ವಿಶ್ವ ವಿದ್ಯಾಲಯ ಕಾಲೇಜು ಹಂಪನಕಟ್ಟೆ ಗ್ರಂಥಾಲಯದ ಸನಿಹ ಇರುವ ಮಾರ್ಗದ ಬದಿಯು ಈ ಮೊದಲು ಹೆಚ್ಚಾಗಿ ಕಸದ ರಾಶಿಯಿಂದಲೇ ತುಂಬಿರುತ್ತಿತ್ತು.

ಇದು ಆ ಮಾರ್ಗವಾಗಿ ಸಂಚಾರ ನಡೆಸುವ ಪ್ರಯಾಣಿಕರಿಗೆ ಕಿರಿ ಕಿರಿಯನ್ನು ತರುತ್ತಿದೆ. ದುರ್ವಾಸನೆಯಿಂದ ಮೂಗು ಮುಚ್ಚಿ ಹೋಗುವಂತೆ ಮಾಡುತ್ತಿದೆ. ಆದರೆ ಆ ಬಳಿಕ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಮಂಗಳೂರು ಮಹಾ ನಗರ ಪಾಲಿಕೆಯು ಆ ಪ್ರದೇಶಕ್ಕೆ ಕಸ ಹಾಕದಂತೆ ಬೇಲಿ ಹಾಕಿತು. ಇದು ನನ್ನ ನಗರ ಸ್ವಚ್ಛತೆ ಕಾಪಾಡುವುದು ನನ್ನ ಧರ್ಮ ಎಂದು ಫಲಕವನ್ನೂ ಹಾಕಿತ್ತು.

ಕೆಲವು ದಿನಗಳ ತನಕ ಎಲ್ಲವು ಸರಿಯಾಗಿತ್ತು. ಅಲ್ಲಿ ಯಾವುದೇ ಕಸದ ರಾಶಿಗಳು ಕಂಡು ಬಂದಿರಲಿಲ್ಲ ಆದರೆ ಇದೀಗ ನಾಯಿ ಬಾಲ ಡೊಂಕು ಎಂಬಂತೆ ಮತ್ತೆ ಅಲ್ಲಿ ಕಸದ ರಾಶಿ ಉದ್ಭವವಾಗಿದೆ. ಕಸ ಬಿಸಾಡಬೇಡಿ ಎಂದು ದಪ್ಪ ಅಕ್ಷರದಲ್ಲಿ ನಾಗರಿಕರಿಗೆ ಸೂಚನೆಯನ್ನು ನೀಡಿದ್ದರೂ ಸಹ ಇದನ್ನು ಗಾಳಿಗೆ ತೂರಿದ್ದಾರೆ. ಇದೀಗ ಅಲ್ಲಿ ಸೀರೆಗಳ ಮೂಟೆಯೇ ಇದೆ.



