ಇಲ್ಲಿ ಕಸ ತಂದು ಹಾಕುವ ದಿವ್ಯ ಆತ್ಮಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ, ಈ ಕಸದಂತೆಯೇ ನಿಮ್ಮ ಜೀವನವೂ ಆದಷ್ಟು ಬೇಗನೇ ಕೊಳೆತು ಹೋಗಲಿ. ಎಂಬ ಬ್ಯಾನರ್ ಕಲ್ಲಡ್ಕ ಜಂಕ್ಷನ್‌ನ ಕಮಲಾ ಕಾಂಪ್ಲೆಕ್ಸ್ ನ ಮುಂಭಾಗದಲ್ಲಿ ಇರುವ ವಿದ್ಯುತ್ ಕಂಬಕ್ಕೆ ಹಾಕಲಾಗಿದೆ.
ಜನನಿಬಿಡ ಪ್ರದೇಶವಾಗಿರುವ ಕಲ್ಲಡ್ಕ ಕಮಲಾ ಕಾಂಪ್ಲೆಕ್ಸ್ ನಲ್ಲಿರುವ ಕೆ.ಟಿ.ಹೋಟೆಲ್ ನ ಮುಂಭಾಗದಲ್ಲಿ ಕಸವನ್ನು ತಂದು ಹಾಕಿ ಹೋಗುತ್ತಿದ್ದರು. ಕಮಲಾ ಕಾಂಪ್ಲೆಕ್ಸ್ ನಲ್ಲಿ ಚಿಕಿತ್ಸಾಲಯ, ಹೋಟೆಲ್, ಬ್ಯಾಂಕ್ ಹಾಗೂ ಹತ್ತಿರದಲ್ಲಿ ಶ್ರೀ ರಾಮ ಮಂದಿರ ಇದ್ದು ನಿತ್ಯ ಬೆಳಿಗ್ಗೆ ಇಲ್ಲಿ ಕಸದ ರಾಶಿ ಕೊಳೆತು ವಾಸನೆ ಬರುತ್ತಿತ್ತು.
ಜನರು ನಿತ್ಯ ಓಡಾಡುವ ಜಾಗದಲ್ಲಿ ಕಸವನ್ನು ಹಾಕಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದನ್ನು ಕಂಡು ಸಾರ್ವಜನಿಕರೇ ಬ್ಯಾನರ್ ಅಳವಡಿಸಿದ್ದಾರೆ. ಕಸ ತಂದು ಹಾಕುವವರನ್ನು ತಡೆಯಲು ಸಾಧ್ಯವಾಗದೆ ಅತ್ಯಂತ ನೋವಿನಿಂದ ಇಲ್ಲಿನ ಸಾರ್ವಜನಿಕರು ನೋವು ತರುವ ಬರಹವನ್ನು ಬ್ಯಾನರ್‌ನಲ್ಲಿ ಮುದ್ರಿಸಿ ಹಾಕಿದ್ದಾರೆ. ಬ್ಯಾನರ್‌ನ ಬರಹ ನೋಡಿದ ಜನರು ಒಂದು ಕ್ಷಣ ನಿಬ್ಬೆಗೆರಗಾಗುವುದು ಮಾತ್ರ ಸತ್ಯ….
ನೆರೆಮನೆಯ ದನಗಳು ತನ್ನ ತೋಟಕ್ಕೆ ಬಂದು ಹಾನಿಗೊಳಿಸಿವೆ ಎಂಬ ಆಕ್ರೋಶದಿಂದ ಹಟ್ಟಿಯಲ್ಲಿ ಕಟ್ಟಿಹಾಕಿದ್ದ ದನಗಳಿಗೆ ಕತ್ತಿಯಿಂದ ಕಡಿದು ಹಲ್ಲೆ ನಡೆಸಿ…
ಮಂಗಳೂರಿನಲ್ಲಿ ಮಾದಕ ವಸ್ತು ಮಾರಾಟಕ್ಕೆ ಯತ್ನಿಸಿದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಿತ ಮಾದಕ…
ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಎಂಬಲ್ಲಿ ನೇತ್ರಾವತಿ ನದಿಯಿಂದ ಅಕ್ರಮವಾಗಿ ಮರಳು ತೆಗೆದು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪ ವ್ಯಕ್ತಪಡಿಸಿ, ಇವರ…
ಖಾಸಗಿ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ಸ್ಕೂಲ್ ಬಸ್‌ಗಳು ಕಾನೂನು ಮತ್ತು ನಿಯಮಗಳನ್ನು ಪಾಲಿಸುತ್ತಿದೆಯಾ ಎಂಬ ಬಗ್ಗೆ…
ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಪಾಣೆಮಂಗಳೂರು ಫ್ಲೈಓವರ್ ಪಕ್ಕದ ಕಲ್ಲುರ್ಟಿ ಸನ್ನಿಧಿಯ ಬಳಿಯಿಂದ ಹಳೇ ಸೇತುವೆ ಕಡೆಗೆ ಸಾಗುವ ದಾರಿಯ…
ಹೆಬ್ರಿ ಸಮೀಪದ ಹೊಸೂರು ಎಂಬಲ್ಲಿ ಇಸ್ಪೀಟ್ ಜೂಜಾಟ ನಡೆಸುತ್ತಿದ್ದ ಆರೋಪದಲ್ಲಿ ಏಳು ಮಂದಿಯನ್ನು ಹೆಬ್ರಿ ಪೊಲೀಸರು ಬಂಧಿಸಿದ್ದಾರೆ. ಜೂಜಾಟ ನಡೆಯುತ್ತಿರುವ…