ಪಾಣೆಮಂಗಳೂರು ಸಮೀಪ ಕಂಚಿಕಾರಪೇಟೆ ಬಳಿ ನೇತ್ರಾವತಿ ನದಿಯಲ್ಲಿ ಮೃತದೇಹವೊಂದು ಪತ್ತೆಯಾಗಿದ್ದು, ವೀರಕಂಭ ಗ್ರಾಮದ ಬಾಯಿಲ ನಿವಾಸಿ ಪ್ರಕಾಶ್ ಅವರದ್ದು ಎಂದು ಗುರುತಿಸಲಾಗಿದೆ.

ಕಂಚಿಕಾರಪೇಟೆ ಸೇತುವೆ ಬಳಿ ನದಿ ಮಧ್ಯೆ ತೇಲಿಕೊಂಡಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರ ಗಮನಕ್ಕೆ ತಂದಿದ್ದು, ಕೂಡಲೇ ದೋಣಿ ಸಹಾಯದಿಂದ ಸ್ಥಳೀಯರ ನೆರವಿನಿಂದ ದಡಕ್ಕೆ ತರಲಾಯಿತು. ಸಾವನ್ನಪ್ಪಿದ ವ್ಯಕ್ತಿ ವೀರಕಂಭ ನಿವಾಸಿ ಎಂದು ಗುರುತಿಸಲಾಗಿದ್ದು, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.



