ದಕ್ಷಿಣ ಕನ್ನಡ : ಮುಖ್ಯಮಂತ್ರಿ ಸಿದ್ದರಾಮಯ್ಯರ ದಕ್ಷಿಣ ಕನ್ನಡ ಭೇಟಿ ವೇಳೆ, ಪ್ರತಕರ್ತರಿಗೆ ಕೊಡ ಮಾಡುವ ಉಚಿತ ಬಸ್ ಪಾಸ್ ಸೇವೆಯನ್ನು, ಸಮಾಜಕ್ಕಾಗಿ ಕೆಲಸ ಮಾಡುವ ಪತ್ರಕರ್ತರಿಗೆ ಒದಗಿಸುವಂತೆ ಮನವಿ ಮಾಡಿದರು, ಮಾಧ್ಯಮ ಪ್ರತಿನಿಧಿಗಳು ಇನ್ನೂ ಹೆಚ್ಚಿನ ಸೇವೆ ನೀಡಲು ಉಚಿತ ಬಸ್ ಪಾಸ್ ಸಹಕಾರಿಯಾಗಲಿದೆ ಹಾಗೂ ಇದನ್ನು ಆದ್ಯತೆ ಮೇರೆಗೆ ನೀಡಬೇಕಾಗಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ತಾರಾನಾಥ ಕಾಫಿಕ್ಕಾಡ್ ಲಿಖಿತ ರೂಪದಲ್ಲಿ ವಿನಂತಿಸಿದರು. ಹಾಗೂ ಕನ್ನಡ ಪತ್ರಿಕಾ ಲೋಕದ ಪಿತಾಮಹ ಡಾ.ಹೆರ್ಮನ್ ಮೊಗ್ಲಿಂಗ್ ಅವರ ಹೆಸರಿನಲ್ಲಿ ಬೆಂಗಳೂರಿನಲ್ಲಿ ರಸ್ತೆಗೆ ನಾಮಕರಣ ಹಾಗೂ ಪ್ರತಿಮೆ ನಿರ್ಮಿಸುವಂತೆ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ.ಜಿಲ್ಲಾ ಸಮಿತಿಯು ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿತು.
ಕನ್ನಡ ಪತ್ರಿಕೋದ್ಯಮದ ಪಿತಾಮಹ ಮಂಗಳೂರ ಸಮಾಚಾರ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಡಾ.ಹೆರ್ಮನ್ ಮ್ಯೋಗ್ಲಿಂಗ್ ಅವರ ಹೆಸರಿನಲ್ಲಿ ರಸ್ತೆಯೊಂದಕ್ಕೆ ಹೆಸರು ನಾಮಕರಣ ಮಾಡುವುದು ಹಾಗೂ ಮ್ಯೋಗ್ಲಿಂಗ್ ಅವರ ಪ್ರತಿಮೆ ಸ್ಥಾಪನೆ ಮಾಡುವಲ್ಲಿ ತಾವು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಯಿತು. ಕನ್ನಡ ಶಬ್ದಕೋಶ ರಚಿಸಿದ ರೆವರೆಂಡ್ ಕಿಟೆಲ್ ಅವರ ಹೆಸರಲ್ಲಿ ಈಗಾಗಲೇ ರಸ್ತೆಗೆ ನಾಮಕರಣ ಮಾಡಿ ಅವರ ಪ್ರತಿಮೆ ಈ ಹಿಂದೆಯೇ ಬೆಂಗಳೂರಿನಲ್ಲಿ ಸ್ಥಾಪಿಸಿದ್ದು, ಕನ್ನಡದ ಮೊದಲ ಪತ್ರಿಕೆ ‘ಮಂಗಳೂರ ಸಮಾಚಾರ’ ಪತ್ರಿಕೆ ಆರಂಭಿಸಿ ಆ ಮೂಲಕ ಕನ್ನಡ ಪತ್ರಿಕೋದ್ಯಮದದ ಶಕೆಯನ್ನು ಆರಂಭಿಸಿದ ಮ್ಯೋಗ್ಲಿಂಗ್ ಅವರ ಪ್ರತಿಮೆಯಾಗಲಿ, ಅವರ ಹೆಸರಿನಲ್ಲಿ ರಸ್ತೆಯಾಗಲಿ, ವೃತ್ತಗಳಾಗಲಿ ಕರ್ನಾಟಕದಲ್ಲಿ ಎಲ್ಲಿಯೂ ಇರುವುದಿಲ್ಲ, ಈ ಹಿನ್ನೆಲೆಯಲ್ಲಿ ತಾವು ವಿಶೇಷ ಕಾಳಜಿ ವಹಿಸಿ ಕ್ರಮ ಜರಗಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಜರ್ನಲ್ಲಿಸ್ಟ್ ಯೂನಿಯನ್ ಮನವಿ ಮಾಡಿದೆ.
