ಹೈದರಾಬಾದ್‌ನಲ್ಲಿ ವಿವಾಹ ವಿಚ್ಛೇದನ ಪಡೆದು ಬೇರೆಯಾದರೂ ಮಾಜಿ ಪತ್ನಿಯನ್ನು ಬದುಕಲು ಮಾಜಿ ಪತಿ ಬಿಟ್ಟಿಲ್ಲ.

ಮಾಜಿ ಪತ್ನಿ ದಾಖಲಿಸಿದ ಕೇಸ್‌ನಿಂದಾಗಿ ತಾನು ಕೆನಡಾಕ್ಕೆ ವಾಪಸ್ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಸಿಟ್ಟಿಗೆದ್ದ ಮಾಜಿ ಪತಿ, ಮಾಜಿ ಪತ್ನಿಯ ಮನೆಗೆ ನುಗ್ಗಿ ಆಕೆಯನ್ನು ಬರ್ಬರವಾಗಿ ಕೊಂದಿದ್ದಾನೆ. ಆಕೆ ದಾಖಲಿಸಿದ ಕೌಟುಂಬಿಕ ಹಿಂಸಾಚಾರ ಪ್ರಕರಣವು ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಾಜಿ ಪತಿಗೆ ಕೆನಡಾಕ್ಕೆ ಹಿಂತಿರುಗಲು ಅಡ್ಡಿಯಾಗಿತ್ತು. ಇದರಿಂದ ಹತಾಶೆಗೊಂಡ ವ್ಯಕ್ತಿಯೊಬ್ಬ ಹೈದರಾಬಾದ್‌ನಲ್ಲಿರುವ ತನ್ನ ಮಾಜಿ ಪತ್ನಿಯ ಮನೆಗೆ ನುಗ್ಗಿ ಆಕೆಯ ತಲೆಗೆ ಪದೇ ಪದೇ ಇರಿದು ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ.



