ಎಲ್ಲರ ಬಾಳಲ್ಲೂ ಮದುವೆ ಅನ್ನೋದು ಸಂಭ್ರಮದ ದಿನ. ಈ ದಿನಕ್ಕಾಗಿ ವರ್ಷಾನುಗಟ್ಟಲೇ ಕನಸು ಕಂಡಿರುತ್ತಾರೆ. ಆ ಒಂದು ದಿನಕ್ಕಾಗಿ ಗಂಡು-ಹೆಣ್ಣು ಕನಸಿನ ಸರಮಾಲೆಯನ್ನೇ ಕಟ್ಟಿಕೊಂಡಿರುತ್ತಾರೆ. ಆದ್ರೆ ಜವರಾಯನ ಆಟದ ಮುಂದೆ ಯಾವುದು ಶಾಶ್ವತ ಅಲ್ಲ ಅನ್ನೋದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ.
ಶಿವಮೊಗ್ಗದ ಭದ್ರಾವತಿಯ ಹನುಮಂತಪುರ ವಾಸಿ ರಮೇಶ್ ಹರಪನಹಳ್ಳಿಯ ಬಂಡಿ ಮೂಲದ ಯುವತಿ ಜೊತೆ ಮದುವೆ ನಿಶ್ಚಯವಾಗಿತ್ತು. ಆದರೆ ಮದುವೆ ಆಗಿ 24 ಗಂಟೆ ಕಳೆಯುವ ಮೊದಲೇ ಮದುವೆ ಮನೆಯಲ್ಲಿ ಸೂತಕ ಆವರಿಸಿದೆ. ಶಿವಮೊಗ್ಗದ ಭದ್ರಾವತಿಯ ಹನುಮಂತಪುರ ನಿವಾಸಿ ಮೃತ ರಮೇಶ್‌ಗೆ ಹರಪನಹಳ್ಳಿಯ ಬಂಡಿ ಮೂಲದ ಯುವತಿ ಜೊತೆ ನವೆಂಬರ್ 30ರಂದು ಶಿವಮೊಗ್ಗದಲ್ಲಿ ವಿವಾಹ ನೆರವೇರಿರುತ್ತೆ. ಮದುವೆ ಬಳಿಕ ಆರತಕ್ಷತೆಗಾಗಿ ಮೃತ ರಮೇಶ್ ಬಂಡ್ರಿಗೆ ತೆರಳಿರುತ್ತಾರೆ. ಈ ವೇಳೆ ದೇವಸ್ಥಾನದಿಂದ ಮನೆವರಿಗೂ ವಧು-ವರರ ಮೆರವಣಿಗೆ ನಡೆದು ನವ ದಂಪತಿ ದೇವರ ದರ್ಶನ ಪಡೆಯಲು ಹೋಗ್ತಿರ್ತಾರೆ. ಇನ್ನೇನು ದೇವರಿಗೆ ಕೈ ಮುಗಿದು ವಾಪಸ್ ಮನೆಗೆ ತೆರಳುವಾಗ ರಮೇಶ್ ಕುಸಿದುಬಿದ್ದಿದ್ದಾನೆ. ತಕ್ಷಣವೇ ಆತನನ್ನ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗುತ್ತದೆ. ಆದ್ರೆ, ಅಷ್ಟರಲ್ಲೇ ಹೃದಯಾಘಾತದಿಂದ ರಮೇಶ್ ಸಾವನ್ನಪ್ಪಿದ್ದಾನೆ.
ಮಂಗಳೂರಿನ ಪ್ರಸಿದ್ಧ ಕ್ರಿಯಾಶೀಲ ರಂಗತಂಡ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ವರ್ಷಂಪ್ರತಿ ಕೊಡಮಾಡುವ ರಂಗಭಾಸ್ಕರ ಪ್ರಶಸ್ತಿಯನ್ನು ಈ ಬಾರಿ ಪ್ರತಿಭಾನ್ವಿತ ಹಿರಿಯ…
ವಿದ್ಯುತ್ ಆಘಾತಕ್ಕೊಳಗಾಗಿ ಹೆಣ್ಣು ನವಿಲೊಂದು ದಾರುಣವಾಗಿ ಮೃತಪಟ್ಟ ಘಟನೆ ಇಂದು ಮುಂಜಾನೆ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಪಿಲಾರು ಮಹಾಲಕ್ಷ್ಮಿ ಮಂದಿರದ…
ಸರಕಾರಿ ಪ್ರೌಢ ಶಾಲೆ, ಮಂಚಿ - ಕೊಳ್ನಾಡು ಮತ್ತು ಹಿರಿಯ ವಿದ್ಯಾರ್ಥಿ ಸಂಘ ಮಂಚಿ ಕೊಳ್ನಾಡು ಇವರ ಸಂಯುಕ್ತ ಆಶ್ರಯದಲ್ಲಿ…
2026-27 ನೇ ಶೈಕ್ಷಣಿಕ ವರ್ಷದಲ್ಲಿ ಬಂಟ್ವಾಳ ತಾಲೂಕಿನ ಎರಡು ಸರಕಾರಿ ಶಾಲೆಯಲ್ಲಿ ಶೂನ್ಯ ದಾಖಲಾತಿಯಾಗಿದ್ದು, ಎರಡು ಶಾಲೆಗಳು ಮುಚ್ಚುವ ಭೀತಿಯನ್ನು…
ಮುಡಿಪು-ಬಿ. ಸಿ. ರೋಡ್ ರಸ್ತೆಯ ಸಜಿಪ ಎಂಬಲ್ಲಿ ಕಾರು ಮತ್ತು ಆಕ್ಟಿವಾ ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ…
ಎಂಆರ್‌ಜಿ ಸಮೂಹದ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ಡಾ. ಕೆ. ಪ್ರಕಾಶ್ ಶೆಟ್ಟಿ ಅವರು ತಮ್ಮ ಉದ್ಯಮ ಸಮೂಹಕ್ಕೆ ಖಾಸಗಿ ವಿಮಾನವನ್ನು…