ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯ ಬೈಕಾಡಿಯಲ್ಲಿ ಮಂಗಳವಾರ ರಾತ್ರಿ ನಡೆದ ರೌಡಿಶೀಟರ್ ಸುಜಿತ್ ಪಿಂಟೊ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನನ್ನು ಬೈಕಾಡಿ ನಿವಾಸಿ ಪ್ರದೀಪ್ ಪೂಜಾರಿ ಎಂದು ಗುರುತಿಸಲಾಗಿದೆ. ಈತ ಪ್ರಕರಣದ ಪ್ರಮುಖ ಆರೋಪಿ ಪ್ರಮೋದ್ ಪೂಜಾರಿಯ ಸಹೋದರನಾಗಿದ್ದಾನೆ.
ಪ್ರಕರಣದ ಪ್ರಮುಖ ಆರೋಪಿ ಪ್ರಮೋದ್ ಪೂಜಾರಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದರು. ಇದೀಗ ಪರಾರಿಯಾಗಿದ್ದ ಪ್ರದೀಪ್ ಪೂಜಾರಿಗಾಗಿ ಶೋಧ ನಡೆಸಿ ಆತನನ್ನೂ ಬಂಧಿಸಿದ್ದಾರೆ. ಪ್ರದೀಪ್ ರಿಕ್ಷಾ ಚಾಲಕನಾಗಿದ್ದು, ಪ್ರಮೋದ್ ಗಾರೆ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಉಡುಪಿ ಸಂತೆಕಟ್ಟೆಯಲ್ಲಿ ವಾಸವಾಗಿದ್ದ ಸುಜಿತ್ ಪಿಂಟೊ ಐದು ವರ್ಷಗಳ ಹಿಂದೆ ಬೈಕಾಡಿಗೆ ಸ್ಥಳಾಂತರಗೊಂಡಿದ್ದ. ಸುಜಿತ್, ಪ್ರಮೋದ್ ಮತ್ತು ಪ್ರದೀಪ್ ಒಂದೇ ತಂಡದಲ್ಲಿದ್ದವರು ಎನ್ನಲಾಗಿದೆ. ಇವರು ಮದ್ಯಪಾನ ಮಾಡಿ ಪರಸ್ಪರ ಗಲಾಟೆ ಮಾಡಿಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ. ಕಳೆದ ಕೆಲವು ದಿನಗಳಿಂದ ಸುಜಿತ್ ಪಿಂಟೊ ಸಹೋದರರಿಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡುತ್ತಿದ್ದ ಎಂಬ ಆರೋಪವೂ ಕೇಳಿಬಂದಿದೆ.
ಇದೇ ವಿಚಾರವಾಗಿ ಉಂಟಾಗಿದ್ದ ದ್ವೇಷದ ಹಿನ್ನೆಲೆಯಲ್ಲಿ ಬೈಕಾಡಿ ಸರ್ಕಲ್ ಬಳಿ ರಾತ್ರಿ ಭೇಟಿಯಾಗುವಂತೆ ಸಹೋದರರು ಸುಜಿತ್ ಪಿಂಟೊಗೆ ತಿಳಿಸಿದ್ದರು ಎನ್ನಲಾಗಿದೆ. ಅದರಂತೆ ಸುಜಿತ್ ತನ್ನ ಗೆಳೆಯನೊಂದಿಗೆ ಸ್ಥಳಕ್ಕೆ ಬಂದಿದ್ದ. ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದ್ದು, ಪ್ರಮೋದ್ ಪೂಜಾರಿ ಕಬ್ಬಿಣದ ರಾಡ್ನಿಂದ ಸುಜಿತ್ ಪಿಂಟೊ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.
ಪ್ರವಾಸಿಗರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಕಾಪು ಪೊಲೀಸರು ಬಂಧಿಸಿದ್ದು, ₹2.85 ಲಕ್ಷ ಮೌಲ್ಯದ 5.710 ಕೆ.ಜಿ.…
ಮಂಗಳೂರಿನಲ್ಲಿ 16 ವರ್ಷದ ಶ್ರೀವತ್ಸ ಎಂಬ ಬಾಲಕ ಕಾಣೆಯಾಗಿದ್ದು, ಆತನ ಪತ್ತೆಗೆ ಕುಟುಂಬಸ್ಥರು ಸಾರ್ವಜನಿಕರ ಸಹಕಾರ ಕೋರಿದ್ದಾರೆ. ಮೂಲತಃ ಸುಳ್ಯ…
ತಾಲೂಕಿನ ಅಮ್ಟಾಡಿ ಗ್ರಾಮದ ಕಾಜಿಪಿಟ್ಲು ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಬೆಕ್ಕುಗಳು ಮತ್ತು ನಾಯಿಗಳು ನಾಪತ್ತೆಯಾಗುತ್ತಿರುವುದು ಸ್ಥಳೀಯ ನಿವಾಸಿಗಳಲ್ಲಿ ಆತಂಕ…
ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲಿನ ಗುಂಡಿನ ದಾಳಿ ಪ್ರಕರಣದ ತನಿಖೆ ವೇಳೆ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ…
ತಾಲೂಕಿನ ಕುಕ್ಕಿಪಾಡಿ ಗ್ರಾಮದ ಕೆಂತಲೆ ಎಂಬಲ್ಲಿ ಮನೆಯಲ್ಲಿ ಆಟವಾಡುತ್ತಿದ್ದ ಒಂಬತ್ತು ವರ್ಷದ ಬಾಲಕನೊಬ್ಬನ ಕುತ್ತಿಗೆಗೆ ಹಗ್ಗ ಸಿಲುಕಿ ಆಕಸ್ಮಿಕವಾಗಿ ಮೃತಪಟ್ಟ…
ಚುಟುಕು ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾಗಿ ರಮೇಶ್ ನಾಯ್ಕ್ ಮೆಲ್ಕಾರ್ ಅವರನ್ನು ನೇಮಕ ಮಾಡಲಾಗಿದೆ. ಚುಟುಕು ಸಾಹಿತ್ಯದ…