ಕರಾವಳಿ

ಜಿಂಕೆ ಬೇಟೆಯಾಡುತ್ತಿದ್ದ ವೇಳೆಯೇ ಸಿಕ್ಕಿ ಬಿದ್ದ ಆರೋಪಿಗಳು…!

ಹುಣಸೂರು: ನಾಗರಹೊಳೆ ಉದ್ಯಾನದಲ್ಲಿ ಜಿಂಕೆಯನ್ನು ಬೇಟೆಯಾಡುತ್ತಿದ್ದ ಇಬ್ಬರು ಅರೋಪಿಗಳನ್ನು ಬಂಧಿಸಿರುವ ಘಟನೆ ಏಪ್ರಿಲ್ 28 ರ ಮಂಗಳವಾರ ನಡೆದಿದ್ದು, ಅರಣ್ಯಾಧಿಕಾರಿಗಳು ಕೃತ್ಯಕ್ಕೆ ಬಳಸಿದ್ದ ಪರಿಕರಗಳನ್ನು ವಶಪಡಿಸಿಕೊಂಡಿರುವ ಘಟನೆ ವೀರನಹೊಸಳ್ಳಿ ವಲಯದಲ್ಲಿ ನಡೆದಿದೆ.

 

ತಾಲೂಕಿನ ಹನಗೋಡು ಹೋಬಳಿಯ ಶಿಂಡೇನಹಳ್ಳಿ ರವಿಕುಮಾ‌ರ್ ಆಲಿಯಾಸ್ ಅಮಾಸೆ ರವಿ ಹಾಗೂ ಬೋವಿ ಕಾಲೋನಿಯ ರಾಜು ಆಲಿಯಾಸ್ ಗುಂಡ ಬಂಧಿತ ಆರೋಪಿಗಳು.

ಶಿಂಡೇನಹಳ್ಳಿಯ ಸೀನೇಗೌಡರ ಪುತ್ರ ಸುನಿಲ್‌, ಮುದಗನೂರಿನ ಬಸವೇಗೌಡರ ಪುತ್ರ ಎಂ.ಬಿ.ಗಣೇಶ ಕತ್ತಲಿನಲ್ಲಿ ಪರಾರಿಯಾಗಿರುವ ಆರೋಪಿಗಳು.

ಹೆಣ್ಣು ಜಿಂಕೆಯ ಶವ, ಬೇಟೆಗೆ ಬಳಸಿದ್ದ ಸಿಂಗಲ್ ಬ್ಯಾರಲ್ ಬಂದೂಕು, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ, ಮಚ್ಚು, 5 ಜೀವಂತ ಕಾಡತೂಸುಗಳು, ಬಳಕೆ ಮಾಡಿದ್ದ 1 ಕಾಡುತೂಸುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಘಟನೆಯ ವಿವರ: ಆರೋಪಿಗಳು ನಾಗರಹೊಳೆ ಉದ್ಯಾನದ ವೀರನಹೊಸಹಳ್ಳಿ ವನ್ಯಜೀವಿ ವಲಯಕ್ಕೆ ವನ್ಯಜೀವಿ ಭೇಟೆಯಾಡಲು ಬರುತ್ತಿರುವ ಬಗ್ಗೆ ಮಂಗಳವಾರ ಬೆಳಗಿನ ಜಾವ ಬಂದ ಖಚಿತ ಮಾಹಿತಿ ಮೇರೆಗೆ ನಾಗರಹೊಳೆ ಹುಲಿಯೋಜನೆ ನಿರ್ದೇಶಕಿ ಪಿ.ಎ.ಸೀಮಾರವರ ಮಾರ್ಗದರ್ಶನದಲ್ಲಿ ಆ‌ರ್.ಎಫ್.ಓ ವಿನೋದ್‌ಗೌಡ ನೇತೃತ್ವದ ತಂಡ ಕಣ್ಣಾವಲಿದ್ದ ವೇಳೆ ಬೆಳಗಿನ ಜಾವ 4ರ ವೇಳೆಗೆ ಚಾಮಳ್ಳಿ ಶಾಖೆಯ ಎರೆಕಟ್ಟೆ ಗಸ್ತಿನ ಹೊಸಕಟ್ಟೆ ಕೆರೆ-ಎರಕಟ್ಟೆ ಬಳಿಯ ಜೀಪ್ ರಸ್ತೆಯ ತಿರುವಿನ ಬಳಿ ಗುಂಡಿನ ಶಬ್ದ ಕೇಳಿ ಬಂದ ಕಡೆ ಸಿಬ್ಬಂದಿಗಳು ದೌಡಾಯಿಸಿ ಸುತ್ತುವರಿಯುತ್ತಿದ್ದಂತೆ ಇಬ್ಬರು ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಕತ್ತಲಿನಲ್ಲಿ ಮತ್ತಿಬ್ಬರು ಪರಾರಿಯಾಗಿದ್ದಾರೆ.

ಆರೋಪಿಗಳಿಂದ ಪರಿಕರಗಳನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮಾಹಿತಿ ನೀಡಲು ಎಸಿಎಫ್ ಮನವಿ: ಅರಣ್ಯದಂಚಿನ
ಗ್ರಾಮಸ್ಥರು ಉದ್ಯಾನದೊಳಗೆ ಅಕ್ರಮ ಪ್ರವೇಶ, ಇಂತಹ ಅಪರಾಧ ಕೃತ್ಯಗಳು ಕಂಡು ಬಂದಲ್ಲಿ ಇಲಾಖೆಗೆ ಮಾಹಿತಿ ನೀಡುವಂತೆ ಎಸಿಎಫ್‌ ಲಕ್ಷ್ಮೀಕಾಂತ್ ಮನವಿ ಮಾಡಿದ್ದಾರೆ. ಸೋಮವಾರ ಓರ್ವನನ್ನು ಬಂಧಿಸಿದ್ದರು. ವಾರದ ಹಿಂದಷ್ಟೆ ಮತ್ತೊಂದು ಪ್ರಕರಣದಲ್ಲಿ ಭೇಟೆಯಾಡಲು ಹೊಂಚು ಹಾಕಿದ್ದ ಇಬ್ಬರನ್ನು ಬಂದಿಸಿರುವುದನ್ನು ಸ್ಮರಿಸಬಹುದು.
ಕಾರ್ಯಾಚರಣೆಯಲ್ಲಿ ಆರ್.ಎಫ್.ಓ. ವಿನೋದ್‌ಗೌಡ, ಡಿಆರ್‌ಎಫ್‌ಓ ನವೀನ್‌ಕುಮಾರ್, ಸಹನಾ ವಿ.ಪಾಟೀಲ್, ಕೆ.ಶಿಲ್ಪ, ಗಸ್ತು ಅರಣ್ಯಪಾಲಕರಾದ ವೆಂಕಟೇಶ್‌, ಶಮಂತ, ನಾರಾಯಣ, ಅವಿನಾಶ್, ಅರಣ್ಯ ವೀಕ್ಷಕರಾದ ಶಾಂತಕುಮಾ‌ರ್, ಶಿವಕುಮಾರ್, ಗಾಯಿತ್ರಿ ಭಾಗವಹಿಸಿದ್ದರು.

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಮಂಜುನಾಥ್ ಶೆಟ್ಟಿ ದಂಪತಿಗೆ ಸನ್ಮಾನ

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪೋಷಕ ಸದಸ್ಯರೂ, ಬಂಟ್ಸ್ ಅಸೋಸಿಯೇಷನ್ ನಾರ್ತ್ ಅಮೆರಿಕಾ (BANA) ಅಧ್ಯಕ್ಷರೂ ಆದ ಶ್ರೀ ಮಂಜುನಾಥ್…

20 hours ago

ಉಡುಪಿ: ಕರಾವಳಿ ನಿವಾಸಿಗಳ ಸಂಕಷ್ಟಕ್ಕೆ ಸ್ಪಂದಿಸಿದ ಜಿಲ್ಲಾಡಳಿತ…!

ಉಡುಪಿ ತಾಲೂಕಿನಲ್ಲಿ ಕಡಲ್ಕೊರೆತದಿಂದ ಹಾನಿಗೊಳಗಾಗಿರುವ ಹೆಜಮಾಡಿ, ಪಡುಬಿದ್ರಿ, ಎರ್ಮಾಳು, ಕಾಪು, ಪೊಲಿಪು ಹಾಗೂ ಕಟಪಾಡಿ-ಮಟ್ಟು ಪ್ರದೇಶಗಳಿಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ.…

21 hours ago

ಬಂಟ್ವಾಳ: ಮಾಣಿ ಸಮೀಪ ಜೋಗಿಬೆಟ್ಟು ರಸ್ತೆ ಕೆರೆಯಂತಾದ ದೃಶ್ಯ….!

ಮಳೆ ಸುರಿದರೆ ಸಾಕು, ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ಪೆರಾಜೆ ಗ್ರಾಮದ ಜೋಗಿಬೆಟ್ಟು ರಸ್ತೆಯಲ್ಲಿ ಸಂಚಾರ ದುಸ್ತರವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗೆ…

21 hours ago

ವಾಷಿಂಗ್ಟನ್: ಉತ್ತರ ಅಮೆರಿಕಾ ಬಂಟರ ಸಂಘದ `ದಿಬ್ಬಣ’ ಮಹಾ ಅಧಿವೇಶನ..!

ಭಾರತ ಮತ್ತು ಅಮೆರಿಕಾಗಳು ಅನೇಕ ಸಾಮಾನ್ಯ ಅಂಶಗಳನ್ನು ಹೊಂದಿವೆ. ಅಮೆರಿಕಾ ಅವಕಾಶಗಳ ದೇಶ. ಇಲ್ಲಿಗೆ ವಲಸೆ ಬಂದು ವಾಸಿಸುತ್ತಿರುವ ಭಾರತೀಯರು…

1 day ago

ಮಂಗಳೂರು: ಮಂಗಳೂರಿನಲ್ಲಿ ಎಐ ಸಿ.ಸಿ ಕ್ಯಾಮರಾಗಳ ಅಳವಡಿಕೆ….!

ವಾಹನ ದಟ್ಟಣೆ ಹೆಚ್ಚುತ್ತಿರುವ ನಗರದಲ್ಲಿ ಸುಗಮ ಸಂಚಾರಕ್ಕೆ ಸ್ಮಾರ್ಟ್ ಸಿಟಿ ಯೋಜನೆಯಡಿ 181ಕ್ಕೂ ಅಧಿಕ ಎಐ ಸಿ.ಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.…

1 day ago

ಬಂಟ್ವಾಳ: ಮಳೆ ಅನಾಹುತ: ರಾಯಿಯ ಜೀವನ್ ಪಿಂಟೋ ಮೃತದೇಹ ಪ*ತ್ತೆ…..!

ರಾಯಿ ಗ್ರಾಮದ ಪಾಂಚಕೋಡಿ ನಿವಾಸಿ ಜೋಸೆಫ್ ಪಿಂಟೋ ಎಂಬವರ ಪುತ್ರ ಜೀವನ್ ಪಿಂಟೊ ಅವರ ಚಪ್ಪಲಿ ಮತ್ತು ಟಾರ್ಚ್ ಶನಿವಾರ…

1 day ago