ರಿಕ್ಷಾ ಪಲ್ಟಿಯಾಗಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮಾರಿಪಳ್ಳ ಸಮೀಪದ ಕಡೆಗೋಳಿ ಎಂಬಲ್ಲಿ ನಡೆದಿದೆ. ಮಂಗಳೂರು ನಿವಾಸಿ ವಿಶಾಲಾಕ್ಷಿ ಮೃತಪಟ್ಟ ಮಹಿಳೆ.

ಮಂಗಳೂರಿನಿಂದ ಕಲ್ಲಡ್ಕ ದೇವಸ್ಥಾನಕ್ಕೆ ಬರುವ ವೇಳೆ ಕಡೆಗೋಳಿಯಲ್ಲಿ ರಿಕ್ಷಾ ಅಪಘಾತವಾಗಿದೆ. ಮಂಗಳೂರು ಕಡೆಯಿಂದ ಬರುತ್ತಿರುವ ವೇಳೆ ಕಡೆಗೋಳಿ ಜಂಕ್ಷನ್‌ನಲ್ಲಿ ಬೈಕ್ ಸವಾರನೋರ್ವ ಎದುರು ಕಡೆಗೆ ಕ್ರಾಸ್ ಆಗಿದ್ದು, ರಿಕ್ಷಾ ಬೈಕ್‌ಗೆ ಡಿಕ್ಕಿಯಾಗಿದೆ, ಬಳಿಕ ನಿಯಂತ್ರಣ ಕಳೆದ ರಿಕ್ಷಾ ಎದರು ಭಾಗದಲ್ಲಿ ನಿಂತಿದ್ದ ಮತ್ತೊಂದು ರಿಕ್ಷಾಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ರಿಕ್ಷಾದಲ್ಲಿ ಮೃತ ವಿಶಾಲಾಕ್ಷಿ ಅವರ ತಂಗಿ ಹಾಗೂ ಅವರ ಇಬ್ಬರು ಮಕ್ಕಳು ಕೂಡ ಪ್ರಯಾಣಿಸುತ್ತಿದ್ದರು. ಆದರೆ ಚಾಲಕ ಸಹಿತ ನಾಲ್ವರು ಸಣ್ಣ ಪುಟ್ಟ ಗಾಯಗಳಿಂದ ಜೀವಕ್ಕೆ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಎಸ್.ಐ.ಆದರ್ಶ್ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.



