ಮಾ-25ರಂದು ಮನೆಗೆ ನುಗ್ಗಿ ವ್ಯಕ್ತಿಯೋರ್ವನಿಗೆ ಹಲ್ಲೆ ನಡೆಸಿ ಆತನ ಮೊಬೈಲ್ ಸುಳಿಗೆ ಮಾಡಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಉಳ್ಳಾಲ ಪೊಲೀಸರು ದಸ್ತಗಿರಿ ನಡೆಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಉಳ್ಳಾಲ ಖಿಲ್ರಿಯಾ ನಗರ ನಿವಾಸಿ ನಿಫಾನ್ ಅಹ್ಮದ್ ಪಾಷ ಬಂಧಿತ ಆರೋಪಿಯಾಗಿದ್ದಾನೆ. ಬಂಧಿತ ನಿಫಾನ್ ಕಳೆದ ಫೆಬ್ರವರಿ 5 ರಂದು ಮಧ್ಯರಾತ್ರಿ ತನ್ನ ಸಹವರ್ತಿಗಳಾದ ನಿಝಪತ್ ಅಲಿ ಮತ್ತು ಅಮೀರ್ ಸುಹೈಲ್ ಜೊತೆ ಸೇರಿ ಕೋಟೆಪುರದ ಮಹಮ್ಮದ್ ತಸ್ವೀರ್ ಎಂಬವರ ಮನೆಗೆ ನುಗ್ಗಿದ್ದಲ್ಲದೆ, ತಸ್ವೀರ್ಗೆ ಹಲ್ಲೆಗೈದು ಅವರ ಮೊಬೈಲ್ ಫೋನನ್ನು ದೋಚಿರುವ ಕುರಿತಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2024 ರ ಡಿಸೆಂಬರ್ ತಿಂಗಳಲ್ಲಿ ತನ್ನ ಕಾರನ್ನ ತಡೆದು ನಿಲ್ಲಿಸಿದ ನೆಪದಲ್ಲಿ ಸಹಚರರೊಂದಿಗೆ ಸೇರಿ ತಲಪಾಡಿ ಟೋಲ್‌ಗೇಟ್ ನ ಸಿಬ್ಬಂದಿಗಳಿಗೂ ಹಲ್ಲೆ ನಡೆಸಿರುವ ಕುರಿತಂತೆ ಬಂಧಿತ ಆರೋಪಿ ನಿಫಾನ್ ಅಹ್ಮದ್ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆರೆಮನೆಯ ದನಗಳು ತನ್ನ ತೋಟಕ್ಕೆ ಬಂದು ಹಾನಿಗೊಳಿಸಿವೆ ಎಂಬ ಆಕ್ರೋಶದಿಂದ ಹಟ್ಟಿಯಲ್ಲಿ ಕಟ್ಟಿಹಾಕಿದ್ದ ದನಗಳಿಗೆ ಕತ್ತಿಯಿಂದ ಕಡಿದು ಹಲ್ಲೆ ನಡೆಸಿ…
ಮಂಗಳೂರಿನಲ್ಲಿ ಮಾದಕ ವಸ್ತು ಮಾರಾಟಕ್ಕೆ ಯತ್ನಿಸಿದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಿತ ಮಾದಕ…
ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಎಂಬಲ್ಲಿ ನೇತ್ರಾವತಿ ನದಿಯಿಂದ ಅಕ್ರಮವಾಗಿ ಮರಳು ತೆಗೆದು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪ ವ್ಯಕ್ತಪಡಿಸಿ, ಇವರ…
ಖಾಸಗಿ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ಸ್ಕೂಲ್ ಬಸ್‌ಗಳು ಕಾನೂನು ಮತ್ತು ನಿಯಮಗಳನ್ನು ಪಾಲಿಸುತ್ತಿದೆಯಾ ಎಂಬ ಬಗ್ಗೆ…
ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಪಾಣೆಮಂಗಳೂರು ಫ್ಲೈಓವರ್ ಪಕ್ಕದ ಕಲ್ಲುರ್ಟಿ ಸನ್ನಿಧಿಯ ಬಳಿಯಿಂದ ಹಳೇ ಸೇತುವೆ ಕಡೆಗೆ ಸಾಗುವ ದಾರಿಯ…
ಹೆಬ್ರಿ ಸಮೀಪದ ಹೊಸೂರು ಎಂಬಲ್ಲಿ ಇಸ್ಪೀಟ್ ಜೂಜಾಟ ನಡೆಸುತ್ತಿದ್ದ ಆರೋಪದಲ್ಲಿ ಏಳು ಮಂದಿಯನ್ನು ಹೆಬ್ರಿ ಪೊಲೀಸರು ಬಂಧಿಸಿದ್ದಾರೆ. ಜೂಜಾಟ ನಡೆಯುತ್ತಿರುವ…