ಜನ ಮನದ ನಾಡಿ ಮಿಡಿತ

Advertisement

ತಿರುವನಂತಪುರ: ಸಾವಿನಲ್ಲೂ ಸಾರ್ಥಕತೆ ಮೆರೆದ ಪುಟ್ಟ ಕಂದಮ್ಮ!

ಅಪಘಾತದಲ್ಲಿ ಗಾಯಗೊಂಡಿದ್ದ 10 ತಿಂಗಳ ಹೆಣ್ಣು ಮಗುವಿನ ಮೆದುಳು ನಿಷ್ಕ್ರಿಯಗೊಂಡಿದ್ದ ಹಿನ್ನೆಲೆಯಲ್ಲಿ, ಮಗುವಿನ ಪೋಷಕರು ಕಂದಮ್ಮನ ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದ ಘಟನೆ ಕೇರಳದಲ್ಲಿ ನಡೆದಿದೆ.

ಕಾರು ಅಪಘಾತದಲ್ಲಿ ಅಲಿನ್ ಎಂಬ ಮಗುವಿನ ಮೆದುಳು ನಿಷ್ಕ್ರಿಯವಾಗಿತ್ತು. ಈ ಮೂಲಕ ಅಲಿನ್ ಶೆರಿನ್ ಅಬ್ರಹಾಂ ಎಂಬ 10 ತಿಂಗಳ ಹಸುಗೂಸು ದೇಶದ ಅತಿ ಕಿರಿಯ ಅಂಗಾಂಗ ದಾನಿ ಎನಿಸಿಕೊಂಡಿದೆ. ಕೇರಳದ ಪಟ್ಟಣಂತಿಟ್ಟ ಜಿಲ್ಲೆಯ ಅಲಿನ್ ಶೆರಿನ್ ಅಬ್ರಹಾಂ ಎನ್ನುವ ಮಗು ತಂದೆ-ತಾಯಿ ಜತೆ ತೆರಳುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿತ್ತು. ಆದರೆ ಹೆತ್ತ ಮಗುವನ್ನು ಕಳೆದುಕೊಂಡ ದುಃಖದಲ್ಲಿಯೂ ಪಾಲಕರು ಮಗುವಿನ ಮೂತ್ರಪಿಂಡ, ಯಕೃತ್ತು, ಹೃದಯ ಕವಾಟುಗಳನ್ನು ದಾನ ಮಾಡಿದ್ದಾರೆ.

ಈ ಪೈಕಿ ಮೂತ್ರಪಿಂಡವನ್ನು ತಿರುವನಂತಪುರಂನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ 10 ವರ್ಷದ ಬಾಲಕಿಗೆ ಕಸಿ ಮಾಡಲಾಗಿದೆ. ಈ ಮಾಹಿತಿಯನ್ನು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಜಾಲತಾಣದಲ್ಲಿ ಹಂಚಿಕೊಂಡು ಮಗುವಿನ ಹೆತ್ತವರಿಗೆ ಧನ್ಯವಾದ ತಿಳಿಸಿದ್ದಾರೆ. ಅಂಗಾಂಗ ದಾನದಲ್ಲಿ ಹೊಸ ಇತಿಹಾಸ ಇದಾಗಿದ್ದು, 10 ತಿಂಗಳ ಮಗುವಿನ ಅಂಗಾಂಗಗಳನ್ನು ದಾನ ಮಾಡಲಾಗಿದೆ. ಕಾರು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಅಲಿನ್ ಶೆರಿನ್ ಅಬ್ರಹಾಂ ಹೆಸರಿನ ಹೆಣ್ಣುಮಗುವಿನ ಮೂತ್ರಪಿಂಡಗಳು, ಯಕೃತ್ತು ಮತ್ತು ಹೃದಯ ಕವಾಟಗಳನ್ನು ಮಹಾದಾನ ಮಾಡಲಾಗಿದೆ. ಈ ಅಂಗಾಂಗವನ್ನು ಕೊಚ್ಚಿಯಿಂದ ರಸ್ತೆ ಮೂಲಕ ತಿರುವನಂತಪುರಂಗೆ ಅದನ್ನು ತೆಗೆದುಕೊಂಡುಹೋಗಲಾಗಿದೆ.

Leave a Reply

Your email address will not be published. Required fields are marked *

ಉಡುಪಿ: ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ: ಮರಳು, ಬೋಟ್ ಸಹಿತ 22 ಮಂದಿಯ ಬಂಧನ…!

ಉಡುಪಿ: ವಂಚನೆ ಪ್ರಕರಣ; ಓರ್ವ ಮಹಿಳೆ ಸಹಿತ ಇಬ್ಬರ ಬಂಧನ…!

ಮಂಜೇಶ್ವರ: ಅಕ್ರಮ ಗಾಂಜಾ ಸಾಗಟ; ಪತ್ತೆ ಹಚ್ಚಿದ್ದ ಅಬಕಾರಿ ಅಧಿಕಾರಿಗಳು…..!

ಮಂಗಳೂರು: ವಿದ್ಯಾರ್ಥಿಗಳಿಗೆ ಮಾದಕವಸ್ತು ಮಾರಾಟ ; ಆರೊಪಿಗಳ ಬಂಧನ…!

ಬೆಂಗಳೂರು: ಹೊಸಕೋಟೆಯಲ್ಲಿ ಭೀಕರ ರಸ್ತೆ ಅಪಘಾತ; 7 ಮಂದಿ ಮೃತ್ಯು!

ಪುತ್ತೂರು: ಪುತ್ತೂರಿನ ಸಮಾಜ ಸೇವಕಿ ಕೆರೆಮನೆ ನಳಿನಿ ಲೋಕಪ್ಪ ಗೌಡ ನಿಧನ.

ಯುವತಿಯರನ್ನು ನಂಬಿಸಿ ಕೈಕೊಟ್ಟ ಭೂಪನೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ…!

ಪಟ್ಲ ಸತೀಶ್ ಶೆಟ್ಟಿ ಅವರಿಗೆ ಡಾ. ಶಿವರಾಮ ಕಾರಂತ ಪ್ರಶಸ್ತಿ..!

ವ್ಯಕ್ತಿಯೊಬ್ಬ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ…!

error: Content is protected !!