ಸೀನ ಎಂಬ ಹೆಸರಿನ ಅಂದಾಜು 25 ವರ್ಷದ ಅನಾಥ ವಿಶೇಷಚೇತನ ಯುವಕನನ್ನು ಸಮಾಜ ಸೇವಕರಾದ ಶ್ರೀ ವಿಶು ಶೆಟ್ಟಿ ಅಂಬಲ್ಪಾಡಿ ಯವರ ಹಾಗೂ ಶ್ರೀ ಲಕ್ಷ್ಮಿ ನಾರಾಯಣ್ ಭಟ್ ಉಡುಪಿ ಇವರ ಮೂಲಕ ವಿಜೇತ ವಿಶೇಷ ಶಾಲೆಗೆ ದಾಖಲಿಸಿಕೊಳ್ಳಲಾಯಿತು.

ಈ ಯುವಕ ಸುಮಾರು 6 ವರ್ಷಗಳ ಹಿಂದೆ ಲಕ್ಷ್ಮಿ ನಾರಾಯಣ್ ಭಟ್ ರವರ ಸಂಬಂದಿಕರ ಹೋಟೆಲ್ ಗೆ ದಿಕ್ಕು ತಪ್ಪಿ ಬಂದಿದ್ದ. ಆತನನ್ನು ಅವರು 6 ವರ್ಷಗಳ ಕಾಲ ತನ್ನ ಬಳಿ ಇಟ್ಟುಕೊಂಡು ಸಾಕಿದ್ದರು.
ಅವರ ನಂತರದಲ್ಲಿ ಮುಂದೆ ಈ ವಿಶೇಷ ಚೇತನ ಯುವಕನಿಗೆ ಆಶ್ರಯದ ಅವಶ್ಯಕತೆ ಇದ್ದು ಇಂದು ವಿಜೇತ ವಿಶೇಷ ಶಾಲೆಗೆ ಸೇರಿಸಿಕೊಳ್ಳಲಾಯಿತು.
ಈ ಸಂಧರ್ಭದಲ್ಲಿ ಶ್ರೀ ಲಕ್ಷ್ಮಿ ನಾರಾಯಣ್ ಭಟ್ ಅವರು ಸಂಸ್ಥೆಗೆ ದೇಣಿಗೆ ನೀಡಿ ಸಹಕರಿಸಿದರು.



