ಕಡಬ ತಹಸೀಲ್ದಾರ್ ರಮೇಶ್ ಬಾಬು ಅವರನ್ನು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಗೆ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಒಟ್ಟು ಎಂಭತ್ತ ನಾಲ್ಕು ತಹಸೀಲ್ದಾರ್ ಗಳನ್ನು ವರ್ಗಾವಣೆಗೊಳಿಸಲಾಗಿದೆ. ಆದರೆ ಕಡಬಕ್ಕೆ ಹೊಸ ತಹಶೀಲ್ದಾರರನ್ನು ಸೂಚಿಸಿಲ್ಲ. ತಹಸೀಲ್ದಾರ್ ಗ್ರೇಡ್-೧ ಮತ್ತು ತಹಸೀಲ್ದಾರ್ ಗ್ರೇಡ್-೨ ವೃಂದದ ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ತಕ್ಷಣ ಜಾರಿಗೆ ಬರುವಂತೆ ಸೂಚಿಸಿದ ಸ್ಥಳಕ್ಕೆ ವರ್ಗಾಯಿಸಿ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಜಿ.ಎನ್. ಸುಶೀಲ ಆದೇಶದಲ್ಲಿ ತಿಳಿಸಿದ್ದಾರೆ.



