ದಕ್ಷಿಣ ಕನ್ನಡ : ಏಷ್ಯಾ ಅಂತರಾಷ್ಟ್ರೀಯ ಸಾಂಸ್ಕೃತಿಕ ಅಕಾಡೆಮಿ ಕೊಡ ಮಾಡುವ ಗೌರವ ಡಾಕ್ಟರೇಟ್ ಪದವಿಯು ಅಭಿಮತ ವಾಹಿನಿಯ ಮುಖ್ಯಸ್ಥರಾದ ಮಮತಾ ಪ್ರವೀಣ್ ಶೆಟ್ಟಿ ಇವರಿಗೆ ತಮಿಳುನಾಡಿನ ಕ್ಲಾರೆಷ್ಟ ಹೋಟೆಲ್ ನ ಸಭಾಂಗಣದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಮಮತಾ ಶೆಟ್ಟರ ಮಾಧ್ಯಮ ಕ್ಷೇತ್ರದ ಅಪ್ರತಿಮ ಸಾಧನೆಯನ್ನ ಗುರುತಿಸಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಿವಾಸಿಯಾಗಿರುವ ಮಮತಾ ಪ್ರವೀಣ್ ಶೆಟ್ಟರು ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಬಂಟ್ವಾಳ ತಾಲೂಕಿನ ಮಂಚಿಯಲ್ಲಿ ಪೂರೈಸಿದವರಾಗಿದ್ದು ಪದವಿ ಶಿಕ್ಷಣವನ್ನು ಮಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿರುತ್ತಾರೆ.
ಬಾಲ್ಯದಿಂದಲೇ ನೃತ್ಯ, ನಿರೂಪಣೆ, ನಾಟಕ, ಹಾಗೂ ಕ್ರೀಡೆಯಲ್ಲಿ ಆಸಕ್ತಿ ಹೊಂದಿದವರಾಗಿದ್ದು ಇದುವರೆಗೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಮಮತಾರವರಿಗೆ ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿ ಲಾಂಗ್ ಜಂಪ್, ಹೈ ಜಂಪ್, ಓಟ, ಕಬಡ್ಡಿ, ವಾಲಿಬಾಲ್,ಖೋ ಖೋ, ಹಾಗೂ ಇನ್ನಿತರ ಕ್ರೀಡೆಗಳಿಗೆ ಸಂಬಂಧಿಸಿ ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಹಲವು ಪ್ರಶಸ್ತಿಗಳು ಅರಸಿ ಬಂದಿವೆ.
ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಲ್ಲಿ ಮಾಡಿದ ಸಾಧನೆಗಾಗಿ ಮಮತಾ ಪ್ರವೀಣ್ ಶೆಟ್ಟರಿಗೆ ಅಂದಿನ ರಾಜ್ಯಪಾಲರಾದ ರಮಾದೇವಿಯವರು ರಾಜ್ಯ ಪುರಸ್ಕಾರವನ್ನುತ್ತು ಸನ್ಮಾನಿಸಿದ್ದರು, ಅಲ್ಲದೆ ಮೂಡಬಿದಿರೆ ಸರ್ವಿಸ್ ಕೋ ಆಪರೇಟಿವ್ ಬ್ಯಾಂಕ್ ನ ಉತ್ತಮ ಮಾಧ್ಯಮ ಕ್ಷೇತ್ರದ ಗೌರವಕ್ಕೂ ಪಾತ್ರರಾಗಿದ್ದರು.
ಹಲವು ವರ್ಷಗಳ ಕಾಲ ಕರ್ನಾಟಕದ ಖಾಸಗಿ ಸುದ್ದಿ ವಾಹಿನಿಗಳಲ್ಲಿ ಕೆಲಸ ನಿರ್ವಹಿಸಿ ಅನುಭವ ಗಳಿಸಿದ ಮಮತಾ ರವರು ನಂತರದಲ್ಲಿ ತನ್ನದೇ ಮಾಲಕತ್ವದ ಅಭಿಮತ ದೃಶ್ಯ ಮಾಧ್ಯಮ ಸಂಸ್ಥೆಯನ್ನು ಸ್ಥಾಪಿಸಿ ಯಶಸ್ಸುಗಳಿಸಿದವರಾಗಿದ್ದು, ಕರ್ನಾಟಕ ರಾಜ್ಯದಲ್ಲಿ ಸುದ್ದಿ ವಾಹಿನಿಯೊಂದನ್ನು ನಡೆಸುತ್ತಿರುವ ಮೊದಲ ಹಾಗೂ ಏಕೈಕ ಮಹಿಳೆಯಾಗಿದ್ದು, ನೇರ ನಡೆನುಡಿಯ ಶೆಟ್ಟರು ಬೆದರಿಕೆಗೆ ಅಂಜದೆ, ನೈಜ್ಯ ಸುದ್ದಿಯನ್ನು ಪ್ರಕಟಿಸಿ ಹಲವು ಬಲಿಷ್ಠರ ಕೆಂಗಣ್ಣಿಗೆ ಗುರಿಯಾಗಿದ್ದು ಉಂಟು, ಸಾಧಕರ ಬದುಕು, ಕೃಷಿ ಮಾಹಿತಿ, ರಾಜಕೀಯ,ಜಾನಪದ,ಕಂಬಳ, ಹೀಗೆ ಎಲ್ಲಾ ವಿಚಾರಗಳ ಬಗ್ಗೆ ಮಾಧ್ಯಮದಲ್ಲಿ ಪ್ರಕಟಿಸಿ ಜನರಿಂದ ಭೇಷ್ ಎಂದು ಕರೆಸಿಕೊಂಡ ಮಹಿಳೆಯಾಗಿದ್ದು, ದೃಶ್ಯಮಾಧ್ಯಮದ ಜೊತೆಗೆ ಸೋಶಿಯಲ್ ಮೀಡಿಯಾಗಳಲ್ಲೂ ಸುದ್ದಿ ಪ್ರಕಟಿಸುವ ಇವರು ಮುಂದಿನ ದಿನಗಳಲ್ಲಿ ಕರಾವಳಿ ಕರ್ನಾಟಕದ ಎಲ್ಲ ಕಡೆಗಳಿಗೆ ದೃಶ್ಯಮಾಧ್ಯಮವನ್ನು ವಿಸ್ತರಿಸುವ ಯೋಚನೆಯುಳ್ಳವರಾಗಿದ್ದು ಇವರ ಈ ಎಲ್ಲಾ ಸಾಧನೆಯನ್ನು ಗುರುತಿಸಿ ಅಂತರರಾಷ್ಟ್ರೀಯ ಸಾಂಸ್ಕೃತಿಕ ಅಕಾಡೆಮಿ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದೆ.
ಮೀನಾಕ್ಷಿ ಮತ್ತು ಮೋಹನ ಶೆಟ್ಟರ ಮಗಳಾದ ಮಮತಾ ರವರು ಪತಿ ಪ್ರವೀಣ್ ಹಾಗೂ ಎರಡು ಮಕ್ಕಳ ತುಂಬು ಸಂಸಾರದ ಜೀವನ ನಡೆಸುತ್ತಿದ್ದು, ಮಮತಾ ಶೆಟ್ಟರಿಂದ ಇನ್ನಷ್ಟು ಸಮಾಜ ಸೇವೆ, ವಸ್ತುನಿಷ್ಠ ಮಾಧ್ಯಮ ಸೇವೆ ಸಿಗಲಿ ಎಂದು ಆಶಿಸೋಣ, ಹಾರೈಸೋಣ.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…