ಕ್ರೈಮ್

ಬೆಂಗಳೂರು: ದೋಸೆ ತಿನ್ನುವಾಗ ಕಾಲು ತಾಗಿದ್ದಕ್ಕೆ ನಡೆಯಿತು ಭೀಕರ ಹ*ತ್ಯೆ!

ಕಾಲು ಟಚ್ ಆಯಿತೆಂಬ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ ಕಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಶಶಿಕುಮಾರ್ ಕೊಲೆಯಾದ ವ್ಯಕ್ತಿ. ಮಂಜುನಾಥ್ ಮತ್ತು ಭಾಗ್ಯರಾಜ್ ಕೊಲೆಗೈದ ಆರೋಪಿಗಳು. ಕಳೆದ ಮಾರ್ಚ್ 2 ರಂದು ಶಿವನಹಳ್ಳಿ ಪ್ರದೇಶದ ಹೋಟೆಲ್‌ನಲ್ಲಿ ಶಶಿಕುಮಾರ್ ದೋಸೆ ತಿನ್ನುತ್ತಿದ್ದ. ಮಂಜುನಾಥ್ ಸಹ ಅದೇ ಹೋಟೆಲ್‌ಗೆ ಬಂದಿದ್ದ. ಈ ವೇಳೆ ಆಕಸ್ಮಿಕವಾಗಿ ಮಂಜುನಾಥ್ ಕಾಲನ್ನು ಶಶಿ ಕುಮಾರ್ ತುಳಿದಿದ್ದಾನೆ. ಇದೇ ವಿಚಾರ ಜಗಳಕ್ಕೆ ಕಾರಣವಾಗಿದೆ. ಮಂಜುನಾಥ್ ಸಹೋದರ ಭಾಗ್ಯರಾಜ್‌ಗೆ ಕರೆ ಮಾಡಿ ಕರೆಸಿಕೊಂಡಿದ್ದಾನೆ. ಇಬ್ಬರು ಶಶಿಕುಮಾರ್ ಜೊತೆ ಜಗಳವಾಡಿದ್ದಾರೆ. ರೊಚ್ಚಿಗೆದ್ದ ಭಾಗ್ಯರಾಜ್, ಶಶಿಕುಮಾರ್ ಕತ್ತಿಗೆ ಚಾಕು ಇರಿದು ಕೊಂದೇ ಬಿಟ್ಟಿದ್ದಾರೆ. ಈ ಬಗ್ಗೆ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೃತ್ಯ ಎಸಗಿ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ಮಂಗಳೂರು: ಪಡಿತರ ವಿತರಣೆಯ ತಾಂತ್ರಿಕ ಸಮಸ್ಯೆ ಪರಿಹರಿಸಿ; ಮನೆ ಬಾಗಿಲಿಗೆ ಪಡಿತರ ತಲುಪಿಸಲು ಆಗ್ರಹ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪಡಿತರ ವಿತರಣೆಗೆ ಸಂಬಂಧಿಸಿದ ತಾಂತ್ರಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕು ಎಂದು…

16 hours ago

ಮಂಗಳೂರು: ಎಚ್‌ಪಿಸಿಎಲ್‌ನಿಂದ ಮಹಿಳಾ ಗುತ್ತಿಗೆ ಕಾರ್ಮಿಕರ ವಜಾ ಆರೋಪ; ವಾರದೊಳಗೆ ಸಮಸ್ಯೆ ಪರಿಹರಿಸಲು ಆಗ್ರಹ

ಯಾವುದೇ ಮುನ್ಸೂಚನೆ ನೀಡದೆ ಕೆಲಸದಿಂದ ವಜಾಗೊಳಿಸಿರುವುದನ್ನು ವಿರೋಧಿಸಿ ಎಚ್‌ಪಿಸಿಎಲ್‌ನ ಮಹಿಳಾ ಗುತ್ತಿಗೆ ಕಾರ್ಮಿಕರು ಕಳೆದ ಒಂದು ತಿಂಗಳು ಏಳು ದಿನಗಳಿಂದ…

16 hours ago

ಬಂಟ್ವಾಳ: ಟಿಟಿಇ ಸಮಯಪ್ರಜ್ಞೆಯಿಂದ ರೈಲಿನಲ್ಲಿ ಕಾಣೆಯಾಗಿದ್ದ ₹80 ಸಾವಿರ ಮೌಲ್ಯದ ಲ್ಯಾಪ್‌ಟಾಪ್ ಬ್ಯಾಗ್ ಪತ್ತೆ

ಕರ್ತವ್ಯನಿರತ ಟಿಟಿಇಯ ಸಮಯಪ್ರಜ್ಞೆ ಹಾಗೂ ಎಚ್ಚರಿಕೆಯಿಂದ ರೈಲು ಪ್ರಯಾಣಿಕರೊಬ್ಬರ ಕಾಣೆಯಾಗಿದ್ದ ಲ್ಯಾಪ್‌ಟಾಪ್ ಬ್ಯಾಗ್ ಸೇರಿದಂತೆ ಅಮೂಲ್ಯ ವಸ್ತುಗಳನ್ನು ಪತ್ತೆಹಚ್ಚಿ ವಾರಸುದಾರರಿಗೆ…

16 hours ago

ಬಂಟ್ವಾಳ: ದಕ್ಷಿಣ ಕನ್ನಡ ಹೆದ್ದಾರಿ ಅಭಿವೃದ್ಧಿಗೆ ವೇಗ; ₹22.59 ಕೋಟಿ ವೆಚ್ಚದಲ್ಲಿ ಚತುಷ್ಪಥ ರಸ್ತೆ ಕಾಮಗಾರಿಗೆ ಚಾಲನೆ

ದಕ್ಷಿಣ ಕನ್ನಡ ಜಿಲ್ಲೆಯ ಹೆದ್ದಾರಿ ಕಾಮಗಾರಿಗಳಿಗೆ ವೇಗ ದೊರಕಿದ್ದು, ಮುಂದಿನ 15 ವರ್ಷಗಳ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು…

16 hours ago

ಬಂಟ್ವಾಳ: ಬಡವರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಆರೋಪ; ಗ್ರಾಮ ಮಟ್ಟದಲ್ಲಿ ಬೃಹತ್ ಆಂದೋಲನಕ್ಕೆ ನಾಗರಿಕ ಹಿತರಕ್ಷಣಾ ಸಮಿತಿ ಕರೆ

ಗ್ಯಾರಂಟಿಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಸರ್ಕಾರ ಮೂರುವರೆ ವರ್ಷ ಕಳೆದರೂ ಬಡವರಿಗೆ ಮನೆ, ನಿವೇಶನ ಕಲ್ಪಿಸಿಲ್ಲ. ಬೆಳೆ…

16 hours ago

ಮಂಗಳೂರು: ಬೆಳೆ ವಿಮೆ ಪರಿಹಾರದಲ್ಲಿ ಕಡಿತ: ರೈತರ ಅನುಮಾನಗಳಿಗೆ ಸರ್ಕಾರ ಸ್ಪಷ್ಟನೆ ನೀಡಲಿ–ಅರುಣ್ ಕುಮಾರ್ ಪುತ್ತಿಲ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಸೇರಿದಂತೆ ವಿವಿಧ ಬೆಳೆಗಳಿಗೆ ಹವಾಮಾನ ಆಧರಿತ ಬೆಳೆ ವಿಮೆ ಪರಿಹಾರ ನಿರೀಕ್ಷಿತ ಪ್ರಮಾಣಕ್ಕಿಂತ ಕಡಿಮೆಯಾಗಿರುವ…

2 days ago