ಮೂಲತಃ ಪುತ್ತೂರು ಬೆಂದ್ರುತೀರ್ಥ ನಿವಾಸಿ, ಪ್ರಸಕ್ತ ರಾಯಿ ಸಮೀಪದ ಮಾಬೆಟ್ಟು ಎಂಬಲ್ಲಿ ವಾಸವಾಗಿದ್ದ ನಿವೃತ್ತ ಕೃಷಿ ಅಧಿಕಾರಿ ನಾರಾಯಣ ನಾಯ್ಕ್ (65) ಇವರು ಹೃದಯಾಘಾತದಿಂದ ಶುಕ್ರವಾರ ತಡರಾತ್ರಿ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಮೃತರಿಗೆ ಪತ್ನಿ ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ಸಹಾಯಕ ಕೃಷಿ ಅಧಿಕಾರಿಯಾಗಿ ಉಡುಪಿ, ಬ್ರಹ್ಮಾವರ, ಬಂಟ್ವಾಳ ಕೃಷಿ ಇಲಾಖೆಯಲ್ಲಿ ದುಡಿದಿದ್ದರು. ರಾಯಿ ಪರಿಸರದಲ್ಲಿ ಪ್ರಗತಿಪರ ಕೃಷಿಕರಾಗಿ, ಕೃಷಿ ಸಾಮಾಗ್ರಿ ಮಾರಾಟ ಕೇಂದ್ರ ಮುನ್ನಡೆಸುತ್ತಿದ್ದರು.



