ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಕಿಶೋರ್ ಭಂಡಾರಿ (66) ಇವರು ಅಲ್ಪಕಾಲದ ಅಸೌಖ್ಯದಿಂದ ನಗರದ ಆಸ್ಪತ್ರೆಯಲ್ಲಿ ಮಾರ್ಚ್ 25ರಂದು ಬುಧವಾರ ನಿಧನ ಹೊಂದಿದರು.

ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಇದರ ಅಧ್ಯಕ್ಷ ದಿ. ವಿಶ್ವನಾಥ ಭಂಡಾರಿ ಬಂಡಸಾಲೆ ಪರಕೂರು ಇವರ ಪುತ್ರರಾಗಿರುವ ಇವರು ಕಾಂಗ್ರೇಸ್ ಪಕ್ಷದ ಸಕ್ರೀಯ ಕಾರ್ಯಕರ್ತರಾಗಿದ್ದರು. ಶ್ರೀ ಕಾವೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿದ್ದರು. ಇವರು ಪತ್ನಿ ಒರ್ವ ಪುತ್ರಿ ಹಾಗೂ ಸಹೋದರ ಸಹೋದರಿಯರನ್ನು ಅಗಲಿದ್ದಾರೆ. ಬೆಳ್ಳೂರು ಬಂಡಸಾಲೆಯ ಸ್ವಗ್ರಹದಲ್ಲಿ ಗುರುವಾರ ಬೆಳಗ್ಗೆ 10.30ಕ್ಕೆ ಇವರ ಅಂತಿಮ ದರ್ಶನವನ್ನು ಪಡೆಯಬಹುದು. ಮೃತರ ಅಂತ್ಯಕ್ರಿಯೆಯನ್ನು 11.30 ಕ್ಕೆ ಬೆಳ್ಳೂರು ಬಂಡಸಾಲೆಯ ವಠಾರದಲ್ಲಿ ನೆರವೇರಿಸಲಾಗುವುದು ಎಂದು ಇವರ ಸಹೋದರ ತಿಳಿಸಿದ್ದಾರೆ.



