ಮೂಲ್ಕಿ: ವಿದ್ಯಾರ್ಥಿಗಳ ಆರೋಗ್ಯ ಮತ್ತು ಮಾನಸಿಕ ಸಮತೋಲನದ ಜತೆಗೆ ಆತ್ಮರಕ್ಷಣೆಗಾಗಿ ತೊಡಗಿಸಿಕೊಳ್ಳುವಲ್ಲಿ ಪೂರಕವಾಗುವಂತೆ ಸರಕಾರ ಕರಾಟೆಗೆ ವಿಶೇಷ ಪ್ರಾಮುಖ್ಯತೆ ಕೊಟ್ಟು ಬೆಳೆಸುತ್ತಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು. ಅವರು ಮೂಲ್ಕಿಯ ಕಾರ್ನಾಡು ಸಿಎಸ್‌ಐ ಆಂಗ್ಲಮಾಧ್ಯಮ ಶಾಲೆಯ ಸಭಾಂಗಣದಲ್ಲಿ ದ.ಕ.ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆಯು ನಡೆಸಿದ ಮಂಗಳೂರು ಉತ್ತರ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಕರಾಟೆ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಕೇವಲ ಅಂಕಗಳಿಸುವುದರಲ್ಲಿ ನಿರತರಾಗಿರದ ಪತ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಬೆಳೆದಾಗ ಮಾತ್ರ ಅವರು ಸಮಾಜದ ಮತ್ತು ದೇಶದ ಉತ್ತಮ ಶಕ್ತಿಯಾಗಲು ಸಾಧ್ಯಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು. ಕರಾಟೆ ತರಬೇತುದಾರ ಈಶ್ವರ ಕಟೀಲು ಅವರನ್ನು ಸಮ್ಮಾನಿಸಲಾಯಿತು. ಹರಿಶ್ಚಂದ್ರ ಎಂ., ಶಿಕ್ಷಣ ಇಲಾಖೆಯ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಭರತ್ಕೆ .ಲಯನ್ಸ್ ಅಧ್ಯಕ್ಷೆ ಶೀತಲ್ ಸುಶೀಲ್ ಬಂಗೇರ, ಮೂಲ್ಕಿ ನಗರ ಪಂಚಾಯತ್ ಸದಸ್ಯ ಮಾಜಿ ಅಧ್ಯಕ್ಷ ಸುಭಾಷ್ ಶೆಟ್ಟಿ, ಕಟೀಲು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಕಿರಣ್ ಶೆಟ್ಟಿ, ಕಿನ್ನಿಗೋಳಿ ರೋಟು ಅಧ್ಯಕ್ಷ ತ್ಯಾಗರಾಜ ಆಚಾರ್ಯ, ಮೂಲ್ಕಿ ರೋಟರಿ ಬಂದಾಗ ಅಧ್ಯಕ್ಷ ಭುಜಂಗ ಕವತ್ತಾರು, ಶ್ರಾವ್ಯ, ಶಿಕ್ಷಣ ಇಲಾಖೆಯ ಮೂಲ್ಕಿ ಕ್ಲಸ್ಟರ್, ಸಿ.ಆರ್.ಪಿ ವಿವಿಲಾ ಡಯಾನ ಪಿಂಟೋ, ಶಾಲಾಡಳಿತ ಮಂಡಳಿಯ ಅಧ್ಯಕ್ಷ ರ ಸ್ಟೀವನ್ ಸರ್ವೋತ್ತಮ,ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷಹರ್ಷರಾಜ್ ಶೆಟ್ಟಿಜಿ.ಎಂ., ಇಲಾಖೆಯ ಕ್ಷೇತ್ರ ಸಮನ್ವಯ ಅಧಿಕಾರಿ ಹರಿಪ್ರಸಾದ್ಉ ಪಸ್ಥಿತರಿದ್ದರು. ಶಾಲಾ ಸಂಚಾಲಕ ರಂಜನ್ ಜತ್ತನ್ನಾ ಸ್ವಾಗತಿಸಿದರು. ಮುಖ್ಯಶಿಕ್ಷಕಿ ಟಾ ಮೆಂಡೋನ್ಸಾ ವಂದಿಸಿದರು. ಶಿಕ್ಷಕಿಯರಾದ ನಿಶಾ ದೇವಾಡಿಗ ಮತ್ತು ಪ್ರತಿಕ್ಷಾ ನಿರೂಪಿಸಿದರು.




