ಸಿನಿಮೀಯ ರೀತಿಯಲ್ಲಿ ಪಂಚಾಯತ್ ಸದಸ್ಯರನ್ನೇ ಕಿಡ್ನ್ಯಾಪ್ ಮಾಡಿದ ಘಟನೆವೊಂದು ಜಂಬಗಿಯಲ್ಲಿ ನಡೆದಿದೆ.

ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣಾ ದಿನಾಂಕ ಘೋಷಣೆ ಹಿನ್ನಲೆ, ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ, ಪೈಗಂಬರ್ ಮುಲ್ಲಾ ಎಂಬುವವರು ಕಳೆದ ವಾರದಿಂದ ತನ್ನ ಸದಸ್ಯರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ.
ಇಂದು ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಿಗದಿಯಾಗಿದ್ದ, ಕಾರಣ ಪ್ರವಾಸದಿಂದ ಸದಸ್ಯೆರೆಲ್ಲರೂ ವಾಪಸ್ ಬರುವ ವೇಳೆ ಆಲಮಟ್ಟಿಯ ಬಳಿ ಕಿಡ್ಯ್ಯಾಪ್ ಮಾಡಿ ಸದಸ್ಯಯ ಮೇಲೆ ಹಲ್ಲೆ ಮಾಡಿದ್ದಾರೆ.
ಭೀಮರಾಯ ಕಡಾಯಿ, ಬಸವರಾಜ ಚಿಮ್ಮಲಗಿ, ಶ್ರೀಶೈಲ ಮಸೂತಿ, ರಾಜು ಕೆರೂರು ಎಂಬುವರ ವಿರುದ್ಧ ಕಿಡ್ನ್ಯಾಪ್ ಆರೋಪ ಕೇಳಿಬಂದಿದೆ. ಸಂಖ್ಯಾಬಲಕ್ಕಾಗಿ ಈ ಹೈಡ್ರಾಮ ನಡೆದಿದೆ ಎನ್ನಲಾಗುತ್ತಿದೆ. ಈ ನಾಲ್ಕು ಜನರ ಮೇಲೆ ಎಂಟು ಗ್ರಾಮ ಪಂಚಾಯತಿ ಸದಸ್ಯರನ್ನು ಕಿಡ್ನ್ಯಾಪ್ ಮಾಡಿದ್ದರು ಎಂದು ತಿಳಿದು ಬಂದಿದೆ.
ಜಂಬಗಿ ಗ್ರಾಮ ಪಂಚಾಯತಿಯಲ್ಲಿ 18 ಸದಸ್ಯರಗಳಿದ್ದು, ಆದರೀಗ ಕೋರಂಗೆ ಬೇಕಾಗಿದ್ದ ಎಂಟು ಜನ ಸದಸ್ಯರು ಕಿಡ್ನ್ಯಾಪ್ ಆಗಿದ್ದಾರೆ.

ಕಿಡ್ಯ್ಯಾಪ್ ಹಿಂದೆ ಬಿಜೆಪಿ ಪಕ್ಷದ ಕೈವಾಡ ಇದೆ ಎಂದ ಹಲ್ಲೆಗೊಳಗಾದವರು ಆರೋಪಿಸಿದ್ದಾರೆ. ಇನ್ನೂ ಹಲ್ಲೆಗೊಳಗಾದವರು ವಿಜಯಪುರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.



