ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಪುತ್ತೂರು ದರ್ಬೆ ಬೈಪಾಸ್ ಸರ್ಕಲ್ ಬಳಿ ಜೆಸಿಬಿ ಹಾಗೂ ಆಲ್ಟೋ ಕಾರಿನ ನಡುವೆ ಢಿಕ್ಕಿ ಸಂಭವಿಸಿದ ಘಟನೆ ಆ.6 ರಂದು ನಡೆದಿದೆ.

ಪುತ್ತೂರಿನಿಂದ ಮೊಟ್ಟೆತ್ತಡ್ಕ ಕಡೆಗೆ ಮನೋಜ್ ಎಂಬವರು ಚಲಾಯಿಸುತ್ತಿದ್ದ ಆಲ್ಟೋ ಕಾರಿಗೆ ಜೆಸಿಬಿ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಮುಂಭಾಗ ಜಖಂಗೊಂಡಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.



