ಇರಾನ್ ಮೇಲಿನ ಯೋಜಿತ ಮಿಲಿಟರಿ ದಾಳಿಯನ್ನು ಅಮೆರಿಕ ತಾತ್ಕಾಲಿಕವಾಗಿ ಮುಂದೂಡಿದ್ದು, ಇಂದಿನಿಂದ ಇರಾನ್ ಜೊತೆ ಶಾಂತಿ ಮಾತುಕತೆ ಆರಂಭವಾಗಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಪಶ್ಚಿಮ ಏಷ್ಯಾದ ಉದ್ವಿಗ್ನತೆ ಕಡಿಮೆಗೊಳಿಸುವ ಉದ್ದೇಶದಿಂದ ರಾಜತಾಂತ್ರಿಕ ಮಾರ್ಗಕ್ಕೆ ಆದ್ಯತೆ ನೀಡಿರುವ ಅಮೆರಿಕ, ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವುದು ಹಾಗೂ ಇರಾನ್‌ನ ಪರಮಾಣು ಕಾರ್ಯಕ್ರಮಕ್ಕೆ ನಿಯಂತ್ರಣ ಹೇರುವುದು ಮಾತುಕತೆಯ ಪ್ರಮುಖ ಉದ್ದೇಶವಾಗಿದೆ. ಸೌದಿ ಅರೇಬಿಯಾ, ಕತಾರ್ ಹಾಗೂ ಯುಎಇ ನಾಯಕರ ಮನವಿಯ ಹಿನ್ನೆಲೆಯಲ್ಲಿ ದಾಳಿ ಮುಂದೂಡಲಾಗಿದೆ. ಇದೇ ವೇಳೆ, ಹಾರ್ಮುಜ್ ಜಲಸಂಧಿಯ ಪರಿಸ್ಥಿತಿ ಯುದ್ಧಕ್ಕೂ ಹಿಂದಿನ ಸ್ಥಿತಿಗೆ ತಕ್ಷಣ ಮರಳುವುದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪೋಷಕ ಸದಸ್ಯರೂ, ಬಂಟ್ಸ್ ಅಸೋಸಿಯೇಷನ್ ನಾರ್ತ್ ಅಮೆರಿಕಾ (BANA) ಅಧ್ಯಕ್ಷರೂ ಆದ ಶ್ರೀ ಮಂಜುನಾಥ್…
ಉಡುಪಿ ತಾಲೂಕಿನಲ್ಲಿ ಕಡಲ್ಕೊರೆತದಿಂದ ಹಾನಿಗೊಳಗಾಗಿರುವ ಹೆಜಮಾಡಿ, ಪಡುಬಿದ್ರಿ, ಎರ್ಮಾಳು, ಕಾಪು, ಪೊಲಿಪು ಹಾಗೂ ಕಟಪಾಡಿ-ಮಟ್ಟು ಪ್ರದೇಶಗಳಿಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ.…
ಮಳೆ ಸುರಿದರೆ ಸಾಕು, ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ಪೆರಾಜೆ ಗ್ರಾಮದ ಜೋಗಿಬೆಟ್ಟು ರಸ್ತೆಯಲ್ಲಿ ಸಂಚಾರ ದುಸ್ತರವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗೆ…
ಭಾರತ ಮತ್ತು ಅಮೆರಿಕಾಗಳು ಅನೇಕ ಸಾಮಾನ್ಯ ಅಂಶಗಳನ್ನು ಹೊಂದಿವೆ. ಅಮೆರಿಕಾ ಅವಕಾಶಗಳ ನಗರ. ಇಲ್ಲಿಗೆ ವಲಸೆ ಬಂದು ವಾಸಿಸುತ್ತಿರುವ ಭಾರತೀಯರು…
ವಾಹನ ದಟ್ಟಣೆ ಹೆಚ್ಚುತ್ತಿರುವ ನಗರದಲ್ಲಿ ಸುಗಮ ಸಂಚಾರಕ್ಕೆ ಸ್ಮಾರ್ಟ್ ಸಿಟಿ ಯೋಜನೆಯಡಿ 181ಕ್ಕೂ ಅಧಿಕ ಎಐ ಸಿ.ಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.…
ರಾಯಿ ಗ್ರಾಮದ ಪಾಂಚಕೋಡಿ ನಿವಾಸಿ ಜೋಸೆಫ್ ಪಿಂಟೋ ಎಂಬವರ ಪುತ್ರ ಜೀವನ್ ಪಿಂಟೊ ಅವರ ಚಪ್ಪಲಿ ಮತ್ತು ಟಾರ್ಚ್ ಶನಿವಾರ…