ಕಳೆದ 30 ದಶಕಗಳಿಂದ ತುಳುರಂಗಭೂಮಿಯಲ್ಲಿ ತನ್ನದೆ ಚಾಪು ಮೂಡಿಸಿತ್ತಿರುವ ಮಂಗಳೂರಿನ ಖ್ಯಾತ ಚಾಪರ್ಕ ತಂಡದ 61ನೇ ನಾಟಕದ ಮೂಹೂರ್ತ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಇಂದು ಬೆಳಗ್ಗೆ ನಡೆಯಿತು.
ಕಳೆದ 30 ದಶಕಗಳಿಂದ ಜನರಿಗೆ ಹಾಸ್ಯದೊಂದಿಗೆ ಸಾಮಾಜಿಕ ಕಳಕಳಿಯ ನಾಟಗಳನ್ನು ನಿರಂತರವಾಗಿ ನೀಡಿದ ಕೀರ್ತಿ ಚಾ ಪರ್ಕ ತಂಡದ ರೂವಾರಿ ತೆಲಿಕೆದ ಬೊಳ್ಳಿ ಡಾ| ದೇವುದಾಸ್ ಕಾಪಿಕಾಡ್ ರವರಿಗೆ ಸಲ್ಲುತ್ತದೆ. ಈ ಬಾರಿಯೂ ವಿಭಿನ್ನ ಕಥಾಹಂದರವನ್ನು ಹೊಂದಿರುವ ನೂತನ ನಾಟಕ “ಸುಣ್ಣದ ಬೊಟ್ಟು” ಮೂಲಕ ಕಲಾಪ್ರೇಕ್ಷಕರಿಗೆ ರಸದೌತಣ ನೀಡಲು ತಯಾರಿಯಲ್ಲಿದ್ದಾರೆ.
ಶ್ರೀಮತಿ ಶರ್ಮಿಳಾ ಕಾಪಿಕಾಡ್ ನಿರ್ಮಾಣದಲ್ಲಿ ಡಾ| ದೇವುದಾಸ್ ಕಾಪಿಕಾಡ್ ರಚಿಸಿ ನಿರ್ದೇಶಿಸುವ “ಸುಣ್ಣದ ಬೊಟ್ಟು” ನಾಟಕದ ಸಂಗೀತದ ಹೊಣೆಯನ್ನು ಗುರು ಬಾಯಾರ್ ಹೊರಲಿದ್ದಾರೆ. ಇನ್ನು ಕಲಾವಿದರಾಗಿ ಸಾಯಿ ಕೃಷ್ಣ, ಸದಾಶಿವ ಅಮೀನ್, ತಿಮ್ಮಪ್ಪ ಕುಲಾಲ್, ಸುರೇಶ್ ಕುಲಾಲ್, ಪಾಂಡುರಂಗ ಅಡ್ಯಾರ್, ಪ್ರಕಾಶ್ ಶೆಟ್ಟಿ ಧರ್ಮನಗರ, ಪ್ರವೀಣ್ ಬಿ.ಸಿ ರೋಡ್ ಸಾಯಿ ಚೇತನ್, ತಿಲಕ್ ರಾಜ್ ಕೊಯಿಲಾ, ನಿತಿನ್ ಹೊಸಂಗಡಿ, ಸಚ್ಚಿನ್ ಅರ್ಕುಳ, ಸುಜಾತ ಶಕ್ತಿನಗರ, ಚೈತ್ರ ಕಲ್ಲಡ್ಕ, ಹರ್ಷಿಣಿ ಪೂಜಾರಿ ಅಭಿನಯಿಸಲಿದ್ದಾರೆ. ತಾಂತ್ರಿಕ ವರ್ಗದಲ್ಲಿ ರಾಜೇಶ್ ಮಂಜೇಶ್ವರ, ರಮಾನಂದ ಸಜಿಪ, ಶ್ರವಣ್ ಬಿ.ಸಿ ರೋಡ್, ಪ್ರಸನ್ನ ಬೋಳಾರ್, ಅಶಿಕ್ ಉಡುಪಿ ಕಾರ್ಯ ನಿರ್ವಹಿಸಲಿದ್ದಾರೆ. ಮಂಗಳೂರಿನ ಪುರಭವನದಲ್ಲಿ ಸೆಪ್ಟೆಂಬರ್‌ನಲ್ಲಿ ಅದ್ದೂರಿ ಪ್ರದರ್ಶನದೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಚಾ ಪರ್ಕ ತಂಡದ “ಸುಣ್ಣದ ಬೊಟ್ಟು” ರೆಡಿಯಾಗಲಿದೆ.
ಯಕ್ಷಧ್ರುವ ಪಟ್ಲ ಫೌಂಡೇಷನ್ ಮಂಗಳೂರು ಇದರ ಜೊತೆ ಕಾರ್ಯದರ್ಶಿ ರವಿ ಶೆಟ್ಟಿ ಅಶೋಕ್ ನಗರ ಅಪಘಾತದಿಂದ ಮಂಗಳವಾರ (ಜು.21) ಮುಂಜಾನೆ…
ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ದಾಸೋಟ್ಟು-ಕುಕ್ಕಾಜೆ ನಿವಾಸಿ ರಮೇಶ್ ಪೂಜಾರಿ ಅವರ ಮನೆಯ ಹಿಂಭಾಗಕ್ಕೆ ಹೊಂದಿಕೊಂಡಿದ್ದ ಬಚ್ಚಲು ಮನೆ ಹಾಗೂ…
ಪೊಲೀಸ್ ಇಲಾಖೆಯ ನಿಜವಾದ ಕರ್ತವ್ಯನಿಷ್ಠೆ, ಸಮಯಪ್ರಜ್ಞೆ ಮತ್ತು ಮಾನವೀಯತೆಯ ಅಪರೂಪದ ಉದಾಹರಣೆಯೊಂದು ಸೂರಿಕುಮೇರ್ ಪೆಟ್ರೋಲ್ ಬಂಕ್ ಸಮೀಪದಲ್ಲಿ ನಡೆದ ಅಪಘಾತದ…
ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೂಡಬಿದರೆಯ ಮಿಜಾರು ಕೊಪ್ಪದಕುಮೇರಿಯಲ್ಲಿ ಸಂಜೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ…
ನಿಯಂತ್ರಣ ತಪ್ಪಿದ ಟಿಪ್ಪರ್ ಲಾರಿಯೊಂದು ರಸ್ತೆ ಬದಿಯ ಮರವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡ ಘಟನೆ ವಿಟ್ಲ…
ಶುಕ್ರವಾರ ಸಂಜೆ ಬೀಸಿದ ಬಿರುಗಾಳಿ ಮಳೆಗೆ ರಾಷ್ಟ್ರೀಯ ಹೆದ್ದಾರಿ ಮಾಣಿ ಬೊಳ್ಳುಕಲ್ಲಿನಿಂದ ಪೆರಾಜೆ ಶ್ರೀ ರಾಮಚಂದ್ರಾಪುರ ಮಠಕ್ಕೆ ಹೋಗುವ ಕಮಲ…