ಕನಸುಗಳು ಚಿಗುರುವ ಮುನ್ನವೇ ಅಂತ್ಯಕಂಡ ದಾರುಣ ಘಟನೆ ನಡೆದಿದೆ. ಬೆಂಗಳೂರಿನ ಖಾಸಗಿ ಶಾಲೆಯ ವಿದ್ಯಾರ್ಥಿ ಶ್ರೇಯಸ್, ಕೇವಲ 13 ವರ್ಷಕ್ಕೆ ತನ್ನ ಜೀವನದ ಪಯಣವನ್ನು ಮುಗಿಸಿದ್ದಾರೆ. ಮದ್ರಾಸ್ ಇಂಟರ್ನ್ಯಾಷನಲ್ ಸರ್ಕ್ಯೂಟ್ನಲ್ಲಿ ನಡೆಯುತ್ತಿದ್ದ ಎಂಆರ್‌ಎಫ್ ಎಂಎಂಎಸ್‌ಸಿ ಎಫ್‌ಎಂಎಸ್‌ಸಿಐ ಭಾರತೀಯ ರಾಷ್ಟ್ರೀಯ ಮೋಟಾರ್ ಸೈಕಲ್ ರೇಸ್ ಚಾಂಪಿಯನ್‌ಶಿಪ್‌ನಲ್ಲಿ ಶ್ರೇಯಸ್ ಹರೀಶ್ ಭಾಗವಹಿಸಿದ್ದರು. ಶನಿವಾರ ನಡೆದ ಚಾಂಪಿಯನ್ಶಿಪ್ನ ಮೂರನೇ ಸುತ್ತಿನ ವೇಳೆ ಅಪಘಾತಕ್ಕೀಡಾಗಿ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.
ಚೆನ್ನೈನಲ್ಲಿ ಮದ್ರಾಸ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ್ದ ರೇಸಿಂಗ್ ಸ್ಪರ್ಧೆಯಲ್ಲಿ ಶ್ರೇಯಸ್ ಶನಿವಾರ ಬೆಳಗ್ಗೆ ಒಂದು ಹಂತವನ್ನು ಕ್ವಾಲಿಫೈ ಆಗಿದ್ದರು. ಬಳಿಕ ಮೂರನೇ ರೌಂಡಿನಲ್ಲಿ ಅಪಘಾತಕ್ಕೀಡಾಗಿದ್ದರಿಂದ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿತ್ತು. ತಕ್ಷಣವೇ ಆಂಬ್ಯುಲನ್ಸ್ನಲ್ಲಿ ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದ್ರೆ ವೈದ್ಯರು ಪರೀಕ್ಷಿಸಿ, ಶ್ರೇಯಸ್ ಮೃತಪಟ್ಟಿರುವ ಬಗ್ಗೆ ದೃಢಪಡಿಸಿದ್ದಾರೆ.
ಶ್ರೇಯಸ್ ತನ್ನ ರೇಸಿಂಗ್ ಪ್ರತಿಭೆಯಿಂದ ಹೊಸ ಅಲೆ ಸೃಷ್ಟಿಸುತ್ತಿದ್ದರು. ಘಟನೆಯಾದ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಕಿರಿ ಮತ್ತು ಪ್ರತಿಭಾನ್ವಿತ ರೈಡರ್ ಅನ್ನು ಕಳೆದುಕೊಂಡಿರುವುದು ದುರಂತ ಎಂದು ಎಂಎಂಎಸ್‌ಸಿ ಅಧ್ಯಕ್ಷ ಅಜಿತ್ ಥಾಮಸ್ ಕಂಬಿನಿ ಮಿಡಿದಿದ್ದಾರೆ. ಈ ಮೋಟಾರ್ ಸೈಕಲ್ ರೇಸ್ ಚಾಂಪಿಯನ್ಶಿಪ್ಅನ್ನು ಶನಿವಾರ ಮತ್ತು ಭಾನುವಾರ ಆಯೋಜಿಸಲಾಗಿತ್ತು. ಘಟನೆಯ ಬಳಿಕ ಈ ಟೂರ್ನಿಯನ್ನು ರದ್ದುಗೊಳಿಸಿ, ರೈಡರ್ ಸಾವಿಗೆ ಎಂಎಂಎಸ್‌ಸಿ ಸಂತಾಪ ಸೂಚಿಸಿದೆ.




One Response
ಯಾಕೆ ಸಾವು ಸಂಭಾವಿಸಿತು. ಹೆಲ್ಮೆಟ್ ಡೂಪ್ಲಿಕೇಟ್ ಆಗಿತ್ತಾ ❓️ಇಷ್ಟು ದೊಡ್ಡ ಮಟ್ಟದ compitation ಇರುವಾಗ ಕಾಂಪಿಟೇಷನ್ ಭಾಗವಹಿಸುವ ಎಲ್ಲಾರ ಹೆಲ್ಮೆಟ್, ಧರಿಸುವಂತಹ ಎಲ್ಲಾ ಸೇಫ್ಟಿ ಶೂಗಳನ್ನು ಪರಿಶೀಲಿಸಿ ನಂತರ ಅವಕಾಶ ಕಲ್ಪಿಸಬೇಕು. ಇಲ್ಲಾಂದ್ರೆ ಈ ರೀತಿ ಅವಘಡ ಸಂಭವ ಜಾಸ್ತಿ ಆಗುತ್ತೆ.