ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮಳೆ ತಗ್ಗಿದ್ದು ಮದ್ಯಾಹ್ನದ ವೇಳೆ ಸ್ವಲ್ಪ ಮಳೆಯಾಗಿದೆ. ಮೋಡ ಕವಿದ ವಾತಾವರಣವಿದ್ದರೂ ಉಳಿದಂತೆ ಬಿಸಿಲು ಕಾಣಿಸಿಕೊಂಡಿದೆ. ಶನಿವಾರ ಕೆಲವು ಕಡೆಗಳಲ್ಲಿ ಗುಡುಗು ಸಹಿತ ಗಾಳಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ. ಗುರುವಾರ ಬೆಳಗ್ಗೆ ಎಂಟರಿಂದ ಶುಕ್ರವಾರ ಬೆಳಗ್ಗೆ 8ರವರೆಗೆ ಜಿಲ್ಲೆಯಲ್ಲಿ 23 ಮಿಮೀ, ಬಂಟ್ವಾಳ 29.2 ಮಿಮೀ, ಮೂಡಬಿದ್ರೆ 28.2 ಮಿಮೀ, ಪುತ್ತೂರು 25.6 ಮಿಮೀ, ಸುಳ್ಯ 26.3 ಮಿಮೀ ಮಳೆಯಾಗಿದೆ.



