ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಜೇರ್ಲಗುಡ್ಡೆ ಕೂಸಪ್ಪ ಹಾಗೂ ಪ್ರೇಮಲತಾ ದಂಪತಿಗಳ ಪುತ್ರಿ ಕು. ನಿಶ್ಮಿತಾ ಇವರು ದೇಶ ಸೇವೆಯ ಸೈನ್ಯಕ್ಕೆ ಹೊರಟಿರುವ ಈ ಸಂದರ್ಭದಲ್ಲಿ ಮಣಿಕಂಠ ಭಜನಮಂದಿರದಲ್ಲಿ ಮಕರ ಉತ್ಸವದ ಸಂದರ್ಭ ಕು. ನಿಶ್ಮಿತಾ ಅವರನ್ನು ಭಜನಾ ಮಂದಿರದ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ನೆತ್ತೆರ್ ಕೆರೆ ದಾಮೋದರ ಅವರು ಅಭಿನಂದಿಸಿದ್ಧಾರೆ. ಈ ಸಂದರ್ಭ ಮಣಿಕಂಠ ಭಜನಾ ಮಂದಿರದ ಸರ್ವ ಸದಸ್ಯರು ಉಪಸ್ಥಿತರಿದ್ದರು.



