ಮಂಗಳೂರು ಇಲ್ಲಿನ ಕೆನರಾ ವಿಕಾಸ್ ಪದವಿಪೂರ್ವ ಕಾಲೇಜಿನಲ್ಲಿ ದಿನಾಂಕ 27-7-2023 ರಂದು ವಿದ್ಯಾರ್ಥಿ ಸಂಘ ಉದ್ಘಾಟನೆಗೊಂಡಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೆನರಾ ಹೈಸ್ಕೂಲ್ ಅಸೋಸಿಯೇಷನ್ ನ ಆಡಳಿತ ಮಂಡಳಿ ಸದಸ್ಯ ಹಾಗೂ ಕೆನರಾ ವಿಕಾಸ್ ಸಮೂಹ ಸಂಸ್ಥೆಯ ಸಂಯೋಜಕ ಶ್ರೀಯುತ ಬಸ್ತಿ ಪುರುಷೋತ್ತಮ ಶೆಣೈ ಮಾತನಾಡುತ್ತ ವಿವಿಧ ಕ್ಲಬ್ ಗ ಳ ಯೋಜನೆ ಸಿದ್ಧಪಡಿಸಿದ ನಾಯಕರ ಕೆಲಸವನ್ನು ಹೊಗಳಿದರು.
ತಮ್ಮ ಕೆಲಸಗಳಲ್ಲಿ ಸೋಲನ್ನು ಅನುಭವಿಸಿದರೆ ನಾಯಕರು ಅದನ್ನು ನಿಭಾಯಿಸಬೇಕು. ಯಶಸ್ಸನ್ನು ಹೊಂದಿದರೆ ಎಲ್ಲಾ ಸದಸ್ಯರಿಗೆ ಅದನ್ನು ಹಂಚಬೇಕು ಎಂದರು.ಕೆನರಾ ಹೈಸ್ಕೂಲ್ ಅಸೋಸಿಯೇಷನ್ ನ ಖಜಾಂಚಿ ಮತ್ತು ಕೆನರಾ ವಿಕಾಸ್ ಸಮೂಹ ಸಂಸ್ಥೆಗಳ ಸಂಚಾಲಕರಾದ ಶ್ರೀ. ಸಿಎ ಎಂ. ವಾಮನ್ ಕಾಮತ್ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡುತ್ತಾ, ಕಾಲೇಜು ಸೇರಿದಂತೆ ಎಲ್ಲಾ ಕಡೆ ವಿವಿಧತೆಯಲ್ಲಿ ಏಕತೆಯನ್ನು ನೋಡುತ್ತಿದ್ದೇವೆ. ಪರಸ್ಪರ ಸಹಕಾರದೊಂದಿಗೆ ಪ್ರಜಾಪ್ರಭುತ್ವ ಸಿದ್ಧಾಂತವನ್ನು ಎತ್ತಿ ಹಿಡಿಯಬೇಕು ಎಂದರು.

ಕೆನರಾ ವಿಕಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಐಶ್ವರ್ಯ ಕೆ ವಿದ್ಯಾರ್ಥಿ ನಾಯಕರು ಹಾಗೂ ವಿವಿಧ ಸಂಘದ ಮುಖ್ಯಸ್ಥರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.ಕೆನರಾ ವಿಕಾಸ್ ಸಂಸ್ಥೆಯ ಕ್ಯಾಂಪಸ್ ಸಂಯೋಜಕರಾದ ಶ್ರೀ. ಪಾರ್ಥ ಸಾರಥಿ ಜೆ. ಪಾಲೆಮಾರ್, ಕೆನರಾ ವಿಕಾಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಸುಗುಣಾ ನಾಯಕ್ ಮತ್ತು ಸಿಬ್ಬಂದಿಗಳು, ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಮುಖಂಡರಾದ ಹಿತೇಶ್ ಸ್ವಾಗತಿಸಿದರು. ಅನಂತ್ ವಂದಿಸಿದರು. ವಿದ್ಯಾರ್ಥಿನಿ ಪ್ರಮಿತಿ ನಿರೂಪಿಸಿದರು.






