ಸ್ವಚ್ಛತೆಯ ಬಗ್ಗೆ ತಿಳಿ ಹೇಳಬೇಕಾದ ಸರಕಾರಿ ಕಚೇರಿಯ ಮುಂಭಾಗದಲ್ಲಿ ರಾಶಿ ಹಾಕಲಾದ ಕಸದ ಬಗ್ಗೆ ಸಾರ್ವಜನಿಕರು ಮಾತನಾಡುವಂತಾಗಿದೆ.
ಬಿಸಿರೋಡಿನ ಪುರಸಭಾ ಅಧೀನದಲ್ಲಿ ಇರುವ ವಾಣಿಜ್ಯ ಸಂಕೀರ್ಣದಲ್ಲಿ ಇರುವ ಬೂಡ ಕಚೇರಿಯ ಬಾಗಿಲಿನಲ್ಲಿ ಕಸದ ರಾಶಿ ಬಿದ್ದಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಬೂಡ ಕಚೇರಿಯ ಪಕ್ಕದಲ್ಲಿ ಇರುವ ಸಲೂನ್ ಒಂದರ ತ್ಯಾಜ್ಯ ವಸ್ತುಗಳನ್ನು ಬೂಡ ಕಚೇರಿಗೆ ಬರುವ ದಾರಿಯಲ್ಲಿ ಹಾಕಲಾಗಿದ್ದು, ಕಚೇರಿಗೆ ಬರುವ ದಾರಿಯಲ್ಲಿ ಚೆಲ್ಲಾಪಿಲ್ಲಿಯಾಗಿದೆ. ಆದರೂ ಬೂಡ ಕಚೇರಿಯ ಅಧ್ಯಕ್ಷರಾಗಲಿ, ಅಧಿಕಾರಿಯಾಗಲಿ ಚಕಾರವೆತ್ತಿಲ್ಲ ಎಂಬುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ತಲೆಕೂದಲಿನ ರಾಶಿ ಇಡೀ ಕಟ್ಟಡದಲ್ಲಿ ಹರಡಿದೆ. ಕಟ್ಟಡದ ಕೆಳಭಾಗದಲ್ಲಿ ಕ್ಯಾಂಟೀನ್ ಕೂಡ ಇದ್ದು, ತಲೆಕೂದಲಿನ ರಾಶಿ ಮತ್ತು ಚೆಲ್ಲಾಪಿಲ್ಲಿಯಾದ ದೃಶ್ಯ ಕಂಡು ಗಾಳಿಯಲ್ಲಿ ಇಲ್ಲಿನ ಆಹಾರವನ್ನು ಸೇರಬಹುದೇ ಎಂಬ ಆತಂಕವನ್ನು ಕೂಡ ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ. ಹಾಗಾಗಿ ಸಂಬಂಧಿಸಿದ ಇಲಾಖೆ ಅಂಗಡಿ ಮಾಲಕರಿಗೆ ಸೂಕ್ತವಾದ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.
ಯಕ್ಷಧ್ರುವ ಪಟ್ಲ ಫೌಂಡೇಷನ್ ಮಂಗಳೂರು ಇದರ ಜೊತೆ ಕಾರ್ಯದರ್ಶಿ ರವಿ ಶೆಟ್ಟಿ ಅಶೋಕ್ ನಗರ ಅಪಘಾತದಿಂದ ಮಂಗಳವಾರ (ಜು.21) ಮುಂಜಾನೆ…
ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ದಾಸೋಟ್ಟು-ಕುಕ್ಕಾಜೆ ನಿವಾಸಿ ರಮೇಶ್ ಪೂಜಾರಿ ಅವರ ಮನೆಯ ಹಿಂಭಾಗಕ್ಕೆ ಹೊಂದಿಕೊಂಡಿದ್ದ ಬಚ್ಚಲು ಮನೆ ಹಾಗೂ…
ಪೊಲೀಸ್ ಇಲಾಖೆಯ ನಿಜವಾದ ಕರ್ತವ್ಯನಿಷ್ಠೆ, ಸಮಯಪ್ರಜ್ಞೆ ಮತ್ತು ಮಾನವೀಯತೆಯ ಅಪರೂಪದ ಉದಾಹರಣೆಯೊಂದು ಸೂರಿಕುಮೇರ್ ಪೆಟ್ರೋಲ್ ಬಂಕ್ ಸಮೀಪದಲ್ಲಿ ನಡೆದ ಅಪಘಾತದ…
ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೂಡಬಿದರೆಯ ಮಿಜಾರು ಕೊಪ್ಪದಕುಮೇರಿಯಲ್ಲಿ ಸಂಜೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ…
ನಿಯಂತ್ರಣ ತಪ್ಪಿದ ಟಿಪ್ಪರ್ ಲಾರಿಯೊಂದು ರಸ್ತೆ ಬದಿಯ ಮರವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡ ಘಟನೆ ವಿಟ್ಲ…
ಶುಕ್ರವಾರ ಸಂಜೆ ಬೀಸಿದ ಬಿರುಗಾಳಿ ಮಳೆಗೆ ರಾಷ್ಟ್ರೀಯ ಹೆದ್ದಾರಿ ಮಾಣಿ ಬೊಳ್ಳುಕಲ್ಲಿನಿಂದ ಪೆರಾಜೆ ಶ್ರೀ ರಾಮಚಂದ್ರಾಪುರ ಮಠಕ್ಕೆ ಹೋಗುವ ಕಮಲ…