ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಎಫೆಕ್ಟ್ನಿಂದ ಬಿಪಿಎಲ್ ಕಾರ್ಡ್‍ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಶುರುವಾಗಿದ್ದು, ಈಗಾಗಲೇ 5 ಕೆ.ಜಿ ಅಕ್ಕಿ ಬದಲು ಸಿದ್ದರಾಮಯ್ಯ ಸರ್ಕಾರ ಹಣ ನೀಡುತ್ತಿದೆ. ಇದು ಜನರಿಗೆ ಮತ್ತಷ್ಟು ಖುಷಿ ತಂದಿದೆ.

ಇನ್ನೂ ಬಿಪಿಎಲ್ ಕಾರ್ಡ್‍ನವರಿಗೆ ಮಾತ್ರ ಈ ಕೃಷಿ ಭಾಗ್ಯವಿತ್ತು ಇದರಿಂದಾಗಿ ಎಪಿಎಲ್ ಕಾರ್ಡ್‍ನವರು ನಾವು ಸಿದ್ದರಾಮಯ್ಯ ಸರಕಾರಕ್ಕೆ ನಾವು ವೋಟ್ ಹಾಕಿಲ್ವ ಅಂತ ಸಾರ್ವಜನಿಕರು ಮಾತಾನಾಡಿಕೊಳ್ತ ಇದ್ರು. ಇದೀಗ ಬಿಪಿಎಲ್-ಎಪಿಎಲ್ ಕಾರ್ಡುದಾರರಿಗೆ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಗುಡ್‍ನ್ಯೂಸ್ ನೀಡಿದ್ದಾರೆ.
ಅನ್ನರಾಮಯ್ಯ ಸರ್ಕಾರದ ಗ್ಯಾರಂಟಿಗಳಲ್ಲಿ 10 ಕೆ.ಜಿ ಅಕ್ಕಿಭಾಗ್ಯ ಒಂದಾಗಿದ್ದು. ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಸರ್ಕಾರ ಉಚಿತ ಪಡಿತರ ಅಕ್ಕಿ ನೀಡ್ತಿದೆ. ಸದ್ಯ 5 ಕೆ.ಜಿ ಅಕ್ಕಿ ಬದಲಾಗಿ ಕೆಜಿ 34 ರೂನಂತೆ ಹಣ ನೀಡ್ತಿದ್ದು ಪೂರ್ಣ ಪ್ರಮಾಣದಲ್ಲಿ ಅಕ್ಕಿ ನೀಡಲು ಸಜ್ಜಾಗ್ತಿದೆ. ಈ ನಡುವೆ ಬಿಪಿಎಲ್, ಎಪಿಎಲ್ ಕಾರ್ಡ್ ವಂಚಿತರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ.

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಬಿಪಿಎಲ್ ಕಾರ್ಡ್‍ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಆದರೆ ಜನರ ಎಷ್ಟೇ ಪ್ರಯತ್ನ ಮಾಡಿದ್ರೂ ಹೊಸ ಕಾಡ್ರ್ಗೆ ಅರ್ಜಿ ಸಲ್ಲಿಕೆ ಮಾಡಲು ಸಾಧ್ಯವಾಗಿರಲಿಲ್ಲ. ಚುನಾವಣೆ ನೀತಿ ಸಂಹಿತೆ ಜಾರಿಯಾದಗಿನಿಂದ ಬಿಪಿಎಲ್ ಕಾರ್ಡ್‍ಗೆ ಅರ್ಜಿ ಸ್ವೀಕಾರವನ್ನ ಆಹಾರ ಇಲಾಖೆ ಸ್ಥಗಿತ ಮಾಡಿತ್ತು.
ಹೆಲ್ತ್ ಎಮರ್ಜೆನ್ಸಿಗೂ ಬಿಪಿಎಲ್ ಕಾರ್ಡ್ ಸಿಗದೇ ಬಡವರು ಪರದಾಡುತ್ತಿದ್ದರು. ಆದರೀಗ ರಾಜ್ಯ ಸರ್ಕಾರ ಹೊಸ ಕಾರ್ಡ್‍ಗಾಗಿ ಕಾಯ್ತಿರುವ ಜನರಿಗೆ ಸಂತಸದ ವಿಷಯವೊಂದಿದೆ. ಹೌದು ಇಂದಿನಿಂದ ಬಿಪಿಎಲ್, ಎಪಿಎಲ್‍ಗೆ ಅರ್ಜಿ ಸ್ವೀಕಾರ ಶುರುವಾಗಿದೆ.
ಕೊನೆಗೂ 3 ತಿಂಗಳ ಬಳಿಕ ಬಿಪಿಎಲ್ ಕಾರ್ಡ್‍ಗೆ ಅರ್ಜಿ ಸ್ವೀಕರಿಸುತ್ತಿದ್ದು, . ಆಹಾರ ಇಲಾಖೆಯ ಫೋರ್ಟಲ್ಇಂದಿನಿಂದ ಒಪನ್ ಆಗಿದೆ. ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಆಹಾರ ಇಲಾಖೆ ಹೊಸ ಅಪ್ಲಿಕೇಷನ್ ಪಡೆಯುವುದನ್ನೇ ನಿಲ್ಲಿಸಿಬಿಟ್ಟಿದೆ. ಈ ಬಗ್ಗೆ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿಯೇ ಪ್ರಕಟ ಮಾಡಿತ್ತು. ಅನಾರೋಗ್ಯದಂಥ ಎಮರ್ಜೆನ್ಸಿ ಇದ್ರರೂ ಬಿಪಿಎಲ್ ಕಾರ್ಡ್ ವಿತರಣೆ ಮಾಡ್ತಿರಲಿಲ್ಲ. ಇನ್ನು ಹೊಸದಾಗಿ ಬಿಪಿಎಲ್ ಕಾರ್ಡ್ ಪಡೆಯಲು 3 ಲಕ್ಷ ಮಂದಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.



