ಉಳ್ಳಾಲ : ನಿಷೇಧಿತ ಎಂಡಿಎಂಎ ಮಾರಾಟ ಮಾಡುತ್ತಿದ್ದ, ವ್ಯಕ್ತಿವೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಶಾಂತಿಬಾಗ್ ನಿವಾಸಿ ಮಹಮ್ಮದ್ ಶರೀಫ್ ಯಾನೆ ಫೈಝಲ್ ಎಂದು ಗುರುತಿಸಲಾಗಿದೆ.
ಪೊಲೀಸರು ಬಂಧಿತನಿಂದ 12 ಗ್ರಾಂ ಬಂದಿ ಎಂಎ ಮಾದಕ ವಸ್ತು ಹಾಗೂ ಎರಡು ಮೊಬೈಲ್ ಸಮೇತ ಮಾದಕ ವಸ್ತುವನ್ನು ಮಾರಾಟ ಮಾಡಲು ಉಪಯೋಗಿಸಿದ ಆಟೋ ರಿಕ್ಷಾವನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ವಶಕ್ಕೆ ಪಡೆದ ಒಟ್ಟು ಸ್ವತ್ತುಗಳ ಮೌಲ್ಯ 95,000 ಆಗಬಹುದು ಎಂದು ಅಂದಾಜಿಸಲಾಗಿದೆ.
ಪೊಲೀಸ್ ಠಾಣಾ ವ್ಯಾಪ್ತಿಯ ಕುಂಪಲದ ಭಗಂಬಿಲ ಸ್ಮಶಾನದ ಮೈದಾನದಲ್ಲಿ ಸಾರ್ವಜನಿಕವಾಗಿ ಎಂಡಿಎಂಎ ಮಾದಕ ವಸ್ತುವನ್ನು ಮಾರಾಟ ಮಾಡುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆ ಪೊಲೀಸರು ದಾಳಿ ನಡೆಸಿದ್ದಾರೆ.