ಡಾ. ಹರ್ಮನ್ ಮ್ಯೋಗ್ಲಿಂಗ್ ಅವರು ಕೇವಲ ಪತ್ರಿಕಾ ಸಂಪಾದಕರಷ್ಟೇ ಆಗಿ ಕಾರ್ಯ ಸೀಮಿತಗೊಳಿಸಿದವರಲ್ಲ. ಕನ್ನಡ ಸಾಹಿತ್ಯ ಲೋಕಕ್ಕೆ ಅನುಪಮ ಸೇವೆ ಸಲ್ಲಿಸಿದವರು ಸಂಪಾದಕರಾಗಿ ಕನ್ನಡ ಸಾರಸ್ವತ ಲೋಕಕ್ಕೆ ಚಾರಿತ್ರಿಕ ಕೊಡುಗೆಯನ್ನು ನೀಡಿದವರು ಮ್ಯೋಗ್ಲಿಂಗ್ , ಇವರ ಈ ಸಾಧನೆಯನ್ನು ಗುರುತಿಸಿ 1858 ರಲ್ಲಿ ಜರ್ಮನಿಯ ಟ್ಯೂಬಿಂಗೆನ್ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತ್ತು. ಇಂತಹ ಮಹಾನುಭಾವನ ಹೆಸರಿನಲ್ಲಿ ಕರ್ನಾಟಕದಲ್ಲಿ ಯಾವುದೇ ನೆನಪಿನ ಸ್ಮಾರಕಗಳು , ಹೆಸರುಗಳು ಇಲ್ಲದೇ ಇರುವುದು ವಿಷಾದದ ಸಂಗತಿ. ತಾವುಗಳು ಈ ನಿಟ್ಟಿನಲ್ಲಿ ಕಾಳಜಿ ವಹಿಸಿ ಕನ್ನಡದ ಮೊದಲ ಪತ್ರಿಕೆ ಮಂಗಳೂರ ಸಮಾಚಾರ ಹಾಗೂ ಹರ್ಮನ್ ಮ್ಯೋಗ್ಲಿಂಗ್ ಅವರ ಹೆಸರನ್ನು ಕರ್ನಾಟಕ ರಾಜ್ಯದ ಜನತೆ ಜನತೆ ಸದಾ ಸ್ಮರಣೆ ಮಾಡುವಂತಾಗಲೂ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ” ಮಂಗಳೂರು ಸಮಾಚಾರ- ಹೆರ್ಮನ್ ಮ್ಯೋಗ್ಲಿಂಗ್ ” ರಸ್ತೆ ನಾಮಕರಣ ಹಾಗೂ ಪ್ರತಿಮೆ ಸ್ಥಾಪನೆ ಮಾಡಬೇಕೆಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದಕ್ಷಿಣ ಕನ್ನಡ ಜಿಲ್ಲಾ ಘಟಕ ಮುಖ್ಯಮಂತ್ರಿ ಅವರಲ್ಲಿ ವಿನಂತಿಸಿಕೊಂಡಿದೆ.
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ನೇತೃತ್ವದಲ್ಲಿ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಪ್ರಧಾನ ಕಾರ್ಯದರ್ಶಿ ಕೆನ್ಯೂಟ್ ಪಿಂಟೋ, ಕೋಶಾಧಿಕಾರಿ ಗಿರಿಧರ್ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯ ರಮೇಶ್ ಪೆರ್ಲ ಉಪಸ್ಥಿತರಿದ್ದರು.
ಬಿಸಿಯೂಟದ ಸಿಬ್ಬಂದಿಯೊಬ್ಬರ ಕೈ ವಿದ್ಯುತ್ ಚಾಲಿತ ತುರಿಮಣೆಯಲ್ಲಿ ಸಿಲುಕಿಕೊಂಡ ಸಂದರ್ಭದಲ್ಲಿ ಸಮಯಪ್ರಜ್ಞೆ ಮೆರೆದ ನರಿಕೊಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ…
ನಗರದ ಕೆಪಿಟಿ ಸಿಗ್ನಲ್ ಸಮೀಪ ರಸ್ತೆಯ ಮಧ್ಯಭಾಗದಲ್ಲೇ ಭಾರೀ ಗುಂಡಿಯೊಂದು ನಿರ್ಮಾಣವಾಗಿದ್ದು, ವಾಹನ ಸವಾರರಿಗೆ ಅಪಾಯ ಎದುರಾಗಿದೆ. ಈ ಮಾರ್ಗದಲ್ಲಿ…
ಆಟಿ ಅಮಾವಾಸ್ಯೆಯ ಪವಿತ್ರ ದಿನದಂದು ಬಂಟ್ವಾಳ ತಾಲೂಕಿನ ಐತಿಹಾಸಿಕ ಹಾಗೂ ಪೌರಾಣಿಕ ಪ್ರಸಿದ್ಧಿಯ ನರಹರಿ ಪರ್ವತ ಶ್ರೀ ಸದಾಶಿವ ದೇವಸ್ಥಾನದಲ್ಲಿ…
ತುಳುಕೂಟ ಬಂಟ್ವಾಳ ಹಾಗೂ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನ, ಬಿ.ಸಿ.ರೋಡು ಇದರ ಆಡಳಿತ ಮಂಡಳಿಯ ಆಶ್ರಯದಲ್ಲಿ ವರ್ಷಂಪ್ರತಿ ನಡೆಯುವ ಆಟಿ…
ಲೋಕಾಯುಕ್ತದಲ್ಲಿ ದಾಖಲಾಗಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮೇಲಾಧಿಕಾರಿಗಳ ನಿರ್ದೇಶನದ ಮೇರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು…
ಆಟಿ ಅಮಾವಾಸ್ಯೆಯ ಪ್ರಯುಕ್ತ ತಾಲೂಕಿನ ಪ್ರಸಿದ್ಧ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಬುಧವಾರ ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ವಿವಿಧ ಧಾರ್ಮಿಕ…