ಬಿಸಿರೋಡಿನ ಟ್ರಾಫಿಕ್ ಪಾಯಿಂಟ್‌ನಲ್ಲಿ ಕರ್ತವ್ಯ ನಿರತರಾಗಿದ್ದ ಸಿಬ್ಬಂದಿಗೆ ಒಂದೇ ದಿನ ಬೆಲೆಬಾಳುವ ಮೊಬೈಲ್ ಹಾಗೂ ಪರ್ಸ್ ಬಿದ್ದು ಸಿಕ್ಕಿದ್ದು, ಎರಡು ವಸ್ತುಗಳನ್ನು ವಾರಸುದಾರರಿಗೆ ವಾಪಸು ನೀಡಿದ ಘಟನೆ ನಡೆದಿದೆ.
ಬಿಸಿರೋಡಿನ ಬಸ್ ನಿಲ್ದಾಣದಲ್ಲಿ ಕರ್ತವ್ಯ ಮಾಡುತ್ತಿದ್ದ ಬಿಸಿರೋಡು ಟ್ರಾಫಿಕ್ ಪೋಲೀಸ್ ಠಾಣೆಯ ಸಿಬ್ಬಂದಿ ಎ ಎಸ್ ಸಂಗೊಳ್ಳಿ ಅವರಿಗೆ ವಿವೋ ಕಂಪೆನಿಯ ಮೊಬೈಲ್ ಹಾಗೂ ದಾಖಲೆಗಳಿದ್ದ ಪರ್ಸ್ ಬಿದ್ದು ಸಿಕ್ಕಿತ್ತು. ಎರಡು ವಸ್ತುಗಳ ದಾಖಲೆಗಳನ್ನು ಪರಿಶೀಲಿಸಿ ಮಾಲಕರನ್ನು ಸಂಪರ್ಕ ಮಾಡಿದ ಸಂಗೊಳ್ಳಿ ಅವರು ಎರಡು ವಸ್ತುಗಳನ್ನು ಸೇಫ್ ಆಗಿ ಹಿಂತಿರುಗಿಸುವ ಕಾರ್ಯ ಮಾಡಿದ್ದಾರೆ.
ಕರ್ತವ್ಯದ ಒತ್ತಡದ ನಡುವೆ ಬಿದ್ದು ಸಿಕ್ಕಿದ ವಸ್ತುಗಳನ್ನು ಪ್ರಾಮಾಣಿಕವಾಗಿ ಮರಳಿಸಿದ ಪೋಲೀಸ್ ಸಿಬ್ಬಂದಿಗೆ ಮಾಲಕರು ಧನ್ಯವಾದ ಹೇಳಿದ್ದಾರೆ.
ತಾಲೂಕಿನ ವಿವಿಧೆಡೆ ಚಿರತೆ ಓಡಾಟ ಕಂಡುಬಂದಿರುವ ಬಗ್ಗೆ ಸ್ಥಳೀಯರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಎರಡು ಕಡೆ ಬೋನು…
ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಮಾಡೂರು ಯೂಸುಫ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳಿಗೆ ಮಂಗಳೂರಿನ ಎರಡನೇ ಹೆಚ್ಚುವರಿ…
ಪತಿಯ ಸ್ನೇಹಿತೆಯ ಮೇಲೆ ಅತ್ಯಾಚಾರ ನಡೆಸಲು ಸುಪಾರಿ ನೀಡಿದ ಆರೋಪದಲ್ಲಿ ಮಹಿಳೆಯೊಬ್ಬಳನ್ನು ಸೇರಿ ಐವರನ್ನು ಪೊಲೀಸರು ಬಂಧಿಸಿರುವ ಘಟನೆ ಕೇರಳದ…
ಕೊಲ್ಲೂರು ಠಾಣಾ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿದ್ದ ಬೀಡಾಡಿ ದನವನ್ನು ಬಿಳಿ ಬಣ್ಣದ ಸ್ವೀಫ್ಟ್ ಡಿಸೈರ್ ಕಾರಿನಲ್ಲಿ ಹಿಂಸಾತ್ಮಕವಾಗಿ ಎಳೆದುಕೊಂಡು ಹೋದ…
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್ ಹಾಗೂ ಜನಜಾಗೃತಿ ವೇದಿಕೆ ಟ್ರಸ್ಟ್ ದಕ್ಷಿಣ ಕನ್ನಡ ಜಿಲ್ಲೆ ಇದರ…
ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಮಹಾತ್ಮ ಗಾಂಧೀಜಿಯವರ 157ನೇ ಜನ್ಮದಿನದ ಅಂಗವಾಗಿ ಶುಕ್ರವಾರ ನಗರದ ರಾಜಾಜಿ…