ದೆಹಲಿಯಲ್ಲಿ ಜನರು ಬೆಚ್ಚಿಬೀಳಿಸುವ ಆತಂಕಕಾರಿ ಘಟನೆಯೊಂದು ವರದಿಯಾಗಿದೆ. ಮನೆಯ ಎದುರೇ ಕುಳಿತಿದ್ದ ವೃಧ್ಧೆಯ ಮೇಲೆ ಕೋತಿಗಳು ದಾಳಿ ಮಾಡಿರುವ ಘಟನೆ ದೆಹಲಿಯ ಬಾತ್ರಾ ಕಾಲೋನಿಯಲ್ಲಿ ನಡೆದಿದೆ.
ಈ ಸಂದರ್ಭದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವೃಧ್ಧೆಯು ಮನೆಯ ಮುಂದೆ ಕುರ್ಚಿಯಲ್ಲಿ ಕುಳಿತ್ತಿದ್ದು, ಆ ವೇಳೆ ಕೋತಿಗಳ ಗುಂಪು ಹತ್ತಿರದಲ್ಲಿ ಚಲಿಸಿಕೊಂಡು ಬಂದು ಸ್ವಲ್ಪ ಸಮಯದ ನಂತರ, ಒಂದು ಕೋತಿ ತಕ್ಷಣ ದೂರ ಸರಿದು, ಮಹಿಳೆಯ ಕಡೆಗೆ ಓಡಿ ಬಂದು ಆಕೆಯ ದೇಹದ ಕೆಳಭಾಗಕ್ಕೆ ಕಚ್ಚುತ್ತದೆ. ಬಳಿಕ ಇಡೀ ಹಿಂಡು ಮಹಿಳೆಯ ತಲೆ, ಕಾಲುಗಳ ಮೇಲೆ ದಾಳಿ ಮಾಡಿದೆ.
ಆತಂಕಗೊಂಡ ಆ ಮಹಿಳೆ ಸ್ವಲ್ಪ ಹೊತ್ತು ಒದ್ದಾಡುತ್ತಿದ್ದಾಗ ಒಂದು ಕೋತಿ ಬಂದು ಆಕೆಯ ತಲೆ ಹಿಡಿದುಕೊಂಡಿದ್ದು, ಬಳಿಕ ತಕ್ಷಣ ಬಿಟ್ಟು ಓಡಿಹೋಗಿದೆ. ಕೋತಿಗಳ ದಾಳಿಯ ಪರಿಣಾಮ ಮಹಿಳೆಗೆ ಮೂರು ಕಡಿತದ ಗುರುತುಗಳಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಉಡುಪಿ ನಗರದ ಹನುಮಾನ್ ಪೆಟ್ರೋಲ್ ಬಂಕ್ ಹಿಂಭಾಗ ನಿಲ್ಲಿಸಿದ್ದ ಶ್ರೀ ದುರ್ಗಾಂಬ ಬಸ್‌ವೊಂದು ಕಳವಾಗಿರುವ ಘಟನೆ ಸೆ.29ರಂದು ಬೆಳಕಿಗೆ ಬಂದಿದ್ದು,…
ಮಂಗಳೂರು ವಿಶ್ವವಿದ್ಯಾನಿಲಯದ 16 ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು 2026-27ನೇ ಶೈಕ್ಷಣಿಕ ಸಾಲಿನಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕೋರ್ಸ್‌ಗಳನ್ನು ಮುಂದುವರಿಸಲು ಅಗತ್ಯವಿರುವಷ್ಟು ವಿದ್ಯಾರ್ಥಿಗಳು…
ಮಂಗಳೂರು ಮತ್ತು ಉಡುಪಿ ಸೇರಿದಂತೆ ಕರಾವಳಿ ಕರ್ನಾಟಕ ಭಾಗದಲ್ಲಿ ಕರ್ನಾಟಕ ಹೈಕೋರ್ಟ್‌ನ ಸರ್ಕ್ಯೂಟ್ ಬೆಂಚ್ ಅಥವಾ ಶಾಶ್ವತ ಪೀಠ ಸ್ಥಾಪಿಸುವ…
ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಪ್ರಯಾಣಿಸುತ್ತಿದ್ದ ಕಾರಿಗೆ ಗೂಡ್ಸ್ ಆಟೋ ರಿಕ್ಷಾ ಡಿಕ್ಕಿಯಾಗಿ, ತೀವ್ರವಾಗಿ ಗಾಯಗೊಂಡಿದ್ದ ಆಟೋ…
ನೇಪಾಳದಲ್ಲಿ ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ ಹಾಗೂ ಭೂಕುಸಿತ ಸಂಭವಿಸಿದ್ದು, ಸೆ.24ರಿಂದ ಈವರೆಗೆ ಕನಿಷ್ಠ…
ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಇಬ್ಬರು ಯುವಕರು ಸುವರ್ಣ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಹೆರ್ಮುಂಡೆಯಲ್ಲಿ…