿದ ಮಂಗಳೂರಿನ ವಿ. ಒನ್ ಎಕ್ವಾ ಸೆಂಟರ್‌ನ ಈಜು ಪಟುಗಳು. ನಾಲ್ನೂರು ಮೀಟರ್ ಫ್ರೀ ಸ್ಟೆöÊಲ್ ಸ್ಪರ್ಧೆಯಲ್ಲಿ 19ರ ವಯೋಮಾನದ ವಿಭಾಗದಲ್ಲಿ ಎಂ ತೀರ್ದು ಸಾಮದೇವ ಇವರು ಚಿನ್ನದ ಪದಕವನ್ನು ಗಳಿಸಿದ್ದಾರೆ. 17ರ ವಯೋಮಾನದ ವಿಭಾಗದಲ್ಲಿ 400 ಮೀಟರ್ ಫ್ರೀ ಸ್ಟೆöÊಲ್ ಸ್ಪರ್ಧೆಯಲ್ಲಿ ಯಗ್ನ ಸಾಯಿಯವರು ಚಿನ್ನದ ಪದಕ ಪಡೆದರು ಇವರು ಮೊದಲ ದಿನದ ಸ್ಪರ್ಧೆಯಲ್ಲಿ 800 ಮೀಟರ್ ಫ್ರೀ ಸ್ಟೆöÊಲಲ್ಲಿ ಕೂಡ ಚಿನ್ನದ ಪದಕ ಗಳಿಸಿದ್ದಾರೆ.



