ನವದೆಹಲಿ: ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS)ನ ತಜ್ಞ ವೈದ್ಯರು 9 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಒಂದು ವರ್ಷದ ಸಯಾಮಿ ಶಿಶುಗಳನ್ನು ಯಶಸ್ವಿಯಾಗಿ ಬೇರ್ಪಡಿಸಿದ್ದಾರೆ.
ಉತ್ತರ ಪ್ರದೇಶದ ಬರೇಲಿ ಮೂಲದ ದೀಪಿಕಾ ಮತ್ತು ಅಂಕುರ್ ಗುಪ್ತಾ ಅವರಿಗೆ ರಿದ್ಧಿ ಮತ್ತು ಸಿದ್ಧಿ ಎಂಬ ಅವಳಿ ಹೆಣ್ಣು ಮಕ್ಕಳಿದ್ದರು. ಈ ಮಕ್ಕಳ ಎದೆ ಮತ್ತು ಹೊಟ್ಟೆ ಭಾಗಗಳು ಸೇರಿಕೊಂಡಿದ್ದವು.
ರಿದ್ಧಿ ಮತ್ತು ಸಿದ್ಧಿ ಸುಮಾರು 1 ವರ್ಷದ ಅವಳಿ ಸಹೋದರಿಯರು. ಹುಟ್ಟಿನಿಂದಲೇ ಪರಸ್ಪರ ಅಂಟಿಕೊಂಡಿದ್ದರು. ದೇಹದ ಅನೇಕ ಭಾಗಗಳು ಒಂದಕ್ಕೊಂದು ಸಂಪರ್ಕ ಹೊಂದಿದ್ದವು.
ಬರೇಲಿಯಲ್ಲಿ ದೀಪಿಕಾ ಗುಪ್ತಾ ಅವರ ಗರ್ಭಧಾರಣೆಯ ನಾಲ್ಕನೇ ತಿಂಗಳಲ್ಲಿ ಥೋರಾಕೊ-ಆಂಫಾಲೋಪಾಗಸ್ ಸಂಯೋಜಿತ ಅವಳಿಗಳೆಂದು ಜನನದ ಮೊದಲೇ ಗುರುತಿಸಲಾಗಿತ್ತು. ಕಳೆದ ವರ್ಷ ಜುಲೈ 7ರಂದು ಜನಿಸಿದ ಮಕ್ಕಳು ಐದು ತಿಂಗಳ ಕಾಲ ಐಸಿಯುನಲ್ಲಿದ್ದರು. ಸುದೀರ್ಘ ಶಸ್ತ್ರಚಿಕಿತ್ಸೆಯ ನಂತರ ಜೂನ್ 8ರಂದು ಮಕ್ಕಳನ್ನು ಬೇರ್ಪಡಿಸಲಾಯಿತು. ಅವಳಿಗಳು ತಮ್ಮ ಮೊದಲ ಹುಟ್ಟುಹಬ್ಬವನ್ನು ಆಸ್ಪತ್ರೆಯಲ್ಲೇ ಆಚರಿಸಿಕೊಂಡರು” ಎಂದು ಪೀಡಿಯಾಟ್ರಿಕ್ ಸರ್ಜರಿ ವಿಭಾಗದ ಮುಖ್ಯಸ್ಥ ಡಾ.ಮಿನು ಬಾಜ್ಪೈ ಹೇಳಿದ್ದಾರೆ.
ಏಮ್ಸ್ ಆಸ್ಪತ್ರೆಯು ಕಳೆದ ಕೆಲವು ವರ್ಷಗಳಲ್ಲಿ ಇಂತಹ ಹಲವು ಆಪರೇಷನ್‌ಗಳನ್ನು ಮಾಡಿದೆ. ಇಬ್ಬರು ಸಹೋದರಿಯರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಭವಿಷ್ಯದಲ್ಲಿ ಈ ಶಸ್ತ್ರಚಿಕಿತ್ಸೆಯಿಂದ ಅವರು ಯಾವುದೇ ಸಮಸ್ಯೆ ಎದುರಿಸುವುದಿಲ್ಲ. ಹೀಗೆ ಅವಳಿ ಮಕ್ಕಳು ಜನಿಸುವುದು ಸಾವಿರದಲ್ಲಿ ಒಬ್ಬರಿಗೆ ಮಾತ್ರ. ಚಿಕಿತ್ಸೆಯ ನಂತರ ಪೋಷಕರು ತುಂಬಾ ಸಂತೋಷವಾಗಿದ್ದಾರೆ” ಎಂದು ವೈದ್ಯರು ತಿಳಿಸಿದ್ದಾರೆ.
ದೇಶದ ಅತಿದೊಡ್ಡ ಆಸ್ಪತ್ರೆಯಾದ ಏಮ್ಸ್ ವೈದ್ಯರು ಆಧುನಿಕ ವೈದ್ಯಕೀಯ ವಿಜ್ಞಾನದಲ್ಲಿ ಏಮ್ಸ್ ಹೆಸರೇಕೆ ಉತ್ತುಂಗದಲ್ಲಿದೆ ಎಂದು ಈ ಅಪರೂಪದ ಶಸ್ತ್ರಚಿಕಿತ್ಸೆಯ ಮೂಲಕ ಸಾಬೀತುಪಡಿಸಿದ್ದಾರೆ.
ಅನಿವಾಸಿ ಭಾರತೀಯ ಉದ್ಯಮಿ, ಸಮಾಜ ಸೇವಕ ಝಕರಿಯಾ ಜೋಕಟ್ಟೆ ಅವರಿಗೆ ಹೊರನಾಡ ಕನ್ನಡಿಗ ವಿಭಾಗದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ…
ಪಾಣೆಮಂಗಳೂರು ಹಳೆ ಸೇತುವೆ ಬಳಿ ನಾಪತ್ತೆಯಾದ ಆಟೋ ಚಾಲಕನ ಶವ ಪತ್ತೆಯಾಗಿದೆ. ಪಾಣೆಮಂಗಳೂರು ಹಳೆ ಸೇತುವೆಯ ಬಳಿ ಇಲೆಕ್ಟಿಕ್ ಆಟೋ…
ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಹಲವಾರು ಮಂದಿಯಿಂದ ಕೋಟ್ಯಾಂತರ ಹಣ ಪಡೆದು ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ದಂಪತಿಯನ್ನು ಕಾವೂರು…
ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿದ್ದ ಮದುವೆ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ಮದುವೆಯ ವಾಹನವೊಂದು ಬಿಸಿಲೆ ಘಾಟ್ ರಸ್ತೆಯ ತಿರುವಿನಲ್ಲಿ ಪಲ್ಟಿಯಾಗಿ ವಾಹನದಲ್ಲಿದ್ದ 20ಕ್ಕೂ…
ವಿದ್ಯುತ್ ತಂತಿ ಸ್ಪರ್ಶಿಸಿ ತಾಯಿ, ಮಗ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹುಣಸೂರಿನಲ್ಲಿ ನಡೆದಿದೆ. ಹುಣಸೂರು ತಾಲೂಕಿನ ಎಮ್ಮೆ ಕೊಪ್ಪಲು…
ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತದ ಬಂಟ್ವಾಳ ನಂ.1 ಮತ್ತು ನಂ 2 ಉಪವಿಭಾಗ ವ್ಯಾಪ್ತಿಯ ಜನಸಂಪರ್ಕ ಸಭೆ ಬಿ.ಸಿ.ರೋಡ್‌ನಲ್ಲಿರುವ…