ಇಸ್ರೋ ಸಂಸ್ಥೆಯ ಕನಸು ನನಾಸಗುವತ್ತಾ ಚಂದ್ರಯಾನ-3 ದಾಪುಕಾಲಿಟ್ಟಿದೆ. ಚಂದ್ರಯಾನ- 3 ಬಾಹ್ಯಾಕಾಶ ನೌಕೆಯು ಇಂದು ಚಂದ್ರನ ಕಕ್ಷೆಯನ್ನು ಸೇರಲಿದೆ. ಪ್ರಕ್ರಿಯೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸಂಜೆ 7 ಗಂಟೆಗೆ ಲೂನಾರ್ ಆರ್ಬಿಟ್ ಇಂಜೆಕ್ಷನ್ ಕಾರ್ಯ ಕೈಗೊಳ್ಳಲಿದೆ.

ಜುಲೈ 14ರಂದು ಚಂದ್ರಯಾನ- 3 ಅನ್ನು ನಭಕ್ಕೆ ಉಡಾವಣೆ ಮಾಡಲಾಗಿತ್ತು. ಈಗಾಗಲೇ ಸ್ಪೇಸ್‍ಕ್ರಾಫ್ಟ್ ನಿಗದಿತ ಪ್ರಯಾಣದಲ್ಲಿ 3ನೇ 2ರಷ್ಟು ದೂರ ಪ್ರಯಾಣ ಮಾಡಿದ್ದು, ಆಗಸ್ಟ್ 1 ರಂದು ಭೂಮಿಯ ಕಕ್ಷೆಯಿಂದ ಬೇರ್ಪಟ್ಟು ಚಂದ್ರನ ಕಡೆಗೆ ಪ್ರಯಾಣ ಬೆಳಸಿತ್ತು. ಹೀಗಾಗಿ ಇಂದು ಸಂಜೆ 7 ಗಂಟೆ ಸುಮಾರಿಗೆ ನೌಕೆಯು ಚಂದ್ರನ ಕಕ್ಷೆಯನ್ನು ಸೇರಲಿದೆ.

ಭಾರತದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ- 3 ಅನ್ನು ಭಾರೀ ನಿರೀಕ್ಷೆಯನ್ನಿಟ್ಟುಕೊಂಡು ಭೂಮಿಯಿಂದ ನಭಕ್ಕೆ ಹಾರಿಸಲಾಗಿತ್ತು. ಅಂದಿನಿಂದ ಪ್ರಯಾಣದಲ್ಲೇ ಇರುವ ನೌಕೆಯು ಭೂಮಿಯ ಮೇಲಿನ 5 ಕಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತ್ತು. ಆಗಸ್ಟ್ 4 ರ ವೇಳೆಗೆ ಸ್ಪೇಸ್‍ಕ್ರಾಫ್ಟ್ ಸುಮಾರು 2.6 ಲಕ್ಷ ಕಿ.ಮೀ ದೂರ ಕ್ರಮಿಸಿತ್ತು. ಈ ಬಗ್ಗೆ ಇಸ್ರೋ ಸಂಸ್ಥೆಯು ಪ್ರತಿಯೊಂದನ್ನು ಮಾಹಿತಿ ತಿಳಿಸುತ್ತಲೇ ಬರುತ್ತಿದೆ. ಅದರಂತೆ ಇವತ್ತು ಚಂದ್ರನ ಕಕ್ಷೆಯನ್ನು ನೌಕೆ ಸೇರ್ಪಡೆ ಆಗಲಿದೆ. ಇದರೊಂದಿಗೆ ಆಗಸ್ಟ್ 23 ರಂದು ನೌಕೆಯಲ್ಲಿರುವ ಲ್ಯಾಂಡರ್ ಅನ್ನು ಚಂದ್ರನ ಮೇಲೆ ಮೃದುವಾಗಿ ಇಳಿಸಲು ಪ್ರಯತ್ನಿಸಲಾಗುತ್ತದೆ.
ಒಂದು ವೇಳೆ ಈ ಮೃದು ಲ್ಯಾಂಡಿಂಗ್ ಯಶಸ್ವಿಯಾದರೇ ಭಾರತದ ಕೀರ್ತಿ ವಿಶ್ವಮಟ್ಟದಲ್ಲಿ ಸದ್ದು ಮಾಡಲಿದೆ. ಜೊತೆಗೆ ಈ ಸಾಧನೆ ಮಾಡಿದ 4ನೇ ರಾಷ್ಟ್ರ ಎಂಬ ಖ್ಯಾತಿ ಭಾರತ ಪಡೆಯಲಿದೆ. ಚಂದ್ರನ ಅಂಗಳದಲ್ಲಿ ಲ್ಯಾಂಡರ್ ಇಳಿದ ತಕ್ಷಣ ಅದರ ಒಳಗಿಂದ ರೋವರ್ ಹೊರ ಬಂದ ತಕ್ಷಣವೇ ಇಲ್ಲಿಂದಲೇ ಚಂದ್ರನ ಮೇಲೆ ಭಾರತದ ನೂತನ ಅಧ್ಯಯನ ಪ್ರಾರಂಭವಾಗಲಿದೆ. ಎಂಬ ಮಾಹಿತಿ ಲಭ್ಯವಾಗಿದೆ.



