ಮನುಷ್ಯನ ಮನಸ್ಸು ಮಾನವ ಮಾಂಸ ತಿನ್ನುತ್ತಿದ್ದ ಆದಿ ಮಾನವನ ಕಾಲಕ್ಕೆ ಹಿಂಪಯಣ ಮಾಡಿದೆಯೋ ಏನೋ ಎನ್ನುವಂತಹ ಘಟನೆ ಹಾಸನದಲ್ಲಿ ನಡೆದಿದೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ ಗಾಂಜಾ ವ್ಯಸನಿ ಓರ್ವನನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ.

ಮತ್ತು ಅದನ್ನು ವೀಡಿಯೋ ಕೂಡಾ ಮಾಡಿದ್ದಾನೆ. ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿ ಶವದ ಎದುರು ಸೆಲ್ಫಿ ವೀಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹರಿಯ ಬಿಟ್ಟಿದ್ದಾನೆ. ಕಲ್ಲು ಎತ್ತಿಹಾಕಿ ಯುವಕನನ್ನು ಕೊಲೆ ಮಾಡಿದ್ದೇವೆ ಎಂದು ವಿಡಿಯೋದಲ್ಲಿ ಹೇಳಿದ್ದಾನೆ. ಕೃತ್ಯ ಮಾಡಿರುವುದಕ್ಕೆ ಯಾವುದೇ ಪಶ್ಚಾತ್ತಾಪ ಮುಖದಲ್ಲಿ ಇಲ್ಲ. ನೋಡಿ ನಾವು ಇವನನ್ನು ಸಾಯಿಸಿದ್ದೇವಿ ಎಂದು ಶವ ತೋರಿಸಿಕೊಂಡು ಸೆಲ್ಫಿ ವಿಡಿಯೋ ಮಾಡಿದ್ದಾನೆ ಆರೋಪಿ. ಇನ್ನು ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.



