ಬಂಟರ ಸಂಘ ಸಾಲೆತ್ತೂರು ವಲಯದಿಂದ ಆಯೋಜಿಸಲಾದ “ಆಟಿಡೊಂಜಿ ಬಂಟೆರ್ನ ಸ್ನೇಹಕೂಟ” ವಿಜಯ್ ಶ್ರೀ ಕಲ್ಯಾಣ ಮಂಟಪ ಕುಡ್ತಮುಗೀರುವಿನಲ್ಲಿ ವಿಜ್ರಂಭಣೆಯಿಂದ ನಡೆಯಿತು.
ಬೆಳಗ್ಗೆ ಗಂಟೆ ಒಂಬತ್ತುಕ್ಕೆ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಾಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಬಂಟರ ಸಂಘ ಬಂಟ್ವಾಳದ ಕಾರ್ಯದರ್ಶಿ ಶ್ರೀ ಜಗನ್ನಾಥ ಚೌಟ ಮಾಣಿ ವಹಿಸಿಕೊಂಡರು.
ಶ್ರೀ ದೇವಣ್ಣ ಆಳ್ವ ಎರ್ಮೆನಿಲೆ ಪ್ರಗತಿಪರ ಕೃಷಿಕರು, ಶ್ರೀ ಜತ್ತಪ್ಪ ಪೂಂಜ ಕೊಡಂಗೆ ಪ್ರಗತಿಪರ ಕೃಷಿಕರು, ಶ್ರೀ ಕೆ. ಎಂ. ಶಿವರಾಮ ಶೆಟ್ಟಿ, ನಿವೃತ್ತ ಸೀನಿಯರ್ ಮ್ಯಾನೇಜರ್ ವಿಜಯ ಬ್ಯಾಂಕ್ ಗೌರವ ಉಪಸ್ಥಿತರಿದ್ದರು. ಕಾರ್ಯಕ್ರಮದ ಉದ್ಘಾಟನೆಯ ಬಳಿಕ ಸಮಾಜದ ಬಂಟ ಬಂಧುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ವಿವಿಧ ಸ್ಪರ್ಧೆಗಳು ರಸಮಂಜರಿ ಮನೋರಂಜನಾ ಕಾರ್ಯಕ್ರಮ ಮುಂತಾದವುಗಳು ಜರುಗಿದವು.
ಮಧ್ಯಾಹ್ನ 12ರ ನಂತರ ಸಭಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶ್ರೀದೇವಪ್ಪ ಶೇಖರ ಅಧ್ಯಕ್ಷರು ಬಂಟರ ಸಂಘ ಸಾಲೆತ್ತೂರು ವಹಿಸಿಕೊಂಡರು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದಂತಹ ಶ್ರೀ ಲೋಕೇಶ್ ಶೆಟ್ಟಿ- ಕೋಶಾಧಿಕಾರಿ ಬಂಟರ ಸಂಘ ಬಂಟ್ವಾಳ, ಶ್ರೀಮತಿ ರಮಾ ಎಸ್ ಭಂಡಾರಿ – ಅಧ್ಯಕ್ಷರು ಮಹಿಳಾ ಬಂಟರ ಸಂಘ ಬಂಟ್ವಾಳ, ಶ್ರೀ ಭುಜಂಗ ರೈ ಪಡಾರಗುತ್ತು – ಆಡಳಿತ ಮೊಕ್ತೇಸರರು ಶ್ರೀ ಮಲರಾಯಿ ಮೂವರ್ ದೈವಗಳು ಕಾಪು ಮಜಲು, ಶ್ರೀ ಲಕ್ಷ್ಮೀನಾರಾಯಣ ಅಡ್ಯಂತಾಯ – ಮಾಜಿ ಅಧ್ಯಕ್ಷರು ವಿಟ್ಲಪಡ್ನೂರು ವ್ಯವಸಾಯ ಸೇವಾ ಸಹಕಾರಿ ಸಂಘ ಕೊಡಂಗಾಯಿ, ಶ್ರೀ ಗಿರೀಶ್ ಭಂಡಾರಿ ಕುಳಾಲು – ಕೋಶಾಧಿಕಾರಿ ಶ್ರೀ ಧೂಮಾವತಿ ಬಂಟ ದೈವಗಳ ಸೇವಾ ಟ್ರಸ್ಟ್ (ರಿ) ಸಭೆಯನ್ನುದ್ದೇಶಿಸಿ ಮಾತನಾಡಿದರು.
ತದನಂತರ S.S.L.C ಮತ್ತು P.U.C ಯಲ್ಲಿ ಶೇಕಡಾ 90% ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿ – ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಶ್ರೀ ಭಾಗ್ಯರಾಜ್ ಶೆಟ್ಟಿ ಹರೇಕಳ ನಿರೂಪಿಸಿದರು.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…