ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಶೇರ್ ಮಾಡುವ ಹುಚ್ಚುತನದಿಂದಾಗಿ, ಯುವತಿವೋರ್ವಳು ಚಲಿಸುತ್ತಿದ್ದ ಕಾರಿನ ಬಾನೆಟ್ ಮೇಲೆ ಕುಳಿತು ರೀಲ್ಸ್ ಮಾಡಿ ಹುಚ್ಚಾಟ ಮೆರೆದಿದ್ದಾರೆ.

ಜಲಂಧರ್-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುವ ಕಾರಿನ ಮೇಲೆ ಕುಳಿತ್ತಿದ್ದ ಯುವತಿವೋರ್ವಳು ಮಹಿಂದ್ರಾ ಜೀಪ್ ಬಾನೆಟ್ ಮೇಲೆ ಕೂತು ತನ್ನ 2 ಕೈಯಲ್ಲಿ 1 ಮಿಲಿಯನ್ ಎಂಬ ಬಲೂನ್ ಹಿಡಿದು ಸ್ಟೈಲ್ ಆಗಿ ಪೋಸ್ ಕೊಟ್ಟು ಹುಚ್ಚಾಟ ನಡೆಸಿದ್ದಾಳೆ. ಬಳಿಕ ಈ ವಿಡಿಯೋವನ್ನು ಇನ್ಸ್ಟಾ ಗ್ರಾಂಗೆ ಅಪ್ಲೋಡ್ ಮಾಡಿದ್ದಾರೆ.
ಈ ಬಗ್ಗೆ ನೆಟ್ಟಿಗರಿಂದ ವ್ಯಾಪಕ ಅಕ್ರೋಶ ವ್ಯಕ್ತವಾದ ಹಿನ್ನಲೆ, ಪೊಲೀಸರು ಆ ಯುವತಿಗೆ ಎಚ್ಚರಿಕೆ ನೀಡಿ ಎಸ್ಯುವಿ ಕಾರನ್ನು ವಶಕ್ಕೆ ಪಡೆದಿದ್ದಾರೆ.



