ಪುತ್ತೂರು: ದೇಶಗಳ ಸಂಸ್ಕೃತಿಯನ್ನು ಬಿಂಬಿಸುವ ಹಾಗೂ ಇತರರೊಡನೆ ಕ್ರಿಯಾಶೀಲವಾಗಿ ಪಾಲ್ಗೊಳ್ಳುವ, ನಾಯಕತ್ವ, ಕುಶಲತೆ ಮತ್ತು ವೈಯಕ್ತಿಕ ಹೊಣೆಗಾರಿಕೆಯ ನಿಟ್ಟಿನಲ್ಲಿ ನಿಮ್ಮ ಕನಸುಗಳನ್ನು ಚಿತ್ರಿಸಿಕೊಳ್ಳಿ (ಡ್ರಾ ಯುವರ್ ಡ್ರೀಮ್) ಎಂಬ ಧೈಯದೊಂದಿಗೆ ದಕ್ಷಿಣ ಕೊರಿಯಾದ ಜಿಯೋಲ್ಲಾ ಬುಕ್- ಡೋ-ನಗರದ ಸೀಮನ್ ಗಾಮ್‌ನಲ್ಲಿ ೪ ದಿನಾಂಕ ಆ.01 ರಿಂದ ಆ.12 ರವರೆಗೆ ನಡೆಯುವ ಸೌಟ್ಸ್ ಮತ್ತು ಗೈಡ್ಸ್‌ನ 25ನೇ ವಿಶ್ವ ಜಾಂಬೂರಿಯಲ್ಲಿ 2023ರಲ್ಲಿ ಭಾರತ ದೇಶದ ಪ್ರತಿನಿಧಿಗಳಾಗಿ ಭಾಗವಹಿಸಲು ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದ ಮೂವರು ವಿದ್ಯಾರ್ಥಿಗಳು ಆಯ್ಕೆಗೊಂಡಿದ್ದಾರೆ.




