ಕಲ್ಲು, ಡಾಂಬರ್, ಸಿಮೆಂಟ್ ಗೆ ಬೆಲೆಯಿದೆ ಆದರೆ ಆರೋಗ್ಯಕ್ಕೆ ಬೆಲೆ ಇಲ್ಲವೇ ಎಂದು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ವಿವಿಧ ಆರೋಗ್ಯ ಯೋಜನೆಗಳ ಎಂಪ್ಯಾನೆಲ್ ಆಸ್ಪತ್ರೆಗಳಲ್ಲಿ ವಿವಿಧ ಚಿಕಿತ್ಸೆಗಳಿಗೆ ಸಿ.ಜಿ.ಎಚ್.ಎಸ್ ದರಗಳನ್ನು ಸರಿಯಾಗಿ ಪರಿಷ್ಕರಿಸದೇ ಇರುವುದರಿಂದ ತೊಂದರೆಯಾಗಿದೆ. ಪರಿಷ್ಕರಣೆ ಮಾಡದಿರಲು ಕಾರಣವೇನು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಡಾ.ಧನಂಜಯ ಸರ್ಜಿ ಪ್ರಶ್ನಿಸಿದರು.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಾತನಾಡಿದ ಅವರು ಸಿ.ಜಿ.ಎಚ್.ಎಸ್ ದರ ಪರಿಸ್ಕರಣೆಯಾಗಿ ಸಿಸೇರಿಯನ್ ಹೆರಿಗೆಗೆ 38,040, ನಾರ್ಮಲ್ ಹೆರಿಗೆಗೆ 26, 775 ನಿಗದಿಯಾಗಿದ್ದರೆ. ರಾಜ್ಯದ ಯಶಸ್ವಿನಿ ಯೋಜನೆ, ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಕೇವಲ 13,000 ದಿಂದ 14,000 ಮಾತ್ರ ಇದೆ, ನಿಗದಿ ದರಕ್ಕಿಂತ ಮೂರೂ ಪಟ್ಟು ಕಡಿಮೆ ಇದೆ. ಆಂಜಿಯೋಪ್ಲಾಸ್ಟಿಗೆ ಪರಿಷ್ಕೃತ ದರ ಸ್ಟಂಟ್ ಇಲ್ಲದೆ 74,205 ರೂ. ಇದೆ, ಚಿಕಿತ್ಸೆಯಲ್ಲಿ ಸ್ಟಂಟ್ ಸೇರಿದರೆ 1 ಲಕ್ಷ ರೂ. ಆಗುತ್ತದೆ. ಆದರೆ ಬೇರೆ ಯೋಜನೆಯಡಿ 60,000 ಇದೆ. ಹೃದಯ ಬೈ ಪಾಸ್ ಸರ್ಜರಿಗೆ 1 ಲಕ್ಷದ 80 ಸಾವಿರ ಇದ್ದರೆ ಯಶಸ್ವಿನಿ, ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಸಿ.ಜಿ.ಎಚ್.ಎಸ್ ದರ 1 ಲಕ್ಷ ರೂ ಗಳನ್ನು ರಾಜ್ಯ ಸರ್ಕಾರ ನಿಗದಿಪಡಿಸಿದೆ. ಇದರಿಂದ ಚಿಕಿತ್ಸೆ ಕೊಡುವ ಆಸ್ಪತ್ರೆಗಳಿಗೆ ಅನ್ಯಾಯವಾಗುತ್ತದೆ. ಕಲ್ಲು ಡಾಂಬರ್, ಸಿಮೆಂಟ್ ಕುಡಿಯುವ ನೀರಿನ ಘಟಕ, ಕಂಪ್ಯೂಟರ್ ಪ್ರತಿಯೊಂದು ವಸ್ತುವನ್ನು ಕೊಳ್ಳಬೇಕಾದರೆ ಅದಕ್ಕೆ ಎಸ್.ಆರ್ ಬೆಲೆ ಇರುತ್ತದೆ, ಆರೋಗ್ಯಕ್ಕೆ ಯಾಕೆ ಎಸ್.ಆರ್ ಬೆಲೆ ಇಲ್ಲ ಎಂದು ಪ್ರಶ್ನಿಸಿದರು. ಮುಂದುವರೆದು ರಾಜ್ಯ ಸರ್ಕಾರ ಮತ್ತು ಆರೋಗ್ಯ ಇಲಾಖೆ ರಾಜ್ಯ ಸರ್ಕಾರ ಆರೋಗ್ಯ ಯೋಜನೆಗಳಿಗೆ ಪರಿಷ್ಕೃತ ದರದ ಪ್ರಕಾರ ಸಿ.ಜಿ.ಎಚ್.