ಕರಾವಳಿ

ಮಂಗಳೂರು: ಮೇ 23 ಶನಿವಾರದಂದು ಅದ್ದೂರಿ ಪಾಲೆಮಾರ್ ಸಭಾಂಗಣಗಳ ಮಹಾ ಲೋಕಾರ್ಪಣಾ ಸಮಾರಂಭ..!

ಕರಾವಳಿಯ ಹೆಮ್ಮೆಯ ಹಾಗೂ ಅತ್ಯಂತ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆಯಾದ ಲ್ಯಾಂಡ್ ಲಿಂಕ್ಸ್, ಕರಾವಳಿ ಭಾಗದಲ್ಲಿ ಕಳೆದ 45 ವರ್ಷಗಳಿಂದ ತನ್ನ ಪ್ರಾಮಾಣಿಕ ಮತ್ತು ಯಶಸ್ವಿ ಉದ್ಯಮದ ಮೂಲಕ ಲಕ್ಷಾಂತರ ಜನರ ನಂಬಿಕೆಯನ್ನು ಗಳಿಸಿದೆ. ಈ ಸುದೀರ್ಘ ಯಶಸ್ವಿ ಹಾದಿಯ ಸವಿನೆನಪಿಗಾಗಿ ಸಂಸ್ಥೆಯು ಮಂಗಳೂರಿನ ಪ್ರಮುಖ ನಾಲ್ಕು ಸ್ಥಳಗಳಲ್ಲಿ ಪ್ರಪ್ರಥಮ ಬಾರಿಗೆ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ, ನಾಡಿನ ಜನತೆಗೆ ಯೋಗ್ಯವಾದ ನಾಲ್ಕು ಭವ್ಯ ಸಭಾಭವನಗಳನ್ನು ಏಕಕಾಲದಲ್ಲಿ ಲೋಕಾರ್ಪಣೆ ಮಾಡುತ್ತಿದೆ. ಈ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವದ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಂಧ್ರ ಪ್ರದೇಶದ ಗೌರವಾನ್ವಿತ ರಾಜ್ಯಪಾಲರಾದ ಸನ್ಮಾನ್ಯ ಜ| ಎಸ್. ಅಬ್ದುಲ್ ನಜೀರ್ ಅವರು ಆಗಮಿಸಿ, ನಾಲ್ಕೂ ಸಭಾಂಗಣಗಳನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡಲಿದ್ದಾರೆ.

ಅತ್ಯಾಧುನಿಕ ಸೌಲಭ್ಯಗಳು, ಐಷಾರಾಮಿ ವಿನ್ಯಾಸ ಹಾಗೂ ಪ್ರಕೃತಿಯ ಸೊಬಗನ್ನು ಮೈಗೂಡಿಸಿಕೊಂಡಿರುವ ಈ ನಾಲ್ಕು ಅದ್ದೂರಿ ಪಾಲೆಮಾರ್ ಸಭಾಂಗಣಗಳ ಮಹಾ ಲೋಕಾರ್ಪಣಾ ಸಮಾರಂಭವು ಮೇ 23, 2026 ರ ಶನಿವಾರದಂದು ಅತ್ಯಂತ ವೈಭವದಿಂದ ಜರುಗಲಿದೆ. ಅಂದು ಬೆಳಿಗ್ಗೆ 10:00 ಗಂಟೆಗೆ ಮಂಗಳೂರಿನ ಮೇರಿಹಿಲ್‌ನಲ್ಲಿರುವ ಪಾಲೆಮಾರ್ ಕನ್ವೆನ್ಶನ್ ಸೆಂಟರ್‌ನಲ್ಲಿ ಲೋಕಾರ್ಪಣಾ ಕಾರ್ಯಕ್ರಮ ನಡೆಯಲಿದೆ.

ಗಣ್ಯರ ಮಹಾಸಂಗಮ
ಸಮಾರಂಭದಲ್ಲಿ ಭಾರತ ಸರ್ಕಾರದ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ, ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಶ್ರೀ ಯು. ಟಿ. ಖಾದರ್, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕರಾದ ಡಾ. ವೈ. ಭರತ್ ಶೆಟ್ಟಿ, ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕರಾದ ಶ್ರೀ ಡಿ. ವೇದವ್ಯಾಸ ಕಾಮತ್, ಮುಲ್ಕಿ-ಮೂಡುಬಿದಿರೆ ಕ್ಷೇತ್ರದ ಶಾಸಕರಾದ ಶ್ರೀ ಉಮಾನಾಥ ಕೋಟ್ಯಾನ್ ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಐವನ್ ಡಿಸೋಜ ಸೇರಿದಂತೆ ಕರಾವಳಿ ಮತ್ತು ರಾಜ್ಯ ಮಟ್ಟದ ಹಲವಾರು ರಾಜಕೀಯ, ಸಾಮಾಜಿಕ, ಧಾರ್ಮಿಕ ಮುಖಂಡರು ಹಾಗೂ ಉದ್ಯಮಿಗಳು ಭಾಗವಹಿಸಲಿದ್ದಾರೆ.

