ಅಪಘಾತ ಸಂದರ್ಭ ಹೆಚ್ಚಾಗಿ ತಲೆಗೆ ಗಂಭಿರವಾದ ಗಾಯಗಳಾಗುವ ನಿಟ್ಟಿನಲ್ಲಿ, ಈಗಾಗಲೇ ಹೆಲ್ಮೆಟ್‍ಗಳನ್ನು ಕಡ್ಡಾಯಗೊಳಿಸಲಾಗಿದೆ.

ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಅರ್ಧ ಹೆಲ್ಮೆಟ್ ಮತ್ತು ಐ.ಎಸ್.ಐ ಮಾರ್ಕ್ ಇಲ್ಲದ ಹೆಲ್ಮೆಟ್‍ಗಳನ್ನು ಧರಿಸುವಂತಿಲ್ಲ ಎಂಬ ಶಾಕಿಂಗ್ ನ್ಯೂಸ್ ದೊರೆತಿದೆ.

ಮಾರುಕಟ್ಟೆಯಲ್ಲಿ ಈಗಾಗಲೇ ವಿಭಿನ್ನ ಶೈಲಿಯ ಹೆಲ್ಮೆಟ್‍ಗಳ ಸಿಗುತ್ತದೆ. ಆದ್ರೆ ಇದು ಯಾವುದು ಹೆಲ್ಮೆಟ್ ಜೀವ ಭದ್ರತೆಯ ದೃಷ್ಠಿಯಿಂದ ಉತ್ತಮವಾಗಿಲ್ಲ. ಹೆಲ್ಮೆಟ್‍ಗಳು ಜೀವಕ್ಕೆ ಭದ್ರತೆಯನ್ನು ನೀಡುವಲ್ಲಿ ವಿಫಲವಾಗಿವೆ. ಇದರಲ್ಲಿ ಅರ್ಧ ಹೆಲ್ಮೆಟ್‍ಗಳು ಕೂಡ ಒಂದಾಗಿದ್ದು, ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅರ್ಧ ಹೆಲ್ಮಟ್ ಗಳನ್ನು ನಿಷೇಧಿಸಲು ಚಿಂತನೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.



