ದಕ್ಷಿಣ ಕನ್ನಡ : ಮುಂದಿನ ಭಾನುವಾರ , 06. ಆಗಸ್ಟ್ 2023 ರಂದು, ಬೆಳಗ್ಗೆ 9, ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಕರಾಡ ಸಮಾಜ ಭವನ, ಶಕ್ತಿನಗರ, ಇಲ್ಲಿ ಕರಾಡ ಸಮಾಜ, ಲಯನ್ಸ್ ಕ್ಲಬ್ ಮಂಗಳೂರು ಮತ್ತು ಹಲವು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಯಲಿಕ್ಕಿದೆ, ಡಾಕ್ಟರ್ ಶಾಂತರಾಮ್ ಶೆಟ್ಟಿ, ಇವರು ರಕ್ತದಾನ ಶಿಬಿರವನ್ನು ಉದ್ಘಾಟಿಸಲಿದ್ದು ಸಮಾಜ ಬಂಧುಗಳು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ, ರಕ್ತದಾನವನ್ನು ಮಾಡಿ ಸ್ವಸ್ಥ ಸಮಾಜದ ಆರೋಗ್ಯದ ದೃಷ್ಟಿಯಿಂದ ರಕ್ತದಾನದ ಮಹತ್ವವನ್ನು ಅರಿತು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಅಧ್ಯಕ್ಷರು ಕರಾಡ ಸಮಾಜ ಮಂಗಳೂರು ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ



