ಕಳ್ಳರು ಮನೆಗೆ ನುಗ್ಗಿ ಕಪಾಟು ಜಾಲಾಡಿ ಬೆಲೆ ಬಾಳುವ ವಸ್ತುಗಳನ್ನು ಕಳವುಗೈದ ಘಟನೆ ತಲಪಾಡಿ ಗ್ರಾಮ ಕೆ.ಸಿನಗರ ಪಲಾಹ್ ಸ್ಕೂಲ್ ಬಳಿ ನಡೆದಿದ್ದು, ಭಾನುವಾರ ಬೆಳಕಿಗೆ ಬಂದಿದೆ.
ಕೆಸಿನಗರ ನಿವಾಸಿ ಅಬೂಬಕ್ಕರ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಎಲಿಯಾರ್ ಪದವು ಅಂಗಡಿ ಹೊಂದಿದ್ದ ಅಬೂಬಕ್ಕರ್ ಅವರು ಕಳೆದ 25 ವರ್ಷ ಗಳಿಂದ ಸೌದಿ ಅಲ್ ಕೋಬಾರ್ ನಲ್ಲಿ ಉದ್ಯೋಗದಲ್ಲಿ ಇದ್ದು, ಕಳೆದ ಆಗಸ್ಟ್ ತಿಂಗಳಲ್ಲಿ ಅಬೂಬಕ್ಕರ್ ಪತ್ನಿ ಝೀನತ್ ಪುತ್ರ ಇಝಾಮ್ ಹಾಗೂ ಪುತ್ರಿ ಸಫಾ ಈ ಮನೆಗೆ ಬೀಗ ಹಾಕಿ ಕುಟುಂಬ ಸಮೇತ ಸೌದಿಗೆ ಹೋಗಿದ್ದರು.
ಇದರ ಬಳಿಕ ಅಬೂಬಕ್ಕರ್ ಅವರ ಸಹೋದರ ನ ಪತ್ನಿ ಮೈನಾಝ್ ಇಂದು ಮನೆ ನೋಡಿ ಸ್ವಚ್ಛ ಮಾಡಲು ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಮನೆಯ ಮುಂಬಾಗಿಲನ್ನು ಒಡೆದು ಒಳ ನುಗ್ಗಿದ ಕಳ್ಳರು ಕೆಳ ಮಹಡಿಯಲ್ಲಿರುವ ಮೂರು ಕೊಠಡಿಗಳು ಹಾಗೂ ಮೊದಲ ಮಹಡಿಯಲ್ಲಿ ಇರುವ ಒಂದು ಕೊಠಡಿಯಲ್ಲಿರುವ ಒಟ್ಟು ನಾಲ್ಕು ಕಪಾಟುಗಳನ್ನು ಒಡೆದು ಜಾಲಾಡಿದ್ದಾರೆ. ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಅಲ್ಲದೇ ಅಡುಗೆ ಕೋಣೆಯ ಕಪಾಟುಗಳನ್ನು ಜಾಲಾಡಿದ ಕಳ್ಳರಿಗೆ ಚಿನ್ನಾಭರಣ ಸಿಕ್ಕಿಲ್ಲ.
ಈ ಹಿನ್ನೆಲೆಯಲ್ಲಿ ಕಳ್ಳರು ಕಪಾಟಿನಲ್ಲಿದ್ದ ಬೆಲೆ ಬಾಳುವ ವಾಚ್, ಮೊಬೈಲ್ ಕಳವುಗೈದಿದ್ದಾರೆ. ಈ ಮನೆಯ ಕುಟುಂಬ ವಿದೇಶಕ್ಕೆ ಹೋಗುವ ಮೊದಲೇ ಚಿನ್ನಾಭರಣಗಳನ್ನು ಸೇಫ್ ಲಾಕರ್‌ನಲ್ಲಿ ಇಟ್ಟು ಹೋಗಿದ್ದರು ಎಂದು ಅಬೂಬಕ್ಕರ್ ಅವರ ಕುಟುಂಬಸ್ಥರು ತಿಳಿಸಿದ್ದಾರೆ. ಕಳವುಗೈದ ಆರೋಪಿಗಳು ಚಿನ್ನಾಭರಣ ದೋಚಲು ಬಂದಿದ್ದು, ಚಿನ್ನಾಭರಣ ಸಿಗದ ಕಾರಣ ಮೊಬೈಲ್, ವಾಚ್ ಕಳವುಗೈದಿರಬೇಕು ಎಂದು ಶಂಕಿಸಲಾಗಿದೆ. ಈ ಬಗ್ಗೆ ಅಬೂಬಕ್ಕರ್ ಅವರ ಬಾವ ಶೇಖಬ್ಬ ಅವರು ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದಾರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಹೊಸದಿಲ್ಲಿ: ಪಟ್ಲ ಸತೀಶ್ ಶೆಟ್ಟಿ ಅವರಿಗೆ ಡಾ. ಶಿವರಾಮ ಕಾರಂತ ಪ್ರಶಸ್ತಿ..! ಪ್ರಖ್ಯಾತ ಭಾಗವತ, ಸಂಘಟಕ ಪಟ್ಲ ಸತೀಶ್ ಶೆಟ್ಟಿ…
ಮಣಿಪಾಲ: ಸರಳೆಬೆಟ್ಟು ನಗರಸಭಾ ಸದಸ್ಯೆಯ ಸಹೋದರ ಆತ್ಮಹತ್ಯೆ ವೈಯಕ್ತಿಕ ಕಾರಣದಿಂದ ಮನನೊಂದ ವ್ಯಕ್ತಿಯೊಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ…
ಮಲೆಯಾಳ ಕಡ್ಡಾಯ ಮಸೂದೆ ವಿರೋಧಿ ಸಮಿತಿ ವತಿಯಿಂದ ಕೇರಳದ ವಿರೋಧ ಪಕ್ಷದ ನಾಯಕ ಸನ್ಮಾನ್ಯ ವಿ ಡಿ ಸತೀಶನ್ ಅವರನ್ನು…
ಉಡುಪಿ : ಜಿಲ್ಲೆಯ ಹಿರಿಯ ರಾಜಕಾರಣಿ, ಬೈಂದೂರಿನ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರು ಅಲ್ಪಕಾಲದ ಅಸೌಖ್ಯದಿಂದ…
ಮೂಲತಃ ಪುತ್ತೂರು ಬೆಂದ್ರುತೀರ್ಥ ನಿವಾಸಿ, ಪ್ರಸಕ್ತ ರಾಯಿ ಸಮೀಪದ ಮಾಬೆಟ್ಟು ಎಂಬಲ್ಲಿ ವಾಸವಾಗಿದ್ದ ನಿವೃತ್ತ ಕೃಷಿ ಅಧಿಕಾರಿ ನಾರಾಯಣ ನಾಯ್ಕ್…
ದೆಹಲಿ ಕರ್ನಾಟಕ ಸಂಘದಿಂದ ಖ್ಯಾತ ಯಕ್ಷಗಾನ ಭಾಗವತರಾದ ಪಟ್ಲ ಸತೀಶ್ ಶೆಟ್ಟಿಯವರಿಗೆ ಅತ್ಯುನ್ನತ ಡಾ. ಶಿವರಾಮ ಕಾರಂತ ಪ್ರಶಸ್ತಿ ಘೋಷಣೆ…