ಮೂಲ್ಕಿ ತಾಲೂಕು ಹಳೆಯಂಗಡಿ ಗ್ರಾಮದ ವ್ಯಕ್ತಿಯೊಬ್ಬರು ಕೆಲಸಕ್ಕೆ ತೆರಳಿ ಮನೆಗೆ ಬಾರದೇ ಇರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಳೆಯಂಗಡಿ ಗ್ರಾಮದ ಕದ್ರಾತೋಟ ನಿವಾಸಿ ಅಮಿತಾರವರ ಗಂಡ ದೇವದಾಸ (52 ವರ್ಷ) ನಾಪತ್ತೆಯಾಗಿರುವ ವ್ಯಕ್ತಿ. ದೇವದಾಸ ಅವರು ಮಂಗಳವಾರ ಬೆಳಗ್ಗೆ 9-30ಕ್ಕೆ ಕದ್ರಾ ತೋಟ ಮನೆಯಿಂದ ಕೆಲಸಕ್ಕೆಂದು ಹೋದವರು ಕೆಲಸಕ್ಕೂ ಹೋಗದೇ ವಾಪಾಸ್ಸು ಮನೆಗೂ ಬಾರದೇ ಕಾಣೆಯಾಗಿದ್ದು, ಮೂಲ್ಕಿ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.




