ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮಧ್ಯೆ ಬಿಸಿರೋಡು ರೈಲ್ವೆ ಮೇಲ್ಸೇತುವೆಯ ಪಕ್ಕ ಹಾಕಲಾಗಿದ್ದ ಪ್ಲೆಕ್ಸ್ ಹೆದ್ದಾರಿಯ ಮಧ್ಯ ಭಾಗಕ್ಕೆ ಬಿದ್ದಿದೆ.
ಕಳೆದ ವಾರ ಇದೇ ರೀತಿ ಸರ್ಕಲ್ ಬಳಿಯಲ್ಲಿ ಹಾಕಲಾಗಿದ್ದ ಪ್ಲೆಕ್ಸ್ಗಳು ಹೆದ್ದಾರಿ ಮೇಲೆ ಬಿದ್ದ ಬಗ್ಗೆ ವರದಿ ಮಾಡಲಾಗಿತ್ತು. ಸೆಕೆಂಡ್‌ಗೆ ಹತ್ತಾರು ವಾಹನಗಳು ಸಂಚಾರ ಮಾಡುವ ಹೆದ್ದಾರಿಯ ಬದಿಯಲ್ಲಿ ಬೀಳುವ ರೀತಿಯಲ್ಲಿ ಪ್ಲೆಕ್ಸ್ ಅಳವಡಿಕೆಗೆ ಪುರಸಭೆ ಅನಧಿಕೃತವಾಗಿ ಅವಕಾಶ ನೀಡಿರುವುದು ಮುಂದೊಂದು ದಿನ ಅನಾಹುತಗಳು ನಡೆಯುವುದಕ್ಕೆ ಕಾರಣವಾಗಬಹುದು. ಅನಧಿಕೃತ ಪ್ಲೆಕ್ಸ್ ಅಳವಡಿಕೆಗೆ ಅವಕಾಶ ನೀಡಬಾರದು ಮತ್ತು ಪ್ಲೆಕ್ಸ್ ಬಿದ್ದು ಅನಾಹುತಗಳು ಸಂಭವಿಸುವ ಸಾಧ್ಯತೆಗಳಿವೆ ಎಂದು ಎಚ್ಚರಿಸಿದರು ಕೂಡ ಯಾವುದೇ ಸ್ಪಂದನೆ ಪುರಸಭೆಯಿಂದ ಸಿಕ್ಕಿದಂತೆ ಕಂಡು ಬಂದಿಲ್ಲ. ರಸ್ತೆ ಬದಿಯಲ್ಲಿ ರಾಜರೋಷವಾಗಿ ಬ್ಯಾನರ್‌ಗಳು, ಪ್ಲೆಕ್ಸ್ಗಳು ತಲೆಎತ್ತಿ ನಿಂತಿವೆ. ಜೊತೆಗೆ ದಿನವೊಂದಕ್ಕೆ ಪ್ಲೆಕ್ಸ್ಗಳು ಕೆಳಗೆ ಬೀಳುತ್ತಲೇ ಇವೆ. ಆದರೆ ಕಣ್ಣಿದ್ದು ಕುರುಡನಂತೆ ಆಗಿರುವ ಪುರಸಭೆಯ ಕಿವಿ ಹಿಂಡುವವರು ಯಾರು ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಸುಮಾರು ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಸುಳ್ಯ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಂಧಿತನನ್ನು…
ಸೀತಾಂಗೋಳಿ–ಪೆರ್ಲ ರಸ್ತೆಯ ಪುತ್ತಿಗೆ ಮುಗುರೋಡ್‌ನಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದು, ಅವರ ಪತ್ನಿ…
ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ ಹಚ್ಚಿ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಸುಳ್ಯ…
ಮನೆಯಲ್ಲಿ ಬಳಸಿ ಉಳಿದಿರುವ ಅಥವಾ ಬಳಕೆಯಾಗದೆ ಉತ್ತಮ ಸ್ಥಿತಿಯಲ್ಲಿರುವ ಪಾದರಕ್ಷೆಗಳನ್ನು ಬಡ ಹಾಗೂ ಪಾದರಕ್ಷೆರಹಿತ ಮಕ್ಕಳಿಗೆ ತಲುಪಿಸುವ ಉದ್ದೇಶದಿಂದ ‘ನಡಿಗೆ’…
‘ಸ್ವಚ್ಛತಾ ಹೀ ಸೇವಾ 2026’ ಕಾರ್ಯಕ್ರಮದ ಅಂಗವಾಗಿ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಅ.2ರಂದು ಬೃಹತ್ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ…
ಕರಾವಳಿಯಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇದರ ಬೆನ್ನಲ್ಲೇ ಉಡುಪಿ ಜಿಲ್ಲೆಯ ಪ್ರಮುಖ ನದಿಗಳು ಹಾಗೂ ಜಲಾಶಯಗಳ ನೀರಿನ…