ಎಸ್ ದರವನ್ನು ನಿಗದಿ ಮಾಡಬೇಕು, ಯಶಸ್ವಿನಿ ಯೋಜನೆಗೆ ರಾಜ್ಯ ಸರ್ಕಾರದಿಂದ 60 ರಿಂದ 70 ಕೋಟಿ ಅನುದಾನ ಬಂದರೇ ಯಶಸ್ವಿನಿ ಫಲಾನುಭವಿಗಳಿಗೆ ಉಪಯೋಗವಾಗುತ್ತದೆ, ಈ ಬಗ್ಗೆ ಮುಖ್ಯಮಂತ್ರಿಗಳಿಗೂ ಮತ್ತು ಆರೋಗ್ಯ ಸಚಿವರಿಗೂ ಮನವಿ ಬಂದಿದೆ. ಸಾರಿಗೆ ಇಲಾಖೆಗಳಿಗೆ ಮತ್ತು 70 ವರ್ಷ ಮೇಲ್ಪಟ್ಟವರಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ಕೊಡಬೇಕು ಎಂದು ಕೇಂದ್ರ ಸರ್ಕಾರದಿಂದ ಪ್ರಸ್ತಾವನೆ ಬಂದಿದೆ ಆದರೆ ರಾಜ್ಯ ಸರ್ಕಾರಿಂದ 70 ವರ್ಷ ಮೇಲ್ಪಟ್ಟವರಿಗೆ ಈ ಯೋಜನೆ ಜಾರಿ ಆಗಿಲ್ಲ ಎಂದವರು ಯೋಜನೆಯ ಕುಂದುಕೊರತೆಗಳತ್ತ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಸಚಿವರು ನಮ್ಮ ಸರ್ಕಾರವು ಕೂಡ ಗೃಹ ಇಲಾಖೆ, ಕಾರ್ಮಿಕ ಇಲಾಖೆಗಳಲ್ಲಿ ಮತ್ತು ಸರ್ಕಾರಿ ನೌಕರರಿಗೂ ಸಿ.ಜಿ.ಎಚ್.ಎಸ್ ದರವನ್ನು ಅಳವಡಿಸಿಕೊಂಡಿದೆ, ಯಶಸ್ವಿನಿ ಯೋಜನೆಗೆ ಸಹಕಾರ ಇಲಾಖೆ ಅನುಮೋದನೆ ನೀಡಬೇಕು, ಮತ್ತು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಗೆ ನಾವು ಸಿ.ಜಿ.ಎಚ್.ಎಸ್ ದರದ ಬದಲು ಹೆಚ್.ಬಿ.ಪಿ (ಹೆಲ್ತ್ ಬೆನಿಫಿಟ್ ಪ್ಯಾಕೇಜ್ ) ದರದ ಪ್ರಕಾರ 2014ರ ನಿಗದಿಯಂತೆ ನೀಡುತಿದ್ದೇವೆ. ಹೆಚ್ಚಿನ ದರವನ್ನು ನೀಡಲು ಹಣದ ಕೊರತೆ ಇದೆ ಹೆಚ್.ಬಿ.ಪಿ (ಹೆಲ್ತ್ ಬೆನಿಫಿಟ್ ಪ್ಯಾಕೇಜ್) ದರವನ್ನು 2022 ರ ದರಕ್ಕೆ ತೆಗೆದುಕೊಂಡು ಬರಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು.
ತಾಲೂಕಿನ ವಿವಿಧೆಡೆ ಚಿರತೆ ಓಡಾಟ ಕಂಡುಬಂದಿರುವ ಬಗ್ಗೆ ಸ್ಥಳೀಯರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಎರಡು ಕಡೆ ಬೋನು…
ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಮಾಡೂರು ಯೂಸುಫ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳಿಗೆ ಮಂಗಳೂರಿನ ಎರಡನೇ ಹೆಚ್ಚುವರಿ…
ಪತಿಯ ಸ್ನೇಹಿತೆಯ ಮೇಲೆ ಅತ್ಯಾಚಾರ ನಡೆಸಲು ಸುಪಾರಿ ನೀಡಿದ ಆರೋಪದಲ್ಲಿ ಮಹಿಳೆಯೊಬ್ಬಳನ್ನು ಸೇರಿ ಐವರನ್ನು ಪೊಲೀಸರು ಬಂಧಿಸಿರುವ ಘಟನೆ ಕೇರಳದ…
ಕೊಲ್ಲೂರು ಠಾಣಾ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿದ್ದ ಬೀಡಾಡಿ ದನವನ್ನು ಬಿಳಿ ಬಣ್ಣದ ಸ್ವೀಫ್ಟ್ ಡಿಸೈರ್ ಕಾರಿನಲ್ಲಿ ಹಿಂಸಾತ್ಮಕವಾಗಿ ಎಳೆದುಕೊಂಡು ಹೋದ…
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್ ಹಾಗೂ ಜನಜಾಗೃತಿ ವೇದಿಕೆ ಟ್ರಸ್ಟ್ ದಕ್ಷಿಣ ಕನ್ನಡ ಜಿಲ್ಲೆ ಇದರ…
ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಮಹಾತ್ಮ ಗಾಂಧೀಜಿಯವರ 157ನೇ ಜನ್ಮದಿನದ ಅಂಗವಾಗಿ ಶುಕ್ರವಾರ ನಗರದ ರಾಜಾಜಿ…