ಸಮಾಜಕ್ಕೆ ವಾಪಸ್ ನೀಡುವ ಉದಾತ್ತ ಧ್ಯೇಯ
ಈ ಮಹತ್ವಾಕಾಂಕ್ಷಿ ಯೋಜನೆಯು ಲ್ಯಾಂಡ್ ಲಿಂಕ್ಸ್ ಗ್ರೂಪ್‌ನ ಅಧ್ಯಕ್ಷರು ಮತ್ತು ಕರ್ನಾಟಕ ಸರಕಾರದ ಮಾಜಿ ಸಚಿವರಾದ ಕೃಷ್ಣ ಜೆ. ಪಾಲೆಮಾರ್ ಅವರ ಕನಸಿನ ಕೂಸಾಗಿದೆ. ಕರಾವಳಿಯ ಸಾಂಸ್ಕೃತಿಕ ಶ್ರೀಮಂತಿಕೆಗೆ ಒತ್ತು ನೀಡುವುದು ಮತ್ತು ಇಲ್ಲಿನ ಜನರಿಗೆ ಸುಲಭವಾಗಿ ಕೈಗೆಟುಕುವ ದರದಲ್ಲಿ ಅತ್ಯುನ್ನತ ಸೌಲಭ್ಯಗಳ ಸಭಾಂಗಣಗಳನ್ನು ಒದಗಿಸುವುದು ಅವರ ಮೂಲ ಉದ್ದೇಶವಾಗಿದೆ. ಈ ಸಭಾಭವನಗಳು ವಿವಾಹ ಕಾರ್ಯಕ್ರಮಗಳು, ಸಾಮೂಹಿಕ ವಿವಾಹಗಳು, ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳು, ಉದ್ಯೋಗ ಮೇಳಗಳು, ವಸ್ತು ಪ್ರದರ್ಶನಗಳು, ಸಾರ್ವಜನಿಕ ಕಾರ್ಯಕ್ರಮಗಳು ಹಾಗೂ ಮಹಿಳಾ ಸಬಲೀಕರಣದಂತಹ ಸಮಾಜಮುಖಿ ಚಟುವಟಿಕೆಗಳಿಗೆ ಮುಕ್ತವಾಗಿರಲಿವೆ.


ಈ ಕುರಿತು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡ ಕೃಷ್ಣ ಜೆ. ಪಾಲೆಮಾರ್ ಅವರು “ಈ ನಾಲ್ಕು ಸಭಾಭವನಗಳನ್ನು ನಾನು ಕೇವಲ ಒಬ್ಬ ಉದ್ಯಮಿಯ ಲಾಭದ ದೃಷ್ಟಿಯಿಂದ ನಿರ್ಮಿಸಿದ್ದಲ್ಲ. ಕರಾವಳಿಯ ಜನತೆ ಕಳೆದ 45 ವರ್ಷಗಳಿಂದ ನಮಗೆ ನೀಡಿದ ಪ್ರೀತಿ ಮತ್ತು ಬೆಂಬಲಕ್ಕೆ ಪ್ರತಿಯಾಗಿ, ಸಮಾಜಕ್ಕೆ ಏನಾದರೂ ಕೊಡುಗೆಯನ್ನು ನೀಡಬೇಕು ಎಂಬ ಸದುದ್ದೇಶದಿಂದ ಇವುಗಳನ್ನು ರೂಪಿಸಿದ್ದೇನೆ. ಬಡ ಕುಟುಂಬಗಳ ಸಾಮೂಹಿಕ ವಿವಾಹದಂತಹ ಸಂದರ್ಭದಲ್ಲಿ ಹೆತ್ತವರ ಕಣ್ಣಲ್ಲಿ ಕಾಣುವ ಸಾರ್ಥಕತೆ ಮತ್ತು ನೆಮ್ಮದಿಯ ಭಾವವೇ ನನಗೆ ನಿಜವಾದ ಸಂಪತ್ತು. ನಮ್ಮ ಈ ಸಂಸ್ಥೆ ಸದಾ ಸಾರ್ವಜನಿಕರ ಹಿತವನ್ನು ಬಯಸುತ್ತದೆ” ಎಂದು ತಿಳಿಸಿದ್ದಾರೆ.

ಸಾಮಾಜಿಕ ಬದ್ಧತೆ ಮತ್ತು ಉಚಿತ ಸೇವೆ
ಲ್ಯಾಂಡ್ ಲಿಂಕ್ಸ್ ಸಂಸ್ಥೆಯು ಸದಾ ಸಾಮಾಜಿಕ ಕಳಕಳಿಗೆ ಹೆಸರುವಾಸಿಯಾಗಿದೆ. ಜಾತಿ, ಧರ್ಮ, ಬಡವ-ಬಲ್ಲಿದ ಎಂಬ ಯಾವುದೇ ಭೇದಭಾವವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವುದು ಸಂಸ್ಥೆಯ ಮುಖ್ಯ ಧ್ಯೇಯವಾಗಿದೆ. ಈ ಸಾಮಾಜಿಕ ಬದ್ಧತೆಯ ಭಾಗವಾಗಿ, ಸಮಾಜದ ಒಳಿತಿಗಾಗಿ ಆಯೋಜಿಸುವ ಸಾಮೂಹಿಕ ವಿವಾಹಗಳು ಹಾಗೂ ಸದುದ್ದೇಶದ ಉದಾತ್ತ ಸಾರ್ವಜನಿಕ ಕಾರ್ಯಕ್ರಮಗಳಿಗೆ ಈ ಎಲ್ಲಾ ಸಭಾಂಗಣಗಳನ್ನು ನಿಯಮಾನುಸಾರವಾಗಿ ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ.

ಶೈಕ್ಷಣಿಕ ಸಾಧಕರಿಗೆ ಗೌರವ
ಲೋಕಾರ್ಪಣಾ ಸಮಾರಂಭದ ಮತ್ತೊಂದು ವಿಶೇಷ ಆಕರ್ಷಣೆಯಾಗಿ, ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುತ್ತಿರುವ ವಿಕಾಸ್ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ಶೈಕ್ಷಣಿಕ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದು. ಈ ಮೂಲಕ ಯುವ ಪೀಳಿಗೆಯು ದೇಶದ ಪ್ರಗತಿಗೆ ಮತ್ತಷ್ಟು ಕೊಡುಗೆ ನೀಡಲು ಸ್ಫೂರ್ತಿ ತುಂಬಲಾಗುವುದು.

ನಾಲ್ಕು ಸಭಾಭವನಗಳ ವಿಶಿಷ್ಟತೆ ಮತ್ತು ಅತ್ಯಾಧುನಿಕ ಸೌಲಭ್ಯಗಳು
ಪ್ರತಿಯೊಂದು ಸಭಾಭವನವನ್ನು ಅತ್ಯಂತ ಚಿಂತನಶೀಲವಾಗಿ ರೂಪಿಸಲಾಗಿದ್ದು, ಸರ್ವ ಧರ್ಮದವರೂ ತಮ್ಮ ಇಷ್ಟದ ಶೈಲಿಯಲ್ಲಿ ಅತ್ಯಂತ ಆರಾಮದಾಯಕವಾಗಿ ಕಾರ್ಯಕ್ರಮಗಳನ್ನು ನಡೆಸುವಂತೆ ವಿನ್ಯಾಸಗೊಳಿಸಲಾಗಿದೆ. ಬಂದ ಅತಿಥಿಗಳು ಪ್ರಶಾಂತ ಹಾಗೂ ನಿರಾಳ ವಾತಾವರಣದಲ್ಲಿ ಕಾಲ ಕಳೆಯಲು ಇವು ಸೂಕ್ತ ತಾಣಗಳಾಗಿವೆ.

1. ಪಾಲೆಮಾರ್ ಕನ್ವೆನ್ಶನ್ ಸೆಂಟರ್, ಮೇರಿಹಿಲ್, ಮಂಗಳೂರು
ಅದ್ದೂರಿತನ ಮತ್ತು ಸಾಂಪ್ರದಾಯಿಕತೆಯ ಅದ್ಭುತ ಸಮ್ಮಿಲನವೇ ಮೇರಿಹಿಲ್‌ನಲ್ಲಿರುವ ಪಾಲೆಮಾರ್ ಕನ್ವೆನ್ಶನ್ ಸೆಂಟರ್. ನೋಡುಗರ ಕಣ್ಣು ಸೆಳೆಯುವ ಮರದ ಕರಕುಶಲತೆಯಿಂದ ಕೂಡಿದ ಭವ್ಯ ಒಳಾಂಗಣ ವಿನ್ಯಾಸ ಇದರ ಪ್ರಮುಖ ಆಕರ್ಷಣೆಯಾಗಿದೆ. ಸಾಂಪ್ರದಾಯಿಕ ಮದುವೆ ಸಮಾರಂಭಗಳ ಜೊತೆಗೆ ಕಾರ್ಪೊರೇಟ್ ಶೈಲಿಯ ಹೈ-ಟೆಕ್ ಕಾರ್ಯಕ್ರಮಗಳನ್ನು ನಡೆಸಲು ಸೂಕ್ತವಾಗಿದೆ.

ವಿಶೇಷತೆಗಳು: ಅತ್ಯಾಧುನಿಕ ತಂತ್ರಜ್ಞಾನದ ಒಳಾಂಗಣ ಸಭಾಂಗಣ, ಸುಸಜ್ಜಿತ ಹಾಗೂ ವಿಶಾಲವಾದ ಅತಿಥಿ ಕೊಠಡಿಗಳು, ಪ್ರತ್ಯೇಕ ಪ್ರಾರ್ಥನಾ ಮಂದಿರ ಹಾಗೂ ಅತ್ಯಂತ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ.

ಶೀಘ್ರದಲ್ಲಿಯೇ ಅನಾವರಣ: ಅದ್ಭುತ ಒಳಾಂಗಣ ಸಭಾಂಗಣ ಇರುವ ಈ ಸ್ಥಳದಲ್ಲಿ ಶೀಘ್ರದಲ್ಲಿಯೇ ಗ್ರೀನ್ ವ್ಯಾಲಿ ಎಂಬ ವಿನೂತನ ತೆರೆದ ಸಭಾಂಗಣವೂ ಸಿದ್ಧವಾಗಲಿದೆ. ಅತ್ಯಂತ ವಿಶಾಲವಾದ ಸ್ಥಳಾವಕಾಶ ಇರುವ ಈ ತೆರೆದ ಸಭಾಂಗಣ ಸರ್ವರೀತಿಯ ಹೊರಾಂಗಣ ಕಾರ್ಯಕ್ರಮಗಳಿಗೂ ಸೂಕ್ತವಾಗುವಂತೆ ಮೂಡಿಬರಲಿದೆ.

2. ಪಾಲೆಮಾರ್ ಗಾರ್ಡನ್, ಮೋರ್ಗನ್ಸ್ ಗೇಟ್, ಮಂಗಳೂರು
ಮಂಗಳೂರು ನಗರದ ಹೃದಯಭಾಗದಲ್ಲಿರುವ ಮೋರ್ಗನ್ಸ್ ಗೇಟ್‌ನಲ್ಲಿ ಸಾಂಸ್ಕೃತಿಕ ಪರಂಪರೆಯ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುವಂತೆ ಈ ಭವ್ಯ ಗಾರ್ಡನ್ ನಿರ್ಮಿಸಲಾಗಿದೆ. ಪ್ರಶಾಂತವಾದ ಹಸಿರು ಪರಿಸರದಲ್ಲಿ, ಐಷಾರಾಮಿತನದ ಜೊತೆಗೆ ನಿಸರ್ಗದ ಸೌಂದರ್ಯವನ್ನು ಸವಿಯಲು ಇಚ್ಛಿಸುವವರಿಗೆ ಇದು ಸ್ವರ್ಗದಂತಿದೆ. ಇದರ ಅತ್ಯಾಕರ್ಷಕ ವಿನ್ಯಾಸವು ಯಾವುದೇ ಸಮಾರಂಭವನ್ನು ಅದ್ದೂರಿಯಾಗಿ ನಡೆಸಲು, ಬದುಕಿನ ಸುಂದರ ಕ್ಷಣಗಳನ್ನು ಅವಿಸ್ಮರಣೀಯಗೊಳಿಸಲು ಅನುವು ಮಾಡಿಕೊಡುತ್ತದೆ.

ವಿಶೇಷತೆಗಳು: ವೈಭವದ ಒಳಾಂಗಣ ಸಭಾಂಗಣ, ತೆರೆದ ಸಭಾಂಗಣ, ಸಾಂಪ್ರದಾಯಿಕ ಕಾಟೇಜ್‌ಗಳು ಮತ್ತು ವಿಶಾಲವಾದ ರೂಮ್‌ಗಳು, ಸುಂದರವಾದ ಹೊರಾಂಗಣ ಈಜುಕೊಳ, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಮತ್ತು ಬೃಹತ್ ಹಸಿರು ಮೈದಾನ.

3. ಪಾಲೆಮಾರ್ ಫಾರ್ಮ್ಸ್, ಸುರತ್ಕಲ್, ಮಂಗಳೂರು
ನಗರ ಪ್ರದೇಶದ ವಾತಾವರಣದಿಂದ ದೂರವಿದ್ದು, ನಿಸರ್ಗದ ಮೌನ, ತಂಪಾದ ಗಾಳಿ, ಮರಗಳ ನೆರಳು ಹಾಗೂ ಪಕ್ಷಿಗಳ ಕಲರವದ ನಡುವೆ ಹಸಿರನ್ನು ಪ್ರೀತಿಸುವವರಿಗಾಗಿ ಸುರತ್ಕಲ್ ಸಮೀಪ 20 ಎಕರೆ ವಿಶಾಲವಾದ ಜಾಗದಲ್ಲಿ ಈ ಫಾರ್ಮ್ಸ್ ಸಿದ್ಧಗೊಂಡಿದೆ. ಆಪ್ತ ಒಡನಾಡಿಗಳೊಂದಿಗೆ ಆಚರಿಸುವ ಮದುವೆ, ಹೊರಾಂಗಣ ಕಾರ್ಯಕ್ರಮಗಳು, ಬರ್ತ್ಡೇ ಪಾರ್ಟಿಗಳು, ಮೆಹೆಂದಿ ಹಾಗೂ ಕೌಟುಂಬಿಕ ಸಮಾರಂಭಗಳಿಗೆ ಇದು ಸೂಕ್ತ ತಾಣ.

ವಿಶೇಷತೆಗಳು: ವಿಶಾಲವಾದ ತೆರೆದ ಸಭಾಂಗಣ, ಈಜುಕೊಳ, ಮಕ್ಕಳು ಆನಂದಿಸಲು ಸುಸಜ್ಜಿತ ಮಕ್ಕಳ ಆಟದ ಪ್ರದೇಶ ಮತ್ತು ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ.

4. ನೇತ್ರಾವತಿ ಸಭಾಭವನ, ಕಡೆಕಾರ್, ಜೆಪ್ಪಿನಮೊಗರು, ಮಂಗಳೂರು
ಮAಗಳೂರಿನ ಜೀವನಾಡಿ ನೇತ್ರಾವತಿ ನದಿಯ ದಡದಲ್ಲಿರುವ ಜೆಪ್ಪಿನಮೊಗರಿನ ಕಡೆಕಾರ್ ಎಂಬ ಅತ್ಯಂತ ಪ್ರಶಾಂತ ಮತ್ತು ಪವಿತ್ರ ವಾತಾವರಣದಲ್ಲಿ ಈ ಸಭಾಂಗಣ ತಲೆಯೆತ್ತಿದೆ. ಒಂದು ಬದಿಯಲ್ಲಿ ನದಿಯ ತಣ್ಣನೆ ಗಾಳಿ, ಇನ್ನೊಂದು ಬದಿಯಲ್ಲಿ ಪುರಾತನ ದೇವಸ್ಥಾನವಿದ್ದು, ಇಡೀ ಪರಿಸರಕ್ಕೆ ದೈವಿಕ ಕಳೆಯನ್ನು ನೀಡುತ್ತದೆ. ವಿವಾಹ ಕಾರ್ಯಕ್ರಮಗಳು, ಧಾರ್ಮಿಕ ಕಾರ್ಯಕ್ರಮಗಳು, ಸಂಗೀತ ಕಛೇರಿಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಇದು ಅತ್ಯಂತ ಪ್ರಶಸ್ತವಾಗಿದೆ. ಕಡಿಮೆ ದರದಲ್ಲಿ ಜನಸಾಮಾನ್ಯರಿಗೂ ಅನುಕೂಲವಾಗುವಂತೆ ಇದನ್ನು ನಿರ್ಮಿಸಲಾಗಿದೆ.

ವಿಶೇಷತೆಗಳು: ವಿಶಾಲ ಒಳಾಂಗಣ ಸಭಾಂಗಣ, ಅಚ್ಚುಕಟ್ಟಾದ ಊಟದ ಹಾಲ್ ಮತ್ತು ಅಡುಗೆ ಮನೆ. (ಗಮನಿಸಿ: ಇಲ್ಲಿ ಕೇವಲ ಶುದ್ಧ ಸಸ್ಯಾಹಾರಿ ಆಹಾರ ತಯಾರಿಕೆಗೆ ಮಾತ್ರ ಅವಕಾಶವಿದ್ದು, ಸಾತ್ವಿಕ ವಾತಾವರಣ ಬಯಸುವವರ ನೆಚ್ಚಿನ ತಾಣವಾಗಲಿದೆ).

ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ
ಇತ್ತೀಚಿನ ದಿನಗಳಲ್ಲಿ ಯಾವುದೇ ಸಮಾರಂಭಕ್ಕೆ ತೆರಳುವಾಗ ಸಾರ್ವಜನಿಕರನ್ನು ಕಾಡುವ ಅತಿ ದೊಡ್ಡ ಸಮಸ್ಯೆ ಎಂದರೆ ಅದು ವಾಹನ ಪಾರ್ಕಿಂಗ್. ಈ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ನಾಲ್ಕೂ ಸಭಾಭವನಗಳಲ್ಲಿ ಅತ್ಯಂತ ವಿಶಾಲವಾದ, ವ್ಯವಸ್ಥಿತವಾದ ಪಾರ್ಕಿಂಗ್ ಸ್ಥಳಾವಕಾಶವನ್ನು ಕಲ್ಪಿಸಲಾಗಿದೆ. ನೂರಾರು ವಾಹನಗಳು ಏಕಕಾಲದಲ್ಲಿ ಯಾವುದೇ ಗೊಂದಲವಿಲ್ಲದೆ ಬಂದು ಹೋಗಲು ಇಲ್ಲಿ ಮುಕ್ತ ಅವಕಾಶವಿದೆ.

ರಾಷ್ಟಿçÃಯ ಹೆದ್ದಾರಿ ಹಾಗೂ ಮುಖ್ಯರಸ್ತೆಗಳ ಸಂಪರ್ಕ
ಎಲ್ಲಾ ನಾಲ್ಕು ಸಭಾಭವನಗಳನ್ನು ನಗರದ ಪ್ರಮುಖ ಮುಖ್ಯ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿಯೇ ನಿರ್ಮಿಸಲಾಗಿದೆ. ಹಾಗಾಗಿ ದೂರದ ಊರುಗಳಿಂದ ಬರುವ ಅತಿಥಿಗಳು ಹೆಚ್ಚಿನ ಹುಡುಕಾಟವಿಲ್ಲದೆ, ಉತ್ತಮ ರಸ್ತೆ ಸಂಪರ್ಕದ ಮೂಲಕ ಅತ್ಯಂತ ಸುಲಭವಾಗಿ ಮತ್ತು ಸರಾಗವಾಗಿ ನಿಗದಿತ ಸಮಯಕ್ಕೆ ಸಭಾಭವನಗಳನ್ನು ತಲುಪಬಹುದು.

ಬಡವ-ಬಲ್ಲಿದನೆಂಬ ಭೇದವಿಲ್ಲ, ಎಲ್ಲರಿಗೂ ಕೈಗೆಟಕುವ ದರದಲ್ಲಿ ಲಭ್ಯ
ಕಾರ್ಪೊರೇಟ್ ಶೈಲಿಯ ಅದ್ದೂರಿ ಈವೆಂಟ್‌ಗಳಿಂದ ಹಿಡಿದು ಜನಸಾಮಾನ್ಯರ ಸಣ್ಣ ಬಜೆಟ್‌ನ ಕಾರ್ಯಕ್ರಮಗಳವರೆಗೆ, ಪ್ರತಿಯೊಬ್ಬರ ಆರ್ಥಿಕ ಶಕ್ತಿಗೆ ತಕ್ಕಂತೆ ಇಲ್ಲಿ ಸಭಾಂಗಣಗಳು ಲಭ್ಯವಿವೆ. ಬಡವ-ಬಲ್ಲಿದನೆಂಬ ಭೇದವಿಲ್ಲದೆ ಎಲ್ಲಾ ವರ್ಗದ ಜನರಿಗೂ ಒಪ್ಪುವ ಮತ್ತು ಸಲ್ಲುವ ಸುಂದರ ತಾಣಗಳಿವು. ಇಂದಿನ ದಿನಗಳಲ್ಲಿ ಮದುವೆಗಳು ಸಾಮಾನ್ಯ ಕುಟುಂಬಗಳಿಗೆ ಆರ್ಥಿಕ ಹೊರೆಯಾಗುತ್ತಿದ್ದು, ಅದಕ್ಕೆ ಪರ್ಯಾಯವಾಗಿ ಅತ್ಯಾಧುನಿಕ ಸೌಲಭ್ಯಗಳುಳ್ಳ, ಗೌರವಯುತ ಹಾಗೂ ಎಲ್ಲ ವರ್ಗದ ಜನರಿಗೂ ಕೈಗೆಟಕುವ ದರದ ಸಭಾಂಗಣಗಳನ್ನು ಇಲ್ಲಿ ರೂಪಿಸಲಾಗಿದೆ.

ಸರ್ವಧರ್ಮ ಸಮನ್ವಯ
ಯಾವುದೇ ಒಂದು ವರ್ಗಕ್ಕೆ ಸೀಮಿತವಾಗದೇ ಎಲ್ಲಾ ಧರ್ಮ, ಜಾತಿ, ಸಮುದಾಯ ಹಾಗೂ ಎಲ್ಲಾ ಆರ್ಥಿಕ ಹಂತದ ಕುಟುಂಬಗಳಿಗೆ ಇಲ್ಲಿ ಸಮಾನ ಅವಕಾಶ ಮತ್ತು ಸೌಲಭ್ಯಗಳನ್ನು ಒದಗಿಸುವ ಮಹತ್ವಾಕಾಂಕ್ಷಿ ಉದ್ದೇಶ ಹೊಂದಲಾಗಿದೆ.

ಇದು ಸಭಾಭವನ ಮಾತ್ರವಲ್ಲ, ಸಾಮಾಜಿಕ ಕ್ರಾಂತಿ
ಇದು ಕೇವಲ ಕಟ್ಟಡಗಳ ಉದ್ಘಾಟನೆಯಲ್ಲ, ಮದುವೆ ಮತ್ತು ಸಾಮಾಜಿಕ ಕಾರ್ಯಕ್ರಮಗಳ ಕ್ಷೇತ್ರದಲ್ಲಿ ಹೊಸ ಚಿಂತನೆ ಹಾಗೂ ಸಮಾನತೆಯನ್ನು ಪರಿಚಯಿಸುವ ಐತಿಹಾಸಿಕ ಸಾಮಾಜಿಕ ಚಳವಳಿಯಾಗಿದೆ. ಈ ಬೃಹತ್ ಯೋಜನೆಯಿಂದಾಗಿ ಕರಾವಳಿಯ ಡೆಕೋರೇಶನ್, ಕ್ಯಾಟರಿಂಗ್, ಫೋಟೋಗ್ರಾಫಿ, ಲೈಟಿಂಗ್ಸ್ ಸೇರಿದಂತೆ ವಿವಿಧ ಕ್ಷೇತ್ರಗಳ ಸ್ಥಳೀಯ ಯುವಕರಿಗೆ ವ್ಯಾಪಕ ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಅವಕಾಶಗಳು ಸೃಷ್ಟಿಯಾಗಲಿವೆ. ಸ್ಥಳೀಯ ಆರ್ಥಿಕತೆಗೆ ಈ ಸಭಾಭವನಗಳು ಮಹತ್ತರ ಕೊಡುಗೆ ನೀಡಲಿವೆ. ಈ ನಿಟ್ಟಿನಲ್ಲಿ ಇದು ಅಭಿವೃದ್ಧಿ ಪಥದಲ್ಲಿ ಸಾಗುವ ಹೊಸ ಅಧ್ಯಾಯದ ಆರಂಭವೂ ಹೌದು.

ಅತೀ ಶೀಘ್ರದಲ್ಲಿಯೇ ಮಂಗಳೂರಿನ ಕಡಲ ತೀರದಲ್ಲಿ ತೆರೆದ ಸಭಾಂಗಣ
ಇದೇ ಮೊದಲ ಬಾರಿಗೆ, ಕಡಲ ನಗರಿ ಮಂಗಳೂರಿನ ಸಮುದ್ರ ತೀರದಲ್ಲಿ ಅದ್ದೂರಿ, ಭವ್ಯ ಸಮಾರಂಭಗಳನ್ನು ನಡೆಸಲು ಸುಸಜ್ಜಿತ ತೆರೆದ ಸಭಾಂಗಣ ಸಿದ್ಧಗೊಳ್ಳುತ್ತಿದೆ. ಶೀಘ್ರದಲ್ಲೇ ಈ ಸಭಾಂಗಣವೂ ಸಾರ್ವಜನಿಕರಿಗಾಗಿ ಲಭ್ಯವಾಗಲಿದೆ.

 

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ಮಂಗಳೂರು: ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ ಪುರಸ್ಕೃತ ದೀಪಾ ಭಸ್ತಿ ಅವರ ವಿಶೇಷ ಉಪನ್ಯಾಸ ಕಾರ್ಯಕ್ರಮ..!

ಪ್ರತಿವರ್ಷ ಆಯೋಜಿಸಲಾಗುವ ಪಿ.ಪಿ. ಗೋಮತಿ ಸ್ಮಾರಕ ಉಪನ್ಯಾಸ ಮಾಲಿಕೆ-2026ರ ಅಂಗವಾಗಿ ಖ್ಯಾತ ಲೇಖಕಿ ಹಾಗೂ ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ ಪುರಸ್ಕೃತ…

3 hours ago

ಮಂಗಳೂರು: ಪದವಿನಂಗಡಿ ಪರಿಸರದಲ್ಲಿರುವ ಮನೆಯಿಂದ ಎಂಡಿಎಂಎ ಮಾದಕವಸ್ತು ಮಾರಾಟ..!

ಪದವಿನಂಗಡಿ ಪರಿಸರದಲ್ಲಿರುವ ಮನೆಯಿಂದ ಎಂಡಿಎಂಎ ಮಾದಕವಸ್ತುವನ್ನು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು,…

3 hours ago

ಮಂಗಳೂರು: ನಿಷೇಧಿತ ಎಂಡಿಎಂಎ ಮಾದಕವಸ್ತು ಮಾರಾಟ; ಆರೋಪಿ ಬಂಧನ..!

ಮಂಗಳೂರು ನಗರದಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ನಿಷೇಧಿತ ಎಂಡಿಎಂಎ ಮಾದಕವಸ್ತು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಮಂಗಳೂರು ನಗರ ಅಪರಾಧ…

3 hours ago

ಮೂಡುಬಿದಿರೆ: ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದು ಯುವಕನೊಬ್ಬ ಮೃತ್ತ್ಯು …!

  ಛಾವಣಿಯ ಶೀಟ್‌ಗಳನ್ನು ಹಾಕುವಾಗ ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದು ಯುವಕನೊಬ್ಬ ಸಾವನ್ನಪ್ಪಿದ್ದ ಘಟನೆ ಕಡೆಪಲ್ಲದಲ್ಲಿ ಸಂಭವಿಸಿದೆ. ಮೃತನನ್ನು ಮಾರ್ಪಾಡಿ…

1 day ago

ನೆಲಮಂಗಲ: ಕುಣಿಗಲ್ ಬೈಪಾಸ್‌ನಲ್ಲಿ ಆಂಬುಲೆನ್ಸ್ ಅಪಘಾತ…!

  ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಒಂದು ಕ್ಯಾಂಟರ್‌ಗೆ ಢಿಕ್ಕಿ ಹೊಡೆದ ಘಟನೆ ನೆಲಮಂಗಲದ ಕುಣಿಗಲ್ ಬೈಪಾಸ್ ಬಳಿ ನಡೆದಿದೆ. ಆಂಬುಲೆನ್ಸ್…

1 day ago

ಬಂಟ್ವಾಳ: ಪೊಳಲಿಯಲ್ಲಿ ವ್ಯಕ್ತಿ ಸಾವು ವಾರಸುದಾರರಿಗಾಗಿ ಮನವಿ…!

  ಪೊಳಲಿಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಇವರ ವಾರಸುದಾರರಿದ್ದಲ್ಲಿ ಪೊಲೀಸ್ ಠಾಣೆ ಸಂಪರ್ಕ ಮಾಡುವಂತೆ ಕೋರಲಾಗಿದೆ. ಒಂಟಿಯಾಗಿ ವಾಸಿಸುತ್ತಿದ್ದ ಡೊಂಬಯ್ಯ ಮೃತಪಟ್ಟವರು.…

1 day ago