ಮುಲ್ಕಿ: ಪುನರೂರು ಶ್ರೀ ಬ್ರಹ್ಮಮುಗೇರ ದೈವಸ್ಥಾನದ ಪ್ರಾಂಗಣದಲ್ಲಿ”ಸೇವಾನಿಧಿ ಪುನರೂರು” ಸಂಸ್ಥೆಯ ಸಭೆ ಸಹಾಯ ಹಸ್ತ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೇವಾ ನಿಧಿಯ ಗೌರವಾಧ್ಯಕ್ಷ ಸುರೇಶ್ ರಾವ್ ನೀರಳಿಕೆ ವಹಿಸಿದ್ದರು
ಮುಖ್ಯ ಅತಿಥಿಗಳಾಗಿ ರವಿ ಶೆಟ್ಟಿ ಪುನರೂರು ಗುತ್ತು ಮಾತನಾಡಿ ಸಮಾಜದಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಅಭಿನಂದನೀಯ ಎಂದರು.
ಸೇವಾ ನಿಧಿ ಸಂಸ್ಥೆಯ ಅಧ್ಯಕ್ಷ ಪ್ರಶಾಂತ್ ಪುನರೂರು, ಕಾರ್ಯದರ್ಶಿ ಗೋವರ್ಧನ್ ಶೆಟ್ಟಿಗಾರ್, ಹಾಗೂ ಸೇವಾನಿಧಿ ಸದಸ್ಯರು ಉಪಸ್ಥಿತರಿದ್ದರು. ಸೇವಾನಿಧಿಯ “ವಿಧ್ಯಾ ನಿಧಿ”ಯನ್ನು ಶಿಮಂತೂರು ಶಾರದಾ ಮಾದರಿ ಶಾಲೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಾದ ದೀಕ್ಷಿತ್ ಪಿ., ಸ್ಪಂದನ, ವೈಭವಿ ಮತ್ತು ವೈಷ್ಣವಿ ರವರಿಗೆ ಒಟ್ಟು ರೂ.48, 000ರೂ ನೀಡಲಾಯಿತು.




