ದ್ರಾಕ್ಷಿಯನ್ನು ಸಾಮಾನ್ಯವಾಗಿ “ಹಣ್ಣುಗಳ ರಾಣಿ” ಎಂದು ಕರೆಯುತ್ತಾರೆ, ದ್ರಾಕ್ಷಿ ಎಂದ ಕೂಡಲೆ ನಮಗೆ ಹುಳಿಯ ನೆನಪಾಗಿ ಬಾಯಲ್ಲಿ ನೀರೂರುವುದು ಸಾಮಾನ್ಯ. ಇದೇ ದ್ರಾಕ್ಷಿಯ ಮೂಲ ಗುಣ ಎನ್ನಬಹುದು. ದ್ರಾಕ್ಷಿಯಲ್ಲಿ ಕೆಂಪು, ಹಸಿರು ಹಾಗೂ ನೀಲಿ/ಕಪ್ಪು. ಈ ಅದ್ಭುತ ಮತ್ತು ಸ್ವಾದಿಷ್ಟವಾದ ಹಣ್ಣು ಇರುತ್ತದೆ. ಇತ್ತೀಚೆಗೆ ಬೀಜರಹಿತ ದ್ರಾಕ್ಷಿಗಳು ಬರುತ್ತಿವೆ. ದ್ರಾಕ್ಷಿ ಜೆಲ್ಲಿ, ದ್ರಾಕ್ಷಿ ಜ್ಯಾಮ್, ದ್ರಾಕ್ಷಿ ರಸ ಒಣದ್ರಾಕ್ಷಿ ಮತ್ತು ವೈನ್ ಗಳ ರೂಪದಲ್ಲಿ ದ್ರಾಕ್ಷಿಯು ಸಿಗುತ್ತದೆ. ಇನ್ನು ದ್ರಾಕ್ಷಿ ಹಣ್ಣುಗಳು ನಮ್ಮ ಆರೋಗ್ಯದ ಮೇಲೆ ಏನೆಲ್ಲಾ ಒಳ್ಳೆಯ ಪರಿಣಾಮಗಳನ್ನು ಬೀರುತ್ತವೆ ಎಂದು ನೋಡೋಣ!
ರಕ್ತದ ಒತ್ತಡ ನಿಯಂತ್ರಣ
ದ್ರಾಕ್ಷಿ ಹಣ್ಣಿನ ರಸದಲ್ಲಿ ಕಂಡುಬರುವ ಫ್ಲೇವನಾಯ್ಡ್ ಅಂಶಗಳು ಮತ್ತು ಆಂಟಿಆಕ್ಸಿಡೆಂಟ್ ಗಳು ದುರ್ಬಲವಾಗಿರುವ ಹೃದಯದ ಮಾಂಸಖಂಡಗಳಿಗೆ ಶಕ್ತಿ ನೀಡಿ ರಕ್ತನಾಳಗಳಲ್ಲಿ ರಕ್ತ ಸಂಚಾರವನ್ನು ಅಭಿವೃದ್ಧಿ ಮಾಡುತ್ತವೆ. ಇದರಿಂದ ರಕ್ತದ ಒತ್ತಡ ನಿಯಂತ್ರಣವಾಗುತ್ತದೆ.
ಕಾನ್ಸರ್ ತಡೆಗಟ್ಟಲು ಸಹಾಯಕ
ದ್ರಾಕ್ಷಿಯಲ್ಲಿ ಗ್ಲೂಕೋಸ್, ಮೆಗ್ನೀಸಿಯಮ್ ಮತ್ತು ಸಿಟ್ರಿಕ್ ಆಮ್ಲದಂತಹ ಅನೇಕ ಅಂಶಗಳು ಕಂಡುಬರುತ್ತವೆ. ದ್ರಾಕ್ಷಿಯು ಮುಖ್ಯವಾಗಿ ಕ್ಷಯರೋಗ, ಕ್ಯಾನ್ಸರ್ ಮತ್ತು ರಕ್ತದ ಸೋಂಕಿನಂತಹ ರೋಗಗಳಿಗೆ ಪ್ರಯೋಜನಕಾರಿಯಾಗಿದೆ. ದ್ರಾಕ್ಷಿಯು ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಗಳನ್ನು ತಡೆಗಟ್ಟಲು ಸಹ ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.
ತ್ವಚೆಯ ರಕ್ಷಣೆ
ದ್ರಾಕ್ಷಿಗಳು ಹೆಚ್ಚಿನ ಆಂಟಿವೈರಲ್ ಗುಣಲಕ್ಷಣಗಳನ್ನು ಹೊಂದಿವೆ. ಇದು ಚರ್ಮಕ್ಕೆ ಸಂಬಂಧಿಸಿದ ಅಲರ್ಜಿಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಆಂಟಿವೈರಲ್ ಗುಣಲಕ್ಷಣಗಳು ಪೋಲಿಯೊ, ಹರ್ಪಿಸ್ ಮತ್ತು ಹರ್ಪಿಸ್‌ನಂತಹ ವೈರಸ್‌ಗಳ ವಿರುದ್ಧ ಹೋರಾಡಲು ಸಹ ಸಹಾಯ ಮಾಡುತ್ತದೆ.
ಮಧುಮೇಹಿಗಳಿಗೆ ಉತ್ತಮ
ಮಧುಮೇಹ ಇರುವವರು ದ್ರಾಕ್ಷಿಯನ್ನು ಸೇವಿಸಬೇಕು. ಇದರಿಂದ ದೇಹದಲ್ಲಿ ಸಕ್ಕರೆ ಅಂಶ ಕಡಿಮೆಯಾಗುತ್ತದೆ. ಇದಲ್ಲದೆ, ಇದು ಕಬ್ಬಿಣದ ಅತ್ಯುತ್ತಮ ಮೂಲವಾಗಿದೆ.
ಕಣ್ಣಿನ ಕಾಳಜಿಗೆ ಉತ್ತಮ
ದ್ರಾಕ್ಷಿಯಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ. ಇದು ಕಣ್ಣುಗಳಿಗೆ ತುಂಬಾ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಕಣ್ಣಿನ ಸಮಸ್ಯೆ ಇರುವವರು ತಮ್ಮ ಆಹಾರದಲ್ಲಿ ದ್ರಾಕ್ಷಿಯನ್ನು ಸೇರಿಸಿಕೊಳ್ಳಬಹುದು.
ಯಾವುದೇ ಹಣ್ಣಾದರೂ ಅತಿಯಾದರೆ ಅಮೃತವು ವಿಷವಾಗುತ್ತದೆ. ಹಾಗಾಗಿ ನಿಯಮಿತ ಸೇವನೆಯು ಆರೋಗ್ಯವನ್ನು ವೃದ್ಧಿಸುತ್ತದೆ. ಸಿಹಿಯಾದ ದ್ರಾಕ್ಷಿ ಹಣ್ಣುಗಳನ್ನು ನಿಯಮಿತವಾಗಿ ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿ ಹಾಗೂ ಆರೋಗ್ಯವಾಗಿರಿ..



