ಕನ್ಯಾನ ಕೆಳಗಿನ ಪೇಟೆಯಲ್ಲಿರುವ ದಿ.ಕಲ್ಕಾರ್ ಇಸ್ಮಾಯಿಲ್ ಕುಟುಂಬದ ಎರಡು ಬಾಡಿಗೆ ಮನೆಗಳು ಬೆಂಕಿಗಾಹುತಿಯಾಗಿವೆ.

ಸಾರ್ವಜನಿಕರು ಕೂಡಲೇ ನಂದಿಸಿದ್ದು ಹೆಚ್ಚಿನ ಅನಾಹುತ ತಪ್ಪಿದೆ. ಮನೆಯಲ್ಲಿ ಯಾರೂ ಇರಲಿಲ್ಲ. ಬೆಂಕಿಗೆ ಕಾರಣ ತಿಳಿದುಬಂದಿಲ್ಲ. ಅಗ್ನಿಶಾಮಕ ದಳದವರು ಆಗಮಿಸಿ, ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿ ತೆರಳಿದ್ದಾರೆ